ರಸ್ತೆಯಲ್ಲಿ ಅಂಡರ್ ಪಾಸ್ ನಿರ್ಮಾಣದ ಸಂದರ್ಭ ಉಂಟಾಗುವ ಸಮಸ್ಯೆಗಳ ಕುರಿತು ಮೆಲ್ಕಾರ್ ಗೆ ಸಂಬಂಧಿಸಿದ ವರ್ತಕರು, ನಾಗರಿಕರು ಮೆಲ್ಕಾರ್ ಸಿಟಿಯನ್ನ ಉಳಿಸಲು ಹೋರಾಟ ಸಮಿತಿಯೊಂದನ್ನು ರಚಿಸಿದ್ದಾರೆ. ಇತ್ತೀಚೆಗೆ ಮೆಲ್ಕಾರ್ ನಲ್ಲಿ ನಡೆದ ಸಭೆಯಲ್ಲಿ ಸಮಿತಿ ರಚಿಸಲಾಯಿತು.
ಗೌರವಾಧ್ಯಕ್ಷರಾಗಿ ಡಾ.ಪ್ರಶಾಂತ್ ಮಾರ್ಲ, ಸಂಜೀವ ಪೂಜಾರಿ ಬಿರ್ವ, ಅಧ್ಯಕ್ಷರಾಗಿ ಉದಯ ಪೈ, ಉಪಾಧ್ಯಕ್ಷರಾಗಿ ಎಂ.ಎನ್.ಕುಮಾರ್, ದಾಮೋದರ್ ಮೆಲ್ಕಾರ್, ಅಬ್ದುಲ್ ರಝಕ್ ಮೆಲ್ಕಾರ್, ಸತೀಶ್ ಕುಮಾರ್, ಪ್ರಧಾನ ಕಾರ್ಯದರ್ಶಿಯಾಗಿ ಎಂ.ಎಚ್.ಮುಸ್ತಫಾ, ಜೊತೆ ಕಾರ್ಯದರ್ಶಿಗಳಾಗಿ ನವೀನ್ ಪ್ರಕಾಶ್, ಲಕ್ಷಣ್, ವಿನ್ಸಿ, ಈಶ್ವರ್, ಕೋಶಾಧಿಕಾರಿಯಾಗಿ ಕಿಶೋರ್, ಸಾರ್ವಜನಿಕ ಸಂಪರ್ಕ ಅಧಿಕಾರಿಯಾಗಿ ಬಿ.ಅಬ್ದುಲ್ ಬಶೀರ್ ಅಹಮದ್ ಬೊಂಡಾಲ, ಸಂಘಟನಾ ಕಾರ್ಯದರ್ಶಿಗಳಾಗಿ ಸತೀಶ್ ಪಿ ಸಾಲ್ಯಾನ್, ಮಹಮ್ಮದ್, ಸಂತೋಷ್, ಕೆ.ರಮ್ಲಾ, ರಾಜ್, ದಯಾನಂದ್ ಆಯ್ಕೆಯಾದರು.
ಮೆಲ್ಕಾರ್ ಸಿಟಿ ಉಳಿಸಿ ಹೋರಾಟ ಸಮಿತಿ ಗೌರವಾಧ್ಯಕ್ಷ ಡಾ. ಪ್ರಶಾಂತ್ ಮಾರ್ಲ ನೇತೃತ್ವದಲ್ಲಿ ಸಮಿತಿ ಪದಾಧಿಕಾರಿಗಳ ನಿಯೋಗ ಸೋಮವಾರ ಸಂಸದ ನಳಿನ್ ಕುಮಾರ್ ಕಟೀಲ್, ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಯು ಮತ್ತು ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದ ಯೋಜನಾ ನಿರ್ದೇಶಕರನ್ನು ಭೇಟಿಯಾಯಿತು. ಈ ಸಂದರ್ಭ ಮೆಲ್ಕಾರ್ ನಲ್ಲಿ ಅಂಡರ್ ಪಾಸ್ ಮತ್ತು ಹೆದ್ದಾರಿ ವಿಭಜನೆ ವಿಚಾರದ ಕುರಿತು ಚರ್ಚಿಸಲಾಗಿ, ಮನವಿ ಸಲ್ಲಿಸಲಾಯಿತು.
ಪೂರಕವಾಗಿ ಸಂಸದರಾದ ನಳಿನ್ ಕುಮಾರ್ ಕಟೀಲ್‌ರವರು ಹೆದ್ದಾರಿ ಇಲಾಖೆಯ ಮುಖ್ಯಸ್ಥರನ್ನು ಕರೆಯಿಸಿ, ಪದಾಧಿಕಾರಿಗಳೊಂದಿಗೆ ಮುಖಾಮುಖಿಯಾಗಿ ಚರ್ಚಿಸಿ ಮೆಲ್ಕಾರ್ ನಗರಕ್ಕೆ ತೊಂದರೆಯಾಗದಂತೆ ಸೂಕ್ತ ಪರಿಹಾರ ಒದಗಿಸಬೇಕೆಂದು ತಿಳಿಸಿದರು. ಅದರೊಂದಿಗೆ ಒಂದೆರಡು ದಿನಗಳಲ್ಲಿ ಪ್ರದೇಶಕ್ಕೆ ಸಂಸದರು ಬರಲಿದ್ದು, ಶಾಸಕರು ಹಾಗೂ ಇಲಾಖೆಯ ಅಧಿಕಾರಿಗಳು ಕೂಡಾ ಉಪಸ್ಥಿತರುತ್ತಾರೆ. ಈ ಸಂದರ್ಭ ಉಪಾಧ್ಯಕ್ಷರಾದ ಎಂ. ಎನ್. ಕುಮಾರ್, ಪ್ರಧಾನ ಕಾರ್ಯದರ್ಶಿ ಎಂ. ಎಚ್. ಮುಸ್ತಾಫಾ, ಕೋಶಾಧಿಕಾರಿ ಕಿಶೋರ್ ಕುದ್ಮುಲ್, ಕಾರ್ಯದರ್ಶಿ ಈಶ್ವರ್, ಪಿ.ಆರ್.ಓ. ಅಬ್ದುಲ್ ಬಶೀರ್ ಅಹಮ್ಮದ್, ಸಂಘಟನಾ ಕಾರ್ಯದರ್ಶಿಗಳಾದ ಸತೀಶ್ ಪಿ. ಸಾಲಿಯಾನ್, ಮಹಮ್ಮದ್ ಕೊಹಿನೂರು, ಅನಿಲ್ ಕುಮಾರ್ ಮೆಲ್ಕಾರ್ ಹಾಗೂ ದಾಮೋದರ್ ಬಿ.ಎಂ. ಮೆಲ್ಕಾರ್ ಬಾಗವಹಿಸಿದ್ದು, ಶಾಸಕರು, ಜಿಲ್ಲಾಧಿಕಾರಿಗಳು, ಹೆದ್ದಾರಿ ಇಲಾಖೆಯ ಪ್ರೊಜೆಕ್ಟ್ ಡೈರೆಕ್ಟರ್ ಅವರಿಗೂ ಮನವಿಯನ್ನು ಮುಖತಃ ಸಲ್ಲಿಸಲಾಯಿತು.