ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ನೋಂದಣಿ ಉಪಜಿಲ್ಲೆಗಳ ವ್ಯಾಪ್ತಿಯೊಳಗಿನ ಸ್ಥಿರಾಸ್ತಿಗಳ ಮಾರುಕಟ್ಟೆ ಮಾರ್ಗಸೂಚಿ ಬೆಲೆಗಳನ್ನು ಮಾರುಕಟ್ಟೆ ಮೌಲ್ಯಮಾಪನ ಉಪಸಮಿತಿ ಬಂಟ್ವಾಳ ತಾಲೂಕು ಕಚೇರಿಯ 2023-24ನೇ ಸಾಲಿಗೆ ಪರಿಷ್ಕರಣೆ ಮಾಡಿದೆ. ಪರಿಷ್ಕೃತ ದರಪಟ್ಟಿಯ ಕರಡುಪ್ರತಿಯನ್ನು ಸಾರ್ವಜನಿಕರ ಅವಗಾಹನೆಗೆ ತರಲು ಬಂಟ್ವಾಳ ವ್ಯಾಪ್ತಿಯ ತಾಲೂಕು ಕಚೇರಿ, ಉಪನೋಂದಣಿ ಕಚೇರಿಗಳ ಸೂಚನಾ ಫಲಕಗಳಲ್ಲಿ ಆಗಸ್ಟ್ 14ರಂದು ಪ್ರಕಟಿಸಲಾಗಿದೆ. ಸಾರ್ವಜನಿಕರು ಪ್ರಕಟಣೆಗೊಂಡ ದಿನಾಂಕದಿಂದ 15 ದಿನಗಳೊಳಗೆ ಸದಸ್ಯ ಕಾರ್ಯದರ್ಶಿಗಳು, ಮಾರುಕಟ್ಟೆ ಮೌಲ್ಯಮಾಪನ ಉಪಸಮಿತಿ ಬಂಟ್ವಾಳ ಹಾಗೂ ಉಪನೋಂದಣಾಧಿಕಾರಿ ಇವರಿಗೆ ಆಕ್ಷೇಪಣೆ ಇದ್ದಲ್ಲಿ ಸಲ್ಲಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.