ಒಡಿಯೂರು ಶ್ರೀಗಳವರ ಜನ್ಮದಿನೋತ್ಸವ – ಗ್ರಾಮೋತ್ಸವದ ಪ್ರಯುಕ್ತ ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆ ಮತ್ತು ಸಹಸಂಸ್ಥೆಗಳ ವತಿಯಿಂದ ಕರೋಪಾಡಿ ಗ್ರಾಮದ ಕೇಂದ್ರ ಬಿಂದುವಾದ ಮಿತ್ತನಡ್ಕ ಪೇಟೆಯಲ್ಲಿ ಪರಿಸರ ಸ್ವಚ್ಛತೆ ಮಾಡಲಾಯಿತು. ಮಿತ್ತನಡ್ಕ ಮಲರಾಯಿ ದೈವಸ್ಥಾನ, ಶಾಲಾ ವಠಾರ ಮತ್ತು ಪೇಟೆಯಲ್ಲಿ ಸ್ವಚ್ಛತೆಯನ್ನು ಮಾಡಲಾಯಿತು. ಹಿಂದು ಜಾಗರಣ ವೇದಿಕೆ ಕರೋಪಾಡಿ, ಸಾರ್ವಜನಿಕ ಗಣೇಶೋತ್ಸವ ಸಮಿತಿ, ವಗೆನಾಡು ಶ್ರೀ ಸುಬ್ರಾಯ ದೇವಸ್ಥಾನ ನಿರ್ವಹಣಾ ಸಮಿತಿ, ಓಂ ಶ್ರೀ ಪ್ರೆಂಡ್ಸ್ ಚೆಲ್ಲಂಗಾರ್ -ಪಾದೆಕಲ್ಲು ಭಾರತೀ ಪ್ರೆಂಡ್ಸ್ ಕುಡ್ಪಲ್ತಡ್ಕ, ಒಡಿಯೂರು ಶ್ರೀ ವಿಕಾಸವಾಹಿನಿ ಸಂಘಗಳು ಸ್ವಚ್ಛತಾ ಕಾರ್ಯಕ್ರಮದಲ್ಲಿ ಸಹಕರಿಸಿದರು