ಬಂಟ್ವಾಳದಲ್ಲಿ ಹೊಸ ನ್ಯಾಯಾಲಯ ಸಂಕೀರ್ಣದ ಜೊತೆಗೆ ವಕೀಲರ ಭವನದ ಕಾಮಗಾರಿಯ ಪೂರ್ವಭಾವಿ ಸ್ಥಳ ಪರಿಶೀಲನೆಗಾಗಿ ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಾಧೀಶರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಆಡಳಿತಾತ್ಮಕ ನ್ಯಾಯಾಧೀಶರಾದ ಜಸ್ಟಿಸ್ ಬಿ. ಎಂ. ಶ್ಯಾಮ್ ಪ್ರಸಾದ್ ಬಂಟ್ವಾಳ ನ್ಯಾಯಾಲಯಕ್ಕೆ ಆಗಮಿಸಿದರು.
ಈ ಸಂದರ್ಭ ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಾಧೀಶ ಜಸ್ಟಿಸ್ ಎಸ್. ವಿಶ್ವಜಿತ್ ಶೆಟ್ಟಿ, ನ್ಯಾಯಾಲಯ ಕಟ್ಟಡಗಳ ಮೂಲ ಸೌಕರ್ಯ ಮತ್ತು ನಿರ್ವಹಣಾ ಮುಖ್ಯಸ್ಥರು ಹಾಗೂ ನ್ಯಾಯಾಧೀಶರಾದ ಗೌರವಾನ್ವಿತ ಚಂದ್ರಕಲಾ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಪ್ರದಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ರವೀಂದ್ರ ಎಂ ಜೋಶಿ, ಬಂಟ್ವಾಳದ ನ್ಯಾಯಾಧೀಶರುಗಳಾದ ಭಾಗ್ಯಮ್ಮ, ಚಂದ್ರಶೇಖರ ವೈ ತಳವಾರ, ಕೃಷ್ಣಮೂರ್ತಿ. ಎನ್ ಉಪಸ್ಥಿತರಿದ್ದರು. ವಕೀಲರ ಸಂಘ (ರಿ), ಬಂಟ್ವಾಳದ ಅಧ್ಯಕ್ಷರಾದ ರಿಚರ್ಡ್ ಕೋಸ್ತಾ ಎಂ. ಸ್ವಾಗತಿಸಿದರು. ವಕೀಲರ ಸಂಘ(ರಿ), ಬಂಟ್ವಾಳದ ವತಿಯಿಂದ ಗೌರವಾನ್ವಿತ ನ್ಯಾಯಾಧೀಶರನ್ನು ಸನ್ಮಾನಿಸಿ ಗೌರವಿಸಲಾಯಿತು. ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಾಧೀಶರು ಹಾಗೂ ಆಡಳಿತಾತ್ಮಕ ನ್ಯಾಯಾಧೀಶರಾದ ಬಿ. ಎಂ. ಶ್ಯಾಮ್ ಪ್ರಸಾದ್ ಮಾತನಾಡಿ, ಅತೀ ಶೀಘ್ರದಲ್ಲಿ ವಕೀಲರ ಸಂಘ (ರಿ) ಬಂಟ್ವಾಳದ ವಕೀಲರ ಕನಸು, ವಕೀಲರ ಭವನದ ಜೊತೆಗೆ ಹೊಸ ನ್ಯಾಯಾಲಯ ಸಂಕೀರ್ಣ ಕಟ್ಟಡ ಕಾಮಗಾರಿ ಪ್ರಾರಂಭ ಮಾಡುವ ಪ್ರಾಮಾಣಿಕ ಪ್ರಯತ್ನ ಮಾಡುವ ಭರವಸೆ ನೀಡಿದರು. ಕಾಮಗಾರಿಗೆ ವಕೀಲರ ಸಂಘ (ರಿ) ಬಂಟ್ವಾಳದ ಸದಸ್ಯರು ಸಹಕಾರವನ್ನು ನೀಡುವಂತೆ ಮನವಿ ಮಾಡಿದರು.