ತುಳುನಾಡಿನ ಸಂಸ್ಕೃತಿ, ಸಂಸ್ಕಾರವನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಮಹಾನ್ ಕಾರ್ಯ ಯುವ ಸಂಘಟನೆಗಳ ಮೂಲಕ ನಡೆಯಬೇಕಿದೆ. ಎಲ್ಲರೂ ಜತೆಗೂಡಿ ಸಂಭ್ರಮಿಸುವ ಹಾಗೂ ಕೆಸರಿನಲ್ಲಿ ಆಟ ಕೂಟದ ಮೂಲಕ ಭಾತೃತ್ವ ಬೆಳೆಸುವ ಕಾರ್ಯ ನಡೆಯುತ್ತಿರುವುದು ಶ್ಲಾಘನೀಯ ಎಂದು ವಿಧಾನಸಭೆಯ ಸಭಾಧ್ಯಕ್ಷ ಯು.ಟಿ.ಖಾದರ್ ಹೇಳಿದರು.
ಯುವಕ ಮಂಡಲ ಇರಾ ಇದರ ಸುವರ್ಣ ಮಹೋತ್ಸವದ ಪ್ರಯುಕ್ತ ಇರಾ ಬಾವಬೀಡು ಗದ್ದೆಯಲ್ಲಿ ರವಿವಾರ ಆಯೋಜಿಸಲಾದ ಕೆಸರ್‌ಡೊಂಜಿ ದಿನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಪ್ರಮುಖರಾದ ವೇಣುಗೋಪಾಲ ಭಂಡಾರಿ ಬಾವಬೀಡು, ಸುಜಾತ ಕೆ.ರೈ ಬಾವಬೀಡು, ಡಾ|ಸತೀಶ್ ಭಂಡಾರಿ, ಮಡ್ವಬೀಡು ಸತೀಶ್ ಕುಮಾರ್ ಆಳ್ವ ಇರಾ ಬಾಳಿಕೆ, ಬಂಟ್ವಾಳ ತಾಲೂಕು ಪಂಚಾಯತ್‌ನ ನಿಕಟ ಪೂರ್ವ ಅಧ್ಯಕ್ಷ ಚಂದ್ರಹಾಸ ಆರ್.ಕರ್ಕೇರ, ಇರಾ ಗ್ರಾಮ ಪಂಚಾಯತ್‌ನ ನಿಕಟಪೂರ್ವ ಅಧ್ಯಕ್ಷ, ಸದಸ್ಯ ಅಬ್ದುಲ್ ರಜಾಕ್ ಕುಕ್ಕಾಜೆ, ಪ್ರಮುಖರಾದ ಮಹಾಬಲ ರೈ ಯಾನೆ ಕೋಟಿ ಶೆಟ್ಟಿ ಕಿನ್ನಿಮಜಲು, ಶ್ರೀಧರ ಶೆಟ್ಟಿ ಯಾನೆ ಸಂಕು ಶೆಟ್ಟಿ ಕಲ್ಲಾಡಿ, ಕಿರಣ್ ರೈ ಯಾನೆ ಕೋಟಿ ಶೆಟ್ಟಿ ಕಲ್ಲಾಡಿ, ಭಾಸ್ಕರ ಪೂಜಾರಿ ಯಾನೆ ಮಂಙಣ್ಣ ಸಹಿತ ಹಲವು ಗಣ್ಯರು ಉಪಸ್ಥಿತರಿದ್ದರು.
ಯುವಕ ಮಂಡಲದ ಸುವರ್ಣ ಮಹೋತ್ಸವ ಸಮಿತಿಯ ಗೌರವಾಧ್ಯಕ್ಷ ಪಿ.ಎಂ.ಕೊಡಂಗೆ, ಪ್ರಧಾನ ಸಂಚಾಲಕ ಜಗದೀಶ್ ಶೆಟ್ಟಿ ಇರಾಗುತ್ತು, ಅಧ್ಯಕ್ಷ ಜಯರಾಮ ಪೂಜಾರಿ ಸೂತ್ರಬಲು, ಯುವಕ ಮಂಡಲದ ಅಧ್ಯಕ್ಷ ಗಣೇಶ್ ಎಸ್. ಅತ್ತಾವರ ಭಾಗವಹಿಸಿದ್ದರು. ಪುಷ್ಪರಾಜ ಕುಕ್ಕಾಜೆ ನಿರೂಪಿಸಿದರು.