ಮಳೆಯಿಂದ ಹಾನಿಗಳು ಮುಂದುವರಿದಿದ್ದು, ಬಂಟ್ವಾಳ ತಾಲೂಕಿನಲ್ಲಿ ನದಿ ನೀರಿನ ಮಟ್ಟವೂ ಏರಿದೆ. ಜತೆಗೆ ರಸ್ತೆಗೆ ಮರ ಬಿದ್ದ ಪ್ರಕರಣಗಳೂ ವರದಿಯಾಗಿದ್ದು, ಇಡೀ ದಿನ ಸುರಿದ ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿತು.
ನೆಟ್ಲ ಮುಡ್ನೂರು ಗ್ರಾಮದ ಏಮಾಜೆ ಎಂಬಲ್ಲಿ ಹೊನ್ನಮ್ಮ ವಾಸ್ತವ್ಯದ ಮನೆಯಿಂದ ಪ್ರತ್ಯೇಕವಾಗಿ ಇರುವ ಕೊಟ್ಟಿಗೆ ಹಾನಿಯಾಗಿರುತ್ತದೆ.ನರಿಕೊಂಬು ಗ್ರಾಮದ ಶಾರದಾ ಬಿನ್ ನೀಲಪ್ಪರವರ ಮನೆಯ ಮೇಲೆ ಮರ ಬಿದ್ದು ಆಂಶಿಕ ಹಾನಿಯಾಗಿದೆ.ವೀರಕಂಭ ಗ್ರಾಮದ ಮಜ್ಜೋನಿ ಎಂಬಲ್ಲಿ ಭಾಗಿ ಎಂಬವರ ಕಚ್ಚಾ ಮನೆ ಮೇಲೆ ಮರ ಬಿದ್ದು ಹಾನಿಯಾಗಿದೆ. ಕರಿಯಂಗಳ ಗ್ರಾಮದ ಮಾರಿಯಮ್ಮ ಎಂಬವರ ಮನೆಯ ಮೇಲ್ಚಾವಣಿ ಕುಸಿದು ಭಾಗಶಃ ಹಾನಿಯಾಗಿದೆ. ಅಮ್ಮುಂಜೆ ಗ್ರಾಮದ ಕೊರಗಪ್ಪ ಎಂಬವರ ಮನೆಗೆ ತೆಂಗಿನ ಮರ ಬಿದ್ದು ಭಾಗಶಃ ಹಾನಿಯಾಗಿದೆ.ನರಿಕೊಂಬು ಗ್ರಾಮದ ಕರ್ಬೆಟ್ಟು ಎಂಬಲ್ಲಿ ಬಾಬು ಪೂಜಾರಿರವರ ಮನೆಯ ಮೇಲೆ ಮರ ಬಿದ್ದು ಆಂಶಿಕ ಹಾನಿಯಾಗಿದೆ.
ಕಳ್ಳಿಗೆ ಗ್ರಾಮದ ದಿವಾಕರ್ ಎಂಬವರ ಅಡಕೆ ತೋಟದಲ್ಲಿ ವ್ಯಾಪಕ ಹಾನಿಯಾಗಿದೆ. ಚೆನ್ನೈತ್ತೋಡಿ ಗ್ರಾಮದ ಕರಿಮಲೆ ಎಂಬಲ್ಲಿ ಶಿವರಾಮ ನಾಯಕ್ ಅವರ ಅಡಿಕೆ ತೋಟಕ್ಕೆ ಹಾನಿಯಾಗಿದೆ. ನಿನ್ನೆ ಬಂದ ಬಾರಿ ಗಾಳಿ, ಮಳೆಗೆ ಕುಕ್ಕಿಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಎಲಿಯನಡುಗೋಡು ಗ್ರಾಮದ ಉಪ್ಪಿರ ಅಂಗನವಾಡಿ ಮೇಲೆ ದೊಡ್ಡದಾದ ಮರ ಉರುಳಿ ಬಿದ್ದು ಅಪಾರ ಹಾನಿಯಾಗಿದೆ. ಕುರಿಯಾಳ ಗ್ರಾಮದ ದುರ್ಗಾನಗರ ನಿವಾಸಿ ಅಪ್ಪಿ ಮೂಲ್ಯ ಅವರ ಮನೆಗೆ ತೆಂಗಿನಮರ ಬಿದ್ದು ಹಾನಿಯಾಗಿದೆ. ಬಡಗಬೆಳ್ಳೂರು ಗ್ರಾಮದ ಬಾಳಿಕೆ ಎಂಬಲ್ಲಿ ವಾಸುದೇವ ಎಂಬವರ ಮನೆಗೆ ಮರ ಬಿದ್ದು ಹಾನಿಯಾಗಿದೆ. ವಿಟ್ಲಮುಡ್ನೂರು ಮುಡಾಯಿಮಾರು ಸತೀಶ್ ಶೆಟ್ಟಿ ಕೊಟ್ಟಿಗೆ ಮೇಲೆ ಮರ ಬಿದ್ದಿದೆ. ಕಾನತ್ತಡ್ಕರ ರಝಾಕ್ ಮನೆ ಮೇಲೆ ಮರ ಬಿದ್ದಿದೆ. ಪುದು ಗ್ರಾಮದ ಸುಜೀರ್ ಬದಿಗುಡ್ಡೆಯಲ್ಲಿ ಅಬುಬಕರ್ ಸಿದ್ದೀಕ್ ಮನೆ ಗೋಡೆ ಕುಸಿದಿದೆ.