ಮಂಗಳೂರು ನಗರದಲ್ಲಿ ಮಟ್ಕಾ ಚೀಟಿ ದಂಧೆ ನಡೆಸುತ್ತಿದ್ದ ಇಬ್ಬರನ್ನು ಬಂಧಿಸಿ ಅವರಿಂದ ರೂ 4.24 ಲಕ್ಷ ನಗದನ್ನು ವಶಪಡಿಸಿಕೊಳ್ಳುವಲ್ಲಿ ಉರ್ವ ಠಾಣ ಪೊಲೀಸರು ಯಶಸ್ವಿಯಾಗಿದ್ದಾರೆ.
ನಗರದ ಚಿಲಿಂಬಿಯ ಗೋಕುಲದಾಸ್ ಶೆಣೈ, ಕೋಡಿಕಲ್ ನ ದೀಪಕ್ ಶೆಟ್ಟಿ ಬಂಧಿತರು. ಉರ್ವ ಪೊಲೀಸ್ ಠಾಣಾ ವ್ಯಾಪ್ತಿಯ ಉರ್ವಾ ಸ್ಟೋರ್ ಮೈದಾನ ಬದಿಯಲ್ಲಿರುವ ಕಾಪೋರೇಶನ್ ಕಟ್ಟಡದ ದಿನಸಿ ಅಂಗಡಿಯ ಮುಂಭಾಗ ಸಾರ್ವಜನಿಕ ಸ್ಥಳದಲ್ಲಿ ಇವರು ಮಟ್ಕಾ ಚೀಟಿ ದಂಧೆ ನಡೆಸುತ್ತಿದ್ದರು.
ಆರೋಪಿಗಳ ವಶದಲ್ಲಿದ್ದ, ಮಟ್ಕಾ ಚೀಟಿ ಗೆ ಸಂಬಂದಿಸಿದ ರೂ 424490 /- ( ನಾಲ್ಕು ಲಕ್ಷದ ಇಪ್ಪತ್ತನಾಲ್ಕು ಸಾವಿರದ ನಾಲ್ಕು ನೂರ ತೊಂಬತ್ತು ರೂಪಾಯಿ ) ನಗದು, ಮೊಬೈಲ್ ಹಾಗೂ ಮಟ್ಕಾ ಬರೆದಿದ್ದ ಚೀಟಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಉರ್ವಾ ಪೊಲೀಸ್ ಠಾಣೆಯಲ್ಲಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಮಂಗಳೂರು ಕೇಂದ್ರ ಉಪವಿಭಾಗದ ಎಸಿಪಿ ಯವರ ನೇತೃತ್ವದಲ್ಲಿ ಉರ್ವಾ ಪೊಲೀಸ್ ಠಾಣಾ ಪಿಐ ಭಾರತಿ, ರವರ ತಂಡ ಹರೀಶ್ ಹೆಚ್.ವಿ ಪಿಎಸ್‌ಐ ಸಫ್ರೀನಾ, ವೆಂಕಟೇಶ್, ರಾಮಚಂದ್ರ, ಸುನೀತ, ಭರಣಿ ದೀಕ್ಷಿತ್, ರವರು ಕಾರ್ಯಚರಣೆಯಲ್ಲಿ ಪಾಲ್ಗೊಂಡಿದ್ದರು.