ವಿದ್ಯಾರ್ಥಿ ಜೀವನದಲ್ಲಿ ಶಿಸ್ತು ಯಶಸ್ಸಿನ ಮೂಲಮಂತ್ರ ಎಂದು ರೋಟರಿ ಕ್ಲಬ್ ನ ವಿಟ್ಲ ವಲಯದ ಯೋಜನಾ ನಿರ್ವಾಹಕ ಡಾ. ವಿ. ಕೆ ಹೆಗಡೆ ಹೇಳಿದರು.
ಮಾಣಿಲದ ಸರಕಾರಿ ಪ್ರೌಢಶಾಲೆಯಲ್ಲಿ ರೋಟರಿ ಕ್ಲಬ್ ವಿಟ್ಲ ಪ್ರಾಯೋಜಕತ್ವದಲ್ಲಿ ನಡೆದ ‘ವನಸಿರಿ’ ಹಾಗೂ ‘ವಿದ್ಯಾಸಿರಿ’ ಎಂಬ ಕಾರ್ಯಕ್ರಮದಲ್ಲಿ ಸಂಸ್ಥೆಯ ಸೇವಾ ಕಾರ್ಯಗಳ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡುತ್ತಾ ನುಡಿದರು. ಅಧ್ಯಕ್ಷತೆಯನ್ನು ರೋಟರಿ ಕ್ಲಬ್ ನ ವಿಟ್ಲ ವಲಯದ ಅಧ್ಯಕ್ಷರಾದ ಕಿರಣ್ ಕುಮಾರ್ ವಹಿಸಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ನಿಕಟ ಪೂರ್ವ ಅಧ್ಯಕ್ಷರಾದ ಶ್ರೀ ಪ್ರಕಾಶ್ ನಾಯಕ್ ಪ್ರಾಯೋಜಕತ್ವದಲ್ಲಿ ವಿದ್ಯಾರ್ಥಿಗಳಿಗೆ ಪುಸ್ತಕಗಳನ್ನು ಹಾಗೂ ಗಿಡಗಳನ್ನು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಎಸ್ ಡಿ ಎಂಸಿ ಅಧ್ಯಕ್ಷರಾದ ಶಿವಪ್ರಸಾದ್ ಸೊರಂಪಳ್ಳ ಸ್ಥಳದಾನಿಗಳೂ ಹಿರಿಯರೂ ಆದ ಮುರುವ ನಡುಮನೆ ಮಹಾಬಲ ಭಟ್ ಭಾಗವಹಿಸಿದ್ದರು.ಮುಖ್ಯ ಶಿಕ್ಷಕರಾದ ಭುವನೇಶ್ವರ್ ಸಿ ಸ್ವಾಗತಿಸಿದರು. ರೋಟರಿ ಕ್ಲಬ್ ವಿಟ್ಲ ದ ಕಾರ್ಯದರ್ಶಿ ಮೋಹನ್ ಮೈರ ವಂದಿಸಿದರು. ಶಿಕ್ಷಕ ಸುಧೀಶ್ ಕೆ ಕಾರ್ಯಕ್ರಮ ನಿರೂಪಿಸಿದರು.
ನಿಯಮ 377ರ ಅಡಿಯಲ್ಲಿ ಸಮುದ್ರ ತೀರದ ಪವನ ಸಾಮರ್ಥ್ಯದ ಬಗ್ಗೆ ಲೋಕಸಭೆ ಗಮನಸೆಳೆದ ಸಂಸದ ಕ್ಯಾ. ಚೌಟ (more…)