ಸಾಂಸ್ಕೃತಿಕ

ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಬಂಟ್ವಾಳ ತಾಲೂಕಿನ ಅಧ್ಯಕ್ಷರಾಗಿ ಡಾ. ಸುರೇಶ್ ನೆಗಳಗುಳಿ

ಬಂಟ್ವಾಳ: ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಬಂಟ್ವಾಳ ತಾಲೂಕಿನ ಅಧ್ಯಕ್ಷರಾಗಿ ಡಾ. ಸುರೇಶ್ ನೆಗಳಗುಳಿ ಆಯ್ಕೆಯಾಗಿರುವುದಾಗಿ ಗೌರವ ಸಲಹೆಗಾರ ಜಯಾನಂದ ಪೆರಾಜೆ ತಿಳಿಸಿದ್ದಾರೆ.

ಪದಾಧಿಕಾರಿಗಳಾಗಿ ಈಶ್ವರ ಪ್ರಸಾದ್ (ಉಪಾಧ್ಯಕ್ಷ), ಚೇತನ್ ಮುಂಡಾಜೆ (ಕಾರ್ಯದರ್ಶಿ), ಸೀತಾಲಕ್ಷ್ಮೀ ವರ್ಮ (ಜೊತೆ ಕಾರ್ಯದರ್ಶಿ), ಪ್ರಶಾಂತ್ ಕಡ್ಯ (ಕೋಶಾಧಿಕಾರಿ), ಅಶೋಕ್ ಕುಮಾರ್ ಕಲ್ಯಾಟೆ (ಕೂಟ ಪ್ರಮುಖ್), ಚಿನ್ನಪ್ಪ ಎಂ (ಮಾಧ್ಯಮ ಪ್ರಮುಖ್),  ಸದಸ್ಯರಾಗಿ ಉದಯ ಸಂತೋಷ್, ಬಾಲಕೃಷ್ಣ ಕೇಪುಳು, ರಮೇಶ್ ಬಾಯಾರ್, ಜಯರಾಮ ಪಡ್ರೆ, ಕುಮಾರಸ್ವಾಮಿ ಕನ್ಯಾನ, ಚಂದ್ರಶೇಖರ ಕೈಯಬೆ, ರಶ್ಮಿತಾ ಸುರೇಶ ಜೋಗಿಬೆಟ್ಟು, ಚೈತನ್ಯಪ್ರಕಾಶ ಕೆದಿಲ, ಗೋವಿಂದ ನಾರಾಯಣ ಆಯ್ಕೆಯಾಗಿರುವುದಾಗಿ ಅವರು ಮಾಹಿತಿ ನೀಡಿದ್ದಾರೆ. ಇದರ ಪದಗ್ರಹಣ ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದಲ್ಲಿ ಸೆ.2ರಂದು ಮಧ್ಯಾಹ್ನ 2 ಗಂಟೆಯಿಂದ ನಡೆಯಲಿದ್ದು, ಜಿಲ್ಲಾಧ್ಯಕ್ಷ ಪಿ.ಬಿ.ಹರೀಶ್ ರೈ ಅತಿಥಿಗಳಾಗಿರುವರು. ಡಾ. ಕಲ್ಲಡ್ಕ ಪ್ರಭಾಕರ ಭಟ್ ಉದ್ಘಾಟಿಸುವರು. ಬಳಿಕ ಕವಿಗೋಷ್ಠಿ ಸಹಿತ ನಾನಾ ಕಾರ್ಯಕ್ರಮಗಳು ನಡೆಯಲಿವೆ. ಡಾ .ಸುರೇಶ್ ನೆಗಳಗುಳಿ ಅವರ ವಿವರಗಳಿಗೆ ಮುಂದೆ ಓದಿರಿ.

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ‌ ತಾಲೂಕು ಅಳಿಕೆ ಗ್ರಾಮದ ನೆಗಳಗುಳಿ ಮೂಲದ ಡಾ ಸುರೇಶ ನೆಗಳಗುಳಿ ಯವರು ತಿಮ್ಮಣ್ಣ ಭಟ್ ಸಾವಿತ್ರಿ ದಂಪತಿಗಳ ಪುತ್ರ ಡಾ ಸಾವಿತ್ರಿಯವರ ಪತಿ, ಸುಹಾಸ ಶುಭಾ ದಂಪತಿಗಳ ತಂದೆಯಾಗಿದ್ದು ಮಿಶ್ರ ಪದ್ಧತಿ ಶಸ್ತ್ರ ಚಿಕಿತ್ಸಕ ,ಮೂಲವ್ಯಾಧಿ ಚರ್ಮರೋಗ ಮೂತ್ರದ ಕಲ್ಲುಗಳ ಕ್ಷಾರ ಚಿಕಿತ್ಸಾ ತಜ್ಞ,ಪ್ರಾಧ್ಯಾಪಕ ಮತ್ರು ಬರಹಗಾರರಾಗಿದ್ದು ಪ್ರಕೃತ ಮಂಗಳಾ ಆಸ್ಪತ್ರೆಯ ವೈದ್ಯರೂ ಆಗಿದ್ದು ಬಜಾಲ್ ಪಕ್ಕಲಡ್ಕದ ಸುಹಾಸ ನಿವಾಸಿಯಾಗಿದ್ದಾರೆ.

ಮೂವತ್ತು ವರ್ಷಗಳಿಂದ ವೈದ್ಯಕೀಯ ಪ್ರಾಂಶುಪಾಲ, ಡೀನ್,ವಿಶ್ವವಿದ್ಯಾಲಯ ಎಕಾಡೆಮಿಕ್ ಕೌನ್ಸಿಲ್ ,ಬೋರ್ಡ್ ,ಫೇಕಲ್ಟಿ ಮುಂತಾದ ಹುದ್ದೆಗಳನ್ನು ನಿಭಾಯಿಸಿರುತ್ತಾರೆ.ಇವರ ಹನ್ನೆರಡು ಸಂಕಲನಲೋಕಾರ್ಪಣೆ ಯಾಗಿದ್ದು, ತುಷಾರ ಬಹುಮಾನಿತ ಚಿತ್ರಕವನ ಸಂಕಲನ,,(,ತುಷಾರ ಬಿಂದು) ತರಹೇವಾರಿ ಮಾದರಿಯ ಆರು ಭಾಷೆಯ ಎರಡು ಗಜ಼ಲ್ ಸಂಕಲನ,(ಪಡುಗಡಲ ತೆರೆಮಿಂಚು, ನೆಗಳಗುಳಿ ಗಜಲ್ಸ್ ), ಗೋವಿನ ಚುಟುಕ (,ಗೋ ಗೀತ) , ಬಹುಮಾನಿತ ಚುಟುಕುಗಳು (ಕಾವ್ಯ ಭೋಜನ,)/ಕಗ್ಗ ಮಾದರಿಯ ಧೀರತಮ್ಮನ ಕಬ್ಬದ ಮೂರು ಸಂಪುಟಗಳು , ತನಗಗಳ ತನಗ ತರಂಗ ಸಂಕಲನ, ಹಲವು‌ ಕವಿಗಳ‌ ಮುಕ್ತಕ‌ ಪುಷ್ಪ , ಚುಟುಕು ಸಾಹಿತ್ಯ ಪರಿಷತ್ತಿನ ಆಸಕ್ತ ಸದಸ್ಯರ ಪರಿಚಯ ಸಹಿತ ಚುಟುಕು ಸಂಕಲನ ರೇಮಂಡ್ ಡಿಕುನ್ಹ ಜೊತೆಗೆ ಸಂಪಾದಿತ ಶುಭ ಪ್ರಕಾಶನದ ಕೃತಿ, ಇವರ ಪ್ರಧಾನ ಲೋಕಾರ್ಪಿತ ಕೃತಿಗಳು.ಕಡಲ ಹೂವು ಗಜ಼ಲ್ ಸಂಕಲನ , ಹಾ.ಮಾ ಸತೀಶ್, ರತ್ನಾ ಟಿ ಭಟ್ ಜೊತೆ ಸೇರಿ ಕಡಲಹನಿ ಒಡಲ ಧ್ವನಿ ಗಜ಼ಲ್ ಸಂಕಲನ ಅಚ್ಚಿನಲ್ಲಿದೆ.ಧೀರತಮ್ಮನ ಕಬ್ಬ ಸಂಪುಟ ೪ ಬೇಗನೇ ಅಚ್ಚಾಗಲಿದೆ. ಮೇಘ ಸ್ಪರ್ಶ ಭಾವಗೀತೆಗಳ ಸಂಕಲನವೂ ಮುಂದೆ ಅಚ್ಚಾಗಲಿದೆ.ಬಂಟ್ವಾಳ ತಾಲೂಕು ೨೧ ನೇ ಕ.ಸಾ.ಪ ಸಮ್ಮೇಳನದ ಸರ್ವಾಧ್ಯಕ್ಷರೂ ,ಚಲನ ಚಿತ್ರ ನಟರಾಗಿಯೂ ಅನುಭವ ಪಡೆದಿದ್ದಾರೆ.ಪ್ರಸ್ತುತ ಅಖಿಲ‌ಭಾರತೀಯ ಸಾಹಿತ್ಯ ಪರಿಷತ್ತಿನ ಬಂಟ್ವಾಳ ತಾಲೂಕು ಅಧ್ಯಕ್ಷರಾಗಿದ್ದಾರೆ. ಇದೀಗ ೨೩-೨೪ ನೇ ಸಾಲಿಗೂ ಮರು ಆಯ್ಕೆಯಾಗಿದ್ದಾರೆ

ಜೇಸೀ ಮಾಜಿ ಅಧ್ಯಕ್ಷರೂ, ಹೆಚ್ ಜಿ ಎಫ್ ಫಲೋಶಿಪ್ ಪಡೆದವರೂ,ಮೂಡುಬಿದಿರೆ ರೋಟರಿ ಮಾಜೀ ಸದಸ್ಯರೂ ಕದ್ರಿಹಿಲ್ಸ್ ಮಂಗಳೂರು ಲಯನ್ ಹಾಲಿ ಸದಸ್ಯರೂ ವೈದ್ಯಕೀಯ ಸಂಘದ ಮಾಜೀ ಅಧ್ಯಕ್ಷರೂ ಕೇಂದ್ರ ಸಾಹಿತ್ಯ ವೇದಿಕೆ ಅಖಿಲಭಾರತ ಸಾಹಿತ್ಯ ಪರಿಷತ್ ಹಾಲೀ ಅಧ್ಯಕ್ಷರೂ ಆಗಿದ್ದು ಮಂತಾ ಚುಸಾಪದ ಮಾಜೀ ಅಧ್ಯಕ್ಷರಾಗಿದ್ದಾರೆ.ಇವರದೇ ಆದ ಶುಭಪ್ರಕಾಶನ ಎಂಬ ಪ್ರಕಾಶನದ ಮೂಲಕ ಪ್ರಕಟಣೆ ಮಾಡುತ್ತಾರೆ ಮಾಡಿಸಿ ಕೊಡುತ್ತಾರೆ.

ವೈದ್ಯಕ ಹಾಗೂ ವೈದ್ಯಕೇತರ ನೆಲೆಯಲ್ಲಿ ನೂರೈವತ್ತರ ಮೇಲೆ ಜಾಲತಾಣ ಪ್ರಶಸ್ತಿ ಮತ್ತು ಮೂವತ್ತರ ಮೇಲೆ ಪೇಟ ಸಹಿತ ವೇದಿಕೆಯ ಪ್ರಶಸ್ತಿ ಪಡೆದಿರುತ್ತಾರೆ.ಇತ್ತೀಚೆಗೆ ಬೆಂಗಳೂರಿನಲ್ಲಿ ಗಜ಼ಲ್ ಕವಿ‌ ಸನ್ಮಾನ ಪ್ರಾಪ್ತವಾಗಿದೆ. ಕೋವಿಡ್ ಕಾಲದಲ್ಲಿ ಸರಕಾರೀ ಆಪ್ತಮಿತ್ರದ ವೈದ್ಯನಾಗಿ ಕೋವಿಡ್ ವಾರಿಯರ್ ಬಿರುದು ಪಡೆದಿರುತ್ತಾರೆ. ಬಹಳ ಹಿಂದೆ ತುರ್ತು ಪರಿಸ್ಥಿತಿ ಕಾಲದಲ್ಲಿ ಸತತ ಆಂತರಿಕ‌ ಹೋರಾಟ, ಕಹಳೆ ಎಂಬ ಕೈ ಬರಹದ ಕಲ್ಲಚ್ಚು ಪತ್ರಿಕೆಯನ್ನು ಮನೆಮನೆಗೆ ವಿತರಣೆ ಮಾಡಿದ್ದು ಉಡುಪಿಯಲ್ಲಿದ್ದ ಕಾಲದ ಕತೆ. ಸ್ವಾತಂತ್ರ್ಯ ಹೋರಾಟದ ಸನ್ಮಾನಿತ ಹಲವರಲ್ಲಿ ಒಬ್ಬನಾಗಿದ್ದರು.

ವಿಳಾಸ: ಡಾ ಸುರೇಶ ನೆಗಳಗುಳಿ, ಶಸ್ತ್ರಚಿಕಿತ್ಸಕ, ಮಿಶ್ರಪದ್ಧತಿ ವೈದ್ಯ,ಮೂಲವ್ಯಾಧಿ ಚರ್ಮರೋಗ ಮೂತ್ರದ ಕಲ್ಲು ಇತ್ಯಾದಿ ಕ್ಷಾರ ತಜ್ಞ , ಸುಹಾಸ, ಬಜಾಲ್ ಪಕ್ಕಲಡ್ಕ ಎಕ್ಕೂರು ರಸ್ತೆ, ಮಂಗಳೂರು 575009, phone: 9448216674, negalagulis@gmail.com

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Recent Posts