ಕಲ್ಲಡ್ಕ

ಒಂದು ದಿನದ ಸಾಹಿತ್ಯ ಸ್ವರಚನೆ ಕಮ್ಮಟ

ಮಕ್ಕಳಲ್ಲಿ ಸಾಹಿತ್ಯ ಸದಭಿರುಚಿಯ ವಿಕಾಸ ಅಗತ್ಯ. ಇದಕ್ಕಾಗಿ ಬಂಟ್ವಾಳ ತಾಲೂಕಿನ ಮಕ್ಕಳ ಕಲಾ ಲೋಕ ಕನ್ನಡ ಸಾಹಿತ್ಯ ಪರಿಷತ್ತು  ಶ್ರಮಿಸುತ್ತಿದೆ ಎಂದು ಕಡೇಶಿವಾಲಯ ಜಿ.ಪಂಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿ ನಾಯಕಿ ಸಾನ್ವಿ ಹೇಳಿದರು.

ಡೇಶ್ವಾಲ್ಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಾಣಿ. ಕೆದಿಲ ಮತ್ತು ಕಲ್ಲಡ್ಕ ಕಡೇಶ್ವಾಲ್ಯ ಕ್ಲಸ್ಟರ್ಗಳ ಶಾಲಾ ಸಾಹಿತ್ಯಾಸಕ್ತ ಶಿಕ್ಷಕರಿಗೆ ಮಕ್ಕಳ ಕಲಾ ಲೋಕ ಸಂಘಟಿಸಿದ ಒಂದು ದಿನದ ಸಾಹಿತ್ಯ ಸ್ವರಚನೆ ಕಮ್ಮಟವನ್ನು ಉದ್ಘಾಟಿಸಿ ಮಾತನಾಡಿದರು.

ಮಕ್ಕಳ ಕಲಾ ಲೋಕದಿಂದ ತಾಲೂಕಿನ ಭಾವೀ ಜನಾಂಗಕ್ಕೆ ಪ್ರಯೋಜನವಾಗುತ್ತಿದೆ. ವಿದ್ಯಾರ್ಥಿಗಳು ಸ್ವಸಾಹಿತ್ಯ ರಚನೆ ಮತ್ತು ಸಾಹಿತ್ಯ ವಾಚನದ ಮೂಲಕ ರಸಾಸ್ವಾದನೆ ಮಾಡಲು ಸಮಯ ಮೀಸಲಿಡಬೇಕು. ಮಕ್ಕಳ ಕಲಾಲೋಕದದ ಕಾರ್ಯಕ್ರಮಗಳ ಪ್ರಯೋಜನವನ್ನು ವಿದ್ಯಾರ್ಥಿಗಳು ಪಡೆಯಬೇಕು ಎಂದು ಸಾನ್ವಿ ಹೇಳಿದರು.

ಕಮ್ಮಟದಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಭಾಸ್ಕರ ಅಢ್ವಳ ಮತ್ತು ರಮೇಶ ಎಂ. ಬಾಯಾರು ಸಾಹಿತ್ಯ ಸ್ವರಚನೆ, ಸಾಹಿತ್ಯ ಸಂಘದ ರಚನೆ, ಶಾಲಾ ಭಿತ್ತಿ ಪತ್ರಿಕೆ ಮತ್ತು ಶಾಲಾ ವಾರ್ಷಿಕ ಹಸ್ತ ಪತ್ರಿಕೆ ತಯಾರಿಗಳ ಬಗ್ಗೆ ಮಾಹಿತಿ ನೀಡಿದರುಕಮ್ಮಟದಲ್ಲಿ ಶಿಕ್ಷಕರು ರಚಿಸಿದ ಹಸ್ತ ಪತ್ರಿಕೆಯನ್ನು ಮುಖ್ಯ ಶಿಕ್ಷಕ ಬಾಬು ಪೂಜಾರಿ ಬಿಡುಗಡೆಗೊಳಿಸಿದರು. ಕಮ್ಮಟದ ಪ್ರಾಯೋಜಕರಾದ ಕಡೇಶಿವಾಲಯ ಜಿ.ಪಂಹಿರಿಯ ಪ್ರಾಥಮಿಕ ಶಾಲಾ ಸಹ ಶಿಕ್ಷಕ ಪೀರಾಜಿ ವಾಬಳೆ ಸಹಕರಿಸಿದರು.  ಮಕ್ಕಳ ಕಲಾಲೋಕದ ಕಾರ್ಯದರ್ಶಿ ಪುಷ್ಪಾ ಎಚ್ ನಿರೂಪಿಸಿದರು. ಉಪಾಧ್ಯಕ್ಷ ಶಿವರಾಮ ಭಟ್ ನೆಡ್ಲೆ ವಂದಿಸಿದರು.

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ