ವಿಟ್ಲಪಡ್ನೂರು ಗ್ರಾಮ ಪಂಚಾಯಿತಿಯ ಪ್ರಥಮ ಸುತ್ತಿನ ಗ್ರಾಮಸಭೆ ಆಗಸ್ಟ್ 3ರಂದು ಗ್ರಾಪಂ ಸಬಾಭವನದಲ್ಲಿ ಅಧ್ಯಕ್ಷೆ ರೇಷ್ಮಾಶಂಕರಿ ಬಲಿಪಗುಳಿ ಅಧ್ಯಕ್ಷತೆಯಲ್ಲಿ ನಡೆಯಿತು. ತೋಟಗಾರಿಕಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಜೋ ಪ್ರದೀಪ್ ಡಿಸೋಜ ಮಾರ್ಗದರ್ಶನ ನೀಡಿದರು.
ಗ್ರಾಪಂ ಕಾರ್ಯದರ್ಶಿ ಸುಜಯಾ ಕೆ. ವರದಿ, ಜಮಾ ಖರ್ಚು, ಪ್ರಸ್ತಾವನೆ ವಾಚಿಸಿದರು. ಎರಡೂವರೆ ವರ್ಷದ ತಮ್ಮ ಅಧ್ಯಕ್ಷ ಅವಧಿ ಮುಗಿಯುವ ಹಂತದಲ್ಲಿ ಇದ್ದು ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗಿದೆ ಎಂದರು. ಜೆಜೆಎಮ್ ಅನುಷ್ಠಾನ, ಗ್ರಾಮ ಪಂಚಾಯತ್ ಕಛೇರಿಗೆ ಸೋಲಾರ್ ಗ್ರಿಡ್, ಕಾಂಕ್ರಿಟ್ ರಸ್ತೆ, ಚರಂಡಿ ನಿರ್ಮಾಣ ಹಾಗೂ ಇತರೇ ಕಾಮಗಾರಿಗಳನ್ನು ಸೇರಿಕೊಂಡು ಒಟ್ಟು ರೂ.2.50 ಕೋಟಿ ಹಣ ಅಭಿವೃದ್ಧಿಗೆ ಖರ್ಚು ಮಾಡಲಾಗಿದೆ. ಹಾಗೂ ಶಾಸಕರ ಅನುದಾನ ರೂ. 13 ಕೋಟಿಯಷ್ಟು ಅಭಿವೃದ್ಧಿಗೆ ಬಳಸಲಾಗಿದೆ. ಉಪಾಧ್ಯಕ್ಷರಾದ ನಾಗೇಶ್ ಕುಮಾರ್ , ಸದಸ್ಯರಾದ ಜಯಲಕ್ಷ್ಮೀ, ಜಯಂತ, ಪ್ರೇಮಲತಾ, ಕೆ.ರೇಖಾ, ಜಯಭಾರತಿ, ಶೆರೀಫ್, ಹರ್ಷದ್ .ಕೆ.ಎಮ್, ಅವ್ವಮ್ಮ, ನೆಬಿಸಾ ಕೆ.ಎಚ್, ಮೈಮೂದ್, ಸಂದೇಶ್ ಶೆಟ್ಟಿ, ಅಮಿತಾ ಉಪಸ್ಥಿತರಿದ್ದರು.
ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ಶ್ರೀಶೈಲಾ ಡೋಣುರ ಸ್ವಾಗತಿಸಿದರು. ಪಂಚಾಯತ್ ಸದಸ್ಯರಾದ ರವೀಶ್ ಶೆಟ್ಟಿ ಕರ್ಕಳ ವಂದಿಸಿದರು.