ಕಲ್ಲಡ್ಕದ ಮಾಡ್ಲಮಜಲು ಗದ್ದೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸ್ವಸಹಾಯ ಗುಂಪುಗಳ ಒಕ್ಕೂಟದ ಕಲ್ಲಡ್ಕ ವಲಯ, ಮಹಾಗಣೇಶ ಗೆಳೆಯರ ಬಳಗ ಬಲ್ಲೆಕೋಡಿ, ಶೌರ್ಯ ವಿಪತ್ತು ನಿರ್ವಹಣಾ ಸಮಿತಿ ವತಿಯಿಂದ ಬಲೆ ಕೆಸರ್ಡ್ ಗೊಬ್ಬುಗ ಆಟಿಡು ಒಂಜಿ ದಿನ ಕಾರ್ಯಕ್ರಮ ನಡೆಯಿತು.
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ದೈವನರ್ತಕ ಲೋಕಯ್ಯ ಸೇರಾ ಕಾರ್ಯಕ್ರಮಕ್ಕೆ ಶುಭ ಹಾರೈಸಿ, ಆಚರಣೆಯಿಂದ ಮೂಲನಂಬಿಕೆ ಬೆಳೆಸುವಲ್ಲಿ ಸಹಕಾರಿಯಾಗುತ್ತದೆ ಎಂದರು.
ಅಧ್ಯಕ್ಷತೆಯನ್ನು ಗ್ರಾಮಭಿವೃದ್ಧಿ ಯೋಜನೆಯ ಕಲ್ಲಡ್ಕ ವಲಯದ ಅಧ್ಯಕ್ಷೆ ತುಳಸಿ ವಹಿಸಿದ್ದರು. ಕೆಸರುಗದ್ದೆ ಕ್ರೀಡಾಕೂಟದ ಗದ್ದೆಯ ಮಾಲೀಕ ಚಿಕ್ಕು ಪೂಜಾರಿ ಉದ್ಘಾಟಿಸಿದರು. ಮಾಜಿ ಶಾಸಕ ಕೆ.ಪದ್ಮನಾಭ ಕೊಟ್ಟಾರಿ ಆರೋಗ್ಯವರ್ಧನೆಗೆ ಇಂಥ ಕಾರ್ಯಕ್ರಮ ಸಹಕಾರಿ ಎಂದರು.ಮಾಜಿ ಶಾಸಕ ಎ.ರುಕ್ಮಯ ಪೂಜಾರಿ ಮಾತನಾಡಿ, ರೋಗದ ವಿರುದ್ಧ ಹೋರಾಡುವ ಕಲಿಕೆ ಇಂದು ಆಗಬೇಕು ಎಂದರು.ವಿಟ್ಲ ತಾಲ್ಲೂಕು ಪ್ರಗತಿ ಬಂದು ಸ್ವಸಹಾಯ ಸಂಘಗಳ ಕೇಂದ್ರ ಒಕ್ಕೂಟದ ಅಧ್ಯಕ್ಷರಾದ ನವೀನ್ ಚಂದ್ರ ಶುಭ ಹಾರೈಸಿದರು.
ಕೃಷಿಕರಾದ ಸಂಕಪ್ಪ ಕೊಟ್ಟಾರಿ ಹಾಗೂ ಶಶಿಕಲಾ ಚೆನ್ನೆಮಣೆ ಆಟವಾಡಿ ಆಟಿದ ಆಟವನ್ನು ನೆನಪಿಸಿದರು. ಕಂಬಳ ಕ್ಷೇತ್ರದಲ್ಲಿ ಪ್ರಸಿದ್ಧಿ ಪಡೆದ ಕಲ್ಲಡ್ಕ “ಕೃಷ್ಣಾಪುರದ ಬೊಲ್ಲ’ ಕಂಬಳದ ಕೋಣವನ್ನು ಕ್ರೀಡಾಕೂಟದ ಗದ್ದೆಗೆ ಇಳಿಸಿ ಕೋಣದ ಮಾಲೀಕರಾದ ಪರಮೇಶ್ವರ ಸಾಲಿಯಾನ್ ಅವರನ್ನು ಸನ್ಮಾನಿಸಲಾಯಿತು.
ಕ್ರೀಡಾಕೂಟದ ಗದ್ದೆಗೆ ಹಾಲುಏರೆದು, ವೀಳ್ಯದೆಲೆ ಅಡಿಕೆ ಗದ್ದೆಗೆ ಸಮರ್ಪಿಸಿ, ತೆಂಗಿನಕಾಯಿ ಒಡೆದು ಕ್ರೀಡಾಕೂಟಕ್ಕೆ ಚಾಲನೆ ನೀಡಲಾಯಿತು.
ವಿಟ್ಲ ತಾಲೂಕು ಯೋಜನಾಧಿಕಾರಿ ಚೆನ್ನಪ್ಪ ಗೌಡ, ಕಲ್ಲಡ್ಕ ಜನಜಾಗೃತಿ ವೇದಿಕೆಯ ಅಧ್ಯಕ್ಷರಾದ ಭಟ್ಯಪ್ಪ ಶೆಟ್ಟಿ, ಗೋಳ್ತಮಜಲು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಪ್ರೇಮ, ಪಂಚಾಯತ್ ಸದಸ್ಯರಾದ ಲಿಖಿತ ಆರ್ ಶೆಟ್ಟಿ, ಲೀಲಾವತಿ, ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಸಂಗೀತ ಶರ್ಮ, ಬಿ ಎಸ್ ಟಿಂಬರ್ ಮಾಲಕ ಬಾಲಕೃಷ್ಣ ಶೆಟ್ಟಿ, ಶೌರ್ಯ ವಿಪತ್ತು ನಿರ್ವಹಣಾ ತಂಡದ ಅಧ್ಯಕ್ಷರಾದ ಮಾತು ಸಾಲಿಯಾನ್ ಕುದ್ರೆಬೆಟ್ಟು, ಮಹಾಗಣೇಶ್ ಗೆಳೆಯರ ಬಳಗ ಬಲ್ಲೇಕೂಡಿ ಅಧ್ಯಕ್ಷರಾದ ನಾಗೇಶ್ ಕೊಟ್ಟಾರಿ, ಕೃಷ್ಣಪ್ಪ ಪೂಜಾರಿ ಕೇಪುಲಕೋಡಿ, ಕಲ್ಲಡ್ಕ ವಲಯಕ್ಕೆ ಸಂಬಂಧಪಟ್ಟ ಒಕ್ಕೂಟಗಳ ಅಧ್ಯಕ್ಷರುಗಳಾದ ಮಮತಾ, ಶಾಂಭವಿ, ದಯಾನಂದ, ಸೀತಾರಾಮ್, ಮಮತಾ ಮೊದಲಾದವರು ಉಪಸ್ಥಿತರಿದ್ದರು.
ಬೋಳಂತೂರು ಒಕ್ಕೂಟದ ಅಧ್ಯಕ್ಷರಾದ ಸೀತಾ ಪಾರ್ದನ ಮೂಲಕ ಪ್ರಾರ್ಥಿಸಿದರು. ಮಾಮೇಶ್ವರ ಒಕ್ಕೂಟದ ಅಧ್ಯಕ್ಷ ಹರೀಶ್ ಸ್ವಾಗತಿಸಿದರು. ಕಲ್ಲಡ್ಕ ವಲಯದ ಮೇಲ್ವಿಚಾರಕಿ ಸುಗುಣ ಶೆಟ್ಟಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಮಹಾ ಗಣೇಶ್ ಗೆಳೆಯರ ಬಳಗದ ಗೌರವ ಸದಸ್ಯರಾದ ಶೇಖರ್ ಕೊಟ್ಟಾರಿ ವಂದಿಸಿದರು. ಗೋಳ್ತಮಜಲ ಗ್ರಾಮ ಪಂಚಾಯತ್ ಸದಸ್ಯರಾದ ರಾಜೇಶ್ ಕೊಟ್ಟಾರಿ ಕಾರ್ಯಕ್ರಮ ನಿರೂಪಿಸಿದರು.