ಬಂಟ್ವಾಳ

ಪ್ಲಾಸ್ಟಿಕ್ ಮುಕ್ತ ಬಂಟ್ವಾಳ: ಪುರಸಭೆ ವ್ಯಾಪ್ತಿಯ ಹಲವೆಡೆ ಬೀದಿನಾಟಕ

ಬಂಟ್ವಾಳ ಪುರಸಭೆಯ ಪ್ಲಾಸ್ಟಿಕ್ ಮುಕ್ತ ಅಭಿಯಾನ ಅಂಗವಾಗಿ ವಿದ್ಯಾರ್ಥಿ ಸಮೂಹಕ್ಕೆ ಜಾಗೃತಿ ಮೂಡಿಸುವ ಬೀದಿನಾಟಕ ಪ್ರದರ್ಶನ ಪುರಸಭಾ ವ್ಯಾಪ್ತಿಯ ವಿವಿಧೆಡೆ ನಡೆಯಿತು.

ಜಾಹೀರಾತು

ರಂಗಕಲಾವಿದ ಮೌನೇಶ ವಿಶ್ವಕರ್ಮ ನೇತೃತ್ವದ  ಸಂಸಾರ ಜೋಡುಮಾರ್ಗ ಕಲಾತಂಡದ ಕಲಾವಿದರು, ಬಿ.ಮೂಡ ಪದವಿ ಪೂರ್ವ ಕಾಲೇಜು, ಅಜ್ಜಿಬೆಟ್ಟು ಸರ್ಕಾರಿ ಪ್ರೌಢಶಾಲೆ ಹಾಗೂ ಬಂಟ್ವಾಳ ಪಾಲೆಟೆಕ್ನಿಕ್ ಕಾಲೇಜು ಆವರಣದಲ್ಲಿ ಜಾಗೃತಿ ಬೀದಿ‌ನಾಟಕ ಪ್ರದರ್ಶಿಸಿದರು. ಬಿ.ಮೂಡ ಸರ್ಕಾರಿ ‌ಪದವಿಪೂರ್ವ ಕಾಲೇಜಿ‌ನ ಪ್ರಿನ್ಸಿಪಾಲ್ ಯೂಸುಫ್ ವಿಟ್ಲ ತಮ್ಕಿ ಬಾರಿಸುವ ಮೂಲಕ ಬೀದಿನಾಟಕಕ್ಕೆ ಚಾಲಬೆ ನೀಡಿದರು. ಪುರಸಭಾ ಹಿರಿಯ ಆರೋಗ್ಯ ನಿರೀಕ್ಷಕ ರತ್ನಪ್ರಸಾದ್ , ಮೇಲ್ವಿಚಾರಕ ಶಿವಕುಮಾರ್ ಉಪಸ್ಥಿತರಿದ್ದರು.

ಕಸ ಇ‌ದು ಕೇವಲ ಕಸವಾಗದೆ ರಕ್ಕಸನಂತೆ ಎಲ್ಲೆಡೆ ವ್ಯಾಪಿಸಿದ್ದು, ತ್ಯಾಜ್ಯ ನಿರ್ವಹಣೆ ಸ್ಥಳೀಯಾಡಳಿತ ಸಂಸ್ಥೆಗಳಿಗೆ ತಲೆ‌ನೋವಾಗಿದೆ. ಆದರೆ ಹಸಿ ಕಸ, ಒಣ ಕಸ ದ ಪರಿಕಲ್ಪನೆಯಲ್ಲಿ ತ್ಯಾಜ್ಯವನ್ನು ವಿಂಗಡಿಸಬೇಕು, ಅಪಾಯಕಾರಿ‌ ಪ್ಲಾಸ್ಟಿಕ್ ನ ಬಳಕೆಯನ್ನು ಕಡಿಮೆ ಮಾಡುವುದು, ಮರುಬಳಕೆ ಮಾಡುವುದು, ಪ್ಲಾಸ್ಟಿಕ್ ಬಳಕೆಯನ್ನು‌ ವಿರೋಧಿಸುವ ಮೂರು ಸೂತ್ರಗಳನ್ನು ನಾಟಕದ ‌ಮೂಲಕ ತಿಳಿಸಲಾಯಿತು. ಪ್ಲಾಸ್ಟಿಕ್‌ ಪ್ರಾಣಿಗಳಿಗೂ ಅಪಾಯ ತರುತ್ತದೆ ಎನ್ನುವ ಬಗ್ಗೆ ಎಂದೂ ಬಾರದ ಮಳೆ ರೂಪಕ ಪ್ರದರ್ಶಿಸಲಾಯಿತು. ಹಾಡು,ನೃತ್ಯ,ಅಭಿನಯದ ಮೂಲಕ  ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಲಾಯಿತು.

ಬಿಮೂಡ ಕಾಲೇಜಿನ ಉಪನ್ಯಾಸಕ ಅಬ್ದುಲ್ ರಝಾಕ್ ಅನಂತಾಡಿ ಕಾರ್ಯಕ್ರಮ‌ ನಿರ್ವಹಿಸಿದರು. ಸಂಸಾರ ಕಲಾವಿದರಾದ ಮೌನೇಶ ವಿಶ್ವಕರ್ಮ ರಾಕೇಶ್ ಆಚಾರ್ಯ, ಪೃಥ್ವಿರಾಜ್, ರಮೇಶ್ ಕೆ.ಪುಣಚ, ಚಂದ್ರಮೌಳಿ, ರಕ್ಷಿತ್ ವಾಮದಪದವು ಭಾಗವಹಿಸಿದ್ದರು.

ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.

Recent Posts