ಬಂಟ್ವಾಳ

ಮಾದಕ ದ್ರವ್ಯ ಎಂ.ಡಿ.ಎಂ.ಎ. ಸೇವಿಸಿ ಕಾರು ಚಾಲನೆ: ಆರೋಪಿ , ಸೊತ್ತುಗಳು ವಶಕ್ಕೆ

ಎಂ.ಡಿ.ಎಂ.ಎ. ಸೇವಿಸಿ ಕಾರು ಚಲಾಯಿಸುತ್ತಿದ್ದ ವ್ಯಕ್ತಿಯೊಬ್ಬನನ್ನು ಬಂಟ್ವಾಳ ನಗರ ಪೊಲೀಸರು ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಿದ್ದಾರೆ.

ಬಂಟ್ವಾಳ ತಾಲೂಕು  ಬಿ, ಮೂಡ ಗ್ರಾಮದ ಗೂಡಿನಬಳಿ ಎಂಬಲ್ಲಿ ಬಂಟ್ವಾಳ ನಗರ ಠಾಣಾ ಪೊಲೀಸರು ವಾಹನ ತಪಾಸಣೆಗಾಗಿ ಮಾರುತಿ ಆಲ್ಟೋ ಕಾರನ್ನು ನಿಲ್ಲಿಸಿ ಪರಿಶೀಲಿಸಿದಾಗ, ಕಾರಿನ ಚಾಲಕ ಬಂಟ್ವಾಳ ಬೊಳಂತೂರು ನಿವಾಸಿ ಮಹಮ್ಮದ್ ಆಸೀರ್ (26)  ಮಾದಕದ್ರವ್ಯ ಸೇವನೆ ಮಾಡಿರುವ ಬಗ್ಗೆ ಅನುಮಾನದಿಂದ ವಿಚಾರಿಸಿದಾಗ, ತಾನು ಎಂ.ಡಿ.ಎಂ.ಎ. ನಿದ್ರಾಜನಕ ಸೊತ್ತನ್ನು ಸೇವಿಸಿರುವುದಾಗಿ ತಿಳಿಸಿದ್ದಾನೆ.  ಕಾರನ್ನು ತಪಾಸಣೆ ನಡೆಸಿದಾಗ 4 ಗ್ರಾಂ 20 ಮೀ.ಗ್ರಾಂ ಎಂ.ಡಿ.ಎಂ.ಎ. ದೊರಕಿರುತ್ತದೆ. ಅರೋಪಿಯನ್ನು, ಮಾದಕ ವಸ್ತು ಹಾಗೂ ಕಾರಿನೊಂದಿಗೆ ವಶಕ್ಕೆ ಪಡೆದಿದ್ದು, ವಶಪಡಿಸಲಾದ ಮಾದಕದ್ರವ್ಯದ ಅಂದಾಜು ಮೌಲ್ಯ ರೂ 8,000  ಹಾಗೂ ಕಾರಿನ ಅಂದಾಜು ಮೌಲ್ಯ ರೂ 1,5೦,000 ಆಗಿದ್ದು, ಈ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ  ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Recent Posts