ಬಂಟ್ವಾಳ

ಮೊಡಂಕಾಪು ಇನ್ಫೆಂಟ್ ಜೀಸಸ್ ಚರ್ಚ್ ನಲ್ಲಿ ಮೊಂತಿ ಫೆಸ್ತ್ ಆಚರಣೆ

ಬಾಲ ಮಾರಿಯಮ್ಮನವರ ಹುಟ್ಟುಹಬ್ಬದ ಆಚರಣೆಯ ಸುಸಂದರ್ಭದಲ್ಲಿ, ಬಾಲ ಮಾರಿಯಮ್ಮನವರ ಪ್ರತಿಮೆಯ ಮೆರವಣಿಗೆಯು ಬೆಳಿಗ್ಗೆ 6:45 ಕಾಯಾರ್ಮಾರ್ ನಿಂದ ಪ್ರಾರಂಭಗೊಂಡು ಆಮ್ಟಾಡಿ ಸೊಸಾಯ್ಟಿ, ನಲ್ಕೆಮಾರ್, ಏರಿಯಾ ಮಾರ್ಗವಾಗಿ 8:00 ಘಂಟೆಗೆ ಮೊಡಂಕಾಪು ಬಾಲ ಯೇಸು ದೇವಾಲಯ ತಲುಪಿತು.

ತೆರೆದ ಆಂಗಣದಲ್ಲಿ ಮರಿಯಮ್ಮನವರ ಗ್ರೋಟ್ಟೋ ಮುಂಭಾಗದಲ್ಲಿ ಹೊಸ ತೆನೆ ಯನ್ನು ಇನ್ಫೆಂಟ್ ಜೀಸಸ್ ಆಂಗ್ಲ ಮಾಧ್ಯಮ ಶಾಲೆಯ ಪ್ರಾಂಶುಪಾಲರಾದ ವಂದನೀಯ ಮೆಲ್ವಿನ್ ಲೋಬೊರವರಿಂದ ಆಶೀರ್ವಚನಗೊಂಡು, ಬಾಲ ಯೇಸು ದೇವಾಲಯದಲ್ಲಿ ದೇವಾಲಯದ ಸಹಾಯಕ ಧರ್ಮಗುರುಗಳಾದ ವಂದನೀಯ ರಾಹುಲ್ ಡೆಕ್ಸ್ಟರ್ ಡಿ ಸೋಜಾರಿಂದ ಶುಭವಾಚನೆ ಯೊಂದಿಗೆ ದೇವಾಲಯದ ಪ್ರಧಾನ ಧರ್ಮಗುರುಗಳಾದ ಆತೀ ವಂದನೀಯ ವಲೇರಿಯನ್ ಡಿಸೋಜರವರಿಂದ ದಿವ್ಯ ಬಲಿಪೂಜೆ ಅರ್ಪಿಸಲಾಯಿತು.

ಅತಿಥಿ ಧರ್ಮಗುರುಗಳಾದ ವಂದನೀಯ ಮರ್ವಿನ್ ಫ್ರ್ಯಾಂಕ್ ಉಪಸ್ಥಿತರಿದ್ದರು. ಈ ಶುಭ ಗಳಿಗೆಯಲ್ಲಿ ನಾಡಿನ ಸಮಸ್ತ ಜನರಿಗೆ ಆರೋಗ್ಯ, ಸುಖ ಹಾಗೂ ಸಮ್ರಧ್ಧಿಯನ್ನು ಆ ಭಗವಂತನು ಕರುಣಿಸಲೆಂದು ಒಕ್ಕೊರಲಿನಿಂದ ಪ್ರಾರ್ಥಿಸಲಾಯಿತು.

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Recent Posts