ಬಂಟ್ವಾಳ: ಕಾರೊಂದು ರಿಕ್ಷಾಕ್ಕೆ ಡಿಕ್ಕಿ ಹೊಡೆದ ಪರಿಣಾಮವಾಗಿ ರಿಕ್ಷಾ ಚಾಲಕ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಬಿಸಿರೋಡಿನಲ್ಲಿ ನಡೆದಿದೆ.
ಅಟೋ ಚಾಲಕ ಮಹಮ್ಮದ್ ಸಾದಿಕ್ ಎಂಬಾತನಿಗೆ ಗಾಯವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಗೂಡಿನಬಳಿಯಲ್ಲಿರುವ ಆರೋಗ್ಯ ಕೇಂದ್ರಕ್ಕೆ ಸುರಕ್ಷಾ ಅಧಿಕಾರಿಯೋರರ್ವರನ್ನು ರಿಕ್ಷಾದಲ್ಲಿ ಮಹಮ್ಮದ್ ಸಾದಿಕ್ ಕರೆದುಕೊಂಡು ಹೋಗುವ ಸಂದರ್ಭ ಪಾಣೆಮಂಗಳೂರು ಕಡೆಯಿಂದ ಬರುವ ಕಾರೊಂದು ರೈಲು ನಿಲ್ದಾಣದ ಸಮೀಪವಿರುವ ಲಯನ್ಸ್ ಸೇವಾ ಮಂದಿರದ ಪಾರ್ಕ್ ನ ಮುಂಭಾಗದಲ್ಲಿ ರಿಕ್ಷಾಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ರಿಕ್ಷಾ ಪಲ್ಟಿಯಾಗಿದೆ.ರಿಕ್ಷಾ ಚಾಲಕ ಹಾಗೂ ಪ್ರಯಾಣಿಕರಿಗೆ ಗಾಯವಾಗಿದೆ. ಚಾಲಕರಿಗೆ ತೀವ್ರ ಗಾಯವಾಗಿದೆ. ಟ್ರಾಫಿಕ್ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…