ಮೇಲ್ಕಾರಿನಿಂದ ವಿಟ್ಲಕ್ಕೆ ಹೋಗುವ ಖಾಸಗಿ ಬಸ್ಸಿನಲ್ಲಿ ಹಣ, ಎಟಿಎಂ ಕಾರ್ಡು ಮೊದಲಾದ ದಾಖಲಾತಿ ಇದ್ದ ಪರ್ಸ್ ಕಳೆದುಕೊಂಡ ವೀರಕಂಬ ಮಜಿ ಶಾಲಾ ಶಿಕ್ಷಕಿಯ ಪರ್ಸ್ ಕೊನೆಗೂ ಸಿಕ್ಕಿದೆ. ಮೆಲ್ಕಾರ್ ನಿಂದ ವಿಟ್ಲಕ್ಕೆ ಹೋಗುವ ಖಾಸಗಿ ಬಸ್ ನಲ್ಲಿ ಮಜಿ ವೀರಕಂಭ ಶಾಲೆಗೆ ಪ್ರಯಾಣಿಸುತ್ತಿದ್ದ ಶಿಕ್ಷಕಿ ತನ್ನ ಪರ್ಸ್ ಕಳೆದುಕೊಂಡಿದ್ದರು. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪರ್ಸ್ ಸಿಕ್ಕರೆ ಮರಳಿಸುವಂತೆ ಕೋರಲಾಗಿತ್ತು. ಇದೀಗ ಪಡಿಬಾಗಿಲು ಎಂಬಲ್ಲಿ ಬಿದ್ದುಕೊಂಡಿದ್ದ ಪರ್ಸ್ ಅನ್ನು ಅಳಿಕೆ ಶ್ರೀ ಸತ್ಯಸಾಯಿ ವಿದ್ಯಾಕೇಂದ್ರದ ಚಾಲಕ ಜಯಂತ್ ಶೆಟ್ಟಿ ಅಳಿಕೆ ಗಮನಿಸಿದ್ದಾರೆ. ಕೂಡಲೇ ಶಿಕ್ಷಕಿಯನ್ನು ಸಂಪರ್ಕಿಸಿ ಅದನ್ನು ನೀಡಿದ್ದಾರೆ. ಯಾರೋ ಪರ್ಸ್ ನಲ್ಲಿದ್ದ ಹಣವನ್ನು ತೆಗೆದು ಪಡಿಬಾಗಿಲಿನಲ್ಲಿ ಬಿಸಾಡಿ ಹೋಗಿರಬೇಕು ಎಂದು ಸಂಶಯಿಸಲಾಗಿದ್ದು, ದಾಖಲೆಗಳನ್ನು ಹಾಗೆಯೇ ಉಳಿಸಿದ್ದಾರೆ.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…