ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸಿದ ರಾಧಾಕೃಷ್ಣರ ಕಾರ್ಯಗಳು ಅವಿಸ್ಮರಣಿಯ ಎಂದು ಪೊಳಲಿಯ ರಾಮಕೃಷ್ಣ ತಪೋವನದ ಸ್ವಾಮಿ ವಿವೇಕಚೈತನ್ಯಾನಂದ ಹೇಳಿದರು.
ಪೊಳಲಿ ಸರ್ವಮಂಗಳ ಸಭಾಂಗಣದಲ್ಲಿ ನಡೆದ ಶ್ರೀ ರಾಜರಾಜೇಶ್ವರೀ ಸರಕಾರಿ ಪ್ರೌಢಶಾಲೆ ಪೊಳಲಿ ಇಲ್ಲಿಯ ಮುಖ್ಯ ಶಿಕ್ಷಕರಾದ ರಾಧಾಕೃಷ್ಣ ಭಟ್ ಪೊಳಲಿ ಇವರ ಸೇವಾ ನಿವೃತ್ತಿ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ ಮಾತನಾಡಿದರು.
ಶ್ರೀ ರಾಜರಾಜೇಶ್ವರೀ ಸರಕಾರಿಪ್ರೌಢಶಾಲೆ ವತಿಯಿಂದ ರಾಧಕೃಷ್ಣ ಭಟ್ ತನುಜ ಅರ್ ಭಟ್ ದಂಪತಿಗಳಿಗೆ ಶಾಲು ಹೊದಿಸಿ ಫಲಪುಷ್ಪ ನೀಡಿ ಸನ್ಮಾನಿಸಲಾಯಿತು.
ರಾಜ್ಯ ಸರಕಾರಿ ನೌಕರರ ಸಂಘ, ಪ್ರೌಢಶಾಲಾ ಸಹ ಶಿಕ್ಷಕರ ಸಂಘ, ಕ್ಷೇತ್ರ ಸಂಪನ್ಮೂಲ ಕೇಂದ್ರ ಬಂಟ್ವಾಳ ,ಉಪನಿರ್ದೇಶಕರ ಕಚೇರಿಯಿಂದ ಉಪನಿರ್ದೇಶಕರು ಮತ್ತು ಉಪನ್ಯಾಸಕರು, ಅತ್ತಾವರ ಪ್ರೌಢಶಾಲೆ ಶಿಕ್ಷಕರು, ರೋಟರಿ ಕ್ಲಬ್ ಬಂಟ್ವಾಳ, ಸರ್ಕಾರಿ ಶಿಕ್ಷಣ ಶಿಕ್ಷಕ ಮಹಾವಿದ್ಯಾಲಯದ ಉಪನ್ಯಾಸಕರು, ಜಂಟಿ ನಿರ್ದೇಶಕರು, ಕರಿಯಂಗಳ ಗ್ರಾಮ ಪಂಚಾಯತ್ ಅಧ್ಯಕ್ಷರು ಮತ್ತು ಸದಸ್ಯರು ,ಶ್ರೀ ವಿದ್ಯಾವಿಲಾಸ ಶಾಲೆ ಪೊಳಲಿ ವತಿಯಿಂದ ಸನ್ಮಾನ ಅಭಿನಂದನೆ ನಡೆಯಿತು.
ಕಾರ್ಯಕ್ರಮದಲ್ಲಿ ಎಸ್ ಡಿ ಎಂ ಸಿ ಕಾರ್ಯದರ್ಶಿ ವೆಂಕಟೇಶ್ ನಾವಡ ಪೊಳಲಿ, ಕರಿಯಂಗಳ ಗ್ರಾ.ಪಂ.ಸದಸ್ಯ ಲೋಕೇಶ್ ಭರಣಿ, ಸಿ.ಆರ್.ಪಿ ಪ್ರೇಮಲತಾ, ಮುರಳಿಕೃಷ್ಣರಾವ್, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಮಾಧವ ಉಪಸ್ಥಿತರಿದ್ದರು.
ಶಿಕ್ಷಕಿಯಾದ ರಂಜಿತ ಮತ್ತು ವಿದ್ಯಾರ್ಥಿಗಳಾದ ಚಿನ್ಮಯ್ ಮಹಮ್ಮದ್ ಅನಾಸ್ ಅನಿಸಿಕೆ ತಿಳಿಸಿದರು. ಪ್ರಭಾರ ಮುಖ್ಯ ಶಿಕ್ಷಕಿ ಜಾನೆಟ್ ಲೋಬೊ ಸ್ವಾಗತಿಸಿದರು. ಜಯಂತ್ ಆಚಾರ್ಯ ವಂದಿಸಿದರು. ಮುರಳಿಧರ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.