ಸಜಿಪಮುನ್ನೂರು ಗ್ರಾಮದಲ್ಲಿ ಹಾಡಹಗಲೇ ಮನೆಯಿಂದ ಕಳವು ಮಾಡಿದ ಘಟನೆ ನಡೆದಿದ್ದು, ಈ ಕುರಿತು ಮೈಕಲ್ ಡಿಸೋಜಾ ನೀಡಿದ ದೂರಿನಂತೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅವರು ಸಜಿಪಮುನ್ನೂರು ಗ್ರಾಮದಲ್ಲಿರುವ ಬಾಡಿಗೆ ಮನೆಗೆ ಲಾಕ್ ಹಾಕಿ ತನ್ನ ಮಕ್ಕಳ ಜೊತೆ ಮನೆಯಿಂದ ಹೋಗಿದ್ದು, ಮದ್ಯಾಹ್ನ 2.45 ಗಂಟೆಗೆ ಮಗಳು ಮನೆಗೆ ಬಂದು ನೋಡಿ ಮನೆಯ ಬಾಗಿಲು ತೆರೆದಾಗ ಗೊಡ್ರೆಜ್ ನಲ್ಲಿದ್ದ ಬಟ್ಟೆಬರೆಗಳು ಚಿಲ್ಲಾಪಿಲ್ಲಿ ಆಗಿರುವುದು ಕಂಡುಬಂದಿರುತ್ತದೆ. ವಿಷಯ ತಿಳಿದ ಡಿಸೋಜಾ, ಕೂಡಲೇ ಮನೆಗೆ ಬಂದು ನೋಡಿದಾಗ ಯಾರೋ ಕಳ್ಳರು ಮನೆಯ ಎದುರಿನ ಬಾಗಿಲು ಮುರಿದು ಮನೆಯೊಳಗಿನ ಕೋಣೆಯಲ್ಲಿಟ್ಟ 2 ಗೊಡ್ರೆಜ್ ಗಳ ಬಾಗಿಲು ಮುರಿದು ಒಟ್ಟು 115 ಗ್ರಾಂ ತೂಕದ ಸುಮಾರು 5,36,000 ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ಹಾಗೂ ಸುಮಾರು 3,000 ರೂಪಾಯಿ ಮೌಲ್ಯದ ಬೆಳ್ಳಿಯ ಸಾಮಾಗ್ರಿಯನ್ನು ಕಳವು ಮಾಡಿರುತ್ತಾರೆ ಎಂಬುದಾಗಿ ನೀಡಿದ ದೂರಿನಂತೆ ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.