ಬಂಟ್ವಾಳ

ಕಾರ್ಗಿಲ್ ವಿಜಯ ದಿವಸ್: ಯೋಧ ಉಮೇಶ್ ಕೈರಂಗಳ ಅವರಿಗೆ ಸನ್ಮಾನ

ಸೇನೆಗೆ ಸೇರಬೇಕು ಎಂಬ ಆಕಾಂಕ್ಷೆ ಮೊಳಕೆಯೊಡೆದದ್ದು ನನ್ನ ಪ್ರೌಢಶಾಲಾ ದಿನಗಳಲ್ಲಿ. ಅಂದು ತರಗತಿಯಲ್ಲಿ ಅಧ್ಯಾಪಕರು ಸೇನೆಗೆ ಸೇರುವುದರಿಂದ ಆಗುವ ಪ್ರಯೋಜನಗಳು ಮತ್ತು ಗೌರವಗಳ ಬಗ್ಗೆ ವಿವರಿಸಿದ್ದು ಮತ್ತು ಸೇನೆಗೆ ಸೇರಿ ಗೌರವ ಪಡೆಯುತ್ತಿದ್ದ ನನ್ನ ಸಂಬಂಧಿಗಳನ್ನು ನೋಡಿ ನಾನು ಸೈನ್ಯವನ್ನು ಸೇರಿದೆ. ಇದರಿಂದಾಗಿ ನಾನು ಇವತ್ತು ಸಮಾಜದಿಂದ ಗೌರವಿಸಲ್ಪಡುತ್ತಿದ್ದೇನೆ ಎಂದು ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ್ದ ಯೋಧ ಉಮೇಶ್ ಕೈರಂಗಳ ಅವರು ಹೇಳಿದರು.

ಜಾಹೀರಾತು

ಜೇಸಿಐ ಜೋಡುಮಾರ್ಗ ನೇತ್ರಾವತಿ ಜ್ಯೂನಿಯರ್ ಜೇಸಿ ವಿಭಾಗ, ಅಳುಪ ಸಮಾಜ ವಿಜ್ಞಾನ ಸಂಘ ಬೊಂಡಾಲ ಜಗನ್ನಾಥ ಶೆಟ್ಟಿ ಸ್ಮಾರಕ ಸರಕಾರಿ ಪ್ರೌಢಶಾಲೆ ಶಂಭೂರು ಆಶ್ರಯದಲ್ಲಿ ನಡೆದ ಕಾರ್ಗಿಲ್ ವಿಜಯ್ ದಿವಸ ಸಮಾರಂಭದಲ್ಲಿ ಗೌರವ ಸ್ವೀಕರಿಸಿ ಮಾತಾನಾಡಿದರು.

ಕಾರ್ಗಿಲ್ ಸೇರಿದಂತೆ ಭಾರತದ ಗಡಿಯಲ್ಲಿ ಸೇವೆ ಸಲ್ಲಿಸುವ ಸೈನಿಕರಿಂದಾಗಿ ನಾವು ಇವತ್ತು ನೆಮ್ಮದಿಯ ಜೀವನ‌ ನಡೆಸುತ್ತಿದ್ದೇವೆ. ಹಾಗಾಗಿ ಸೈನಿಕರಿಗೆ ನೀಡುವ ಗೌರವ ವಿದ್ಯಾರ್ಥಿಗಳಿಗೆ ಸ್ಫೂರ್ತಿ ನೀಡಲಿ ಎಂದರು. ಅಧ್ಯಕ್ಷತೆ ವಹಿಸಿದ್ದ ಶಾಲಾ ಮುಖ್ಯಶಿಕ್ಷಕ ಕಮಲಾಕ್ಷ ಕಲ್ಲಡ್ಕ ನಮ್ಮ ಶಾಲೆಯ ಹಿರಿಯ ವಿದ್ಯಾರ್ಥಿಗಳು ಇದೇ ತರಹದ ಗೌರವವನ್ನು ನಮ್ಮ ಶಾಲೆಯಲ್ಲಿ ಪಡೆಯುವಂತಾಗಬೇಕು ಆ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಪ್ರಯತ್ನಿಸುವಂತಾಗಲಿ ಎಂದು ಹೇಳಿದರು. ನಿವೃತ್ತ ಯೋಧ ಹರೀಶ್ ದೇವಂದಬೆಟ್ಟು, ಜೇಸಿಐ ಜೋಡುಮಾರ್ಗ ನೇತ್ರಾವತಿಯ ನಿಕಟ ಪೂರ್ವಾಧ್ಯಕ್ಷ ಹರಿಪ್ರಸಾದ್ ಕುಲಾಲ್, ಶಿಕ್ಷಕರಾದ ಭಾರತಿಹರೀಶ್, ದೇವದಾಸ್ ಕೆ.  ಪ್ರಕಾಶ್, ವರಮಹಾಲಕ್ಷ್ಮೀ, ಹರ್ಷ, ಶಾಲಾ ವಿದ್ಯಾರ್ಥಿ ನಾಯಕಿ ಸಾನ್ವಿ ಉಪಸ್ಥಿತರಿದ್ದರು. ಜೇಜೇಸಿ ಅಧ್ಯಕ್ಷೆ ರಶ್ಮಿತಾ ಸ್ವಾಗತಿಸಿ, ಅಳುಪ ಸಮಾಜವಿಜ್ಞಾನ ಸಂಘದ ಅಧ್ಯಕ್ಷೆ ಮನಸ್ವಿ ವಂದಿಸಿದರು.

ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.

Recent Posts