ಬಂಟ್ವಾಳ: ಬೆಂಗಳೂರಿನಲ್ಲಿ ಕಳವಾಗಿದ್ದ ಬೈಕ್ ಒಂದು ಪೊಲೀಸರ ತಪಾಸಣೆ ವೇಳೆ ಬಂಟ್ವಾಳದಲ್ಲಿ ಪತ್ತೆಯಾಗಿದೆ. ಬಂಟ್ವಾಳ ಟ್ರಾಫಿಕ್ ಪೊಲೀಸ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಫರಂಗಿಪೇಟೆ ಎಂಬಲ್ಲಿ ಈ ಬೈಕ್ ತಪಾಸಣೆ ವೇಳೆ ದೊರಕಿದೆ.
ಡ್ಯೂಕ್ ಕಂಪೆನಿಗೆ ಸೇರಿದ ಬೈಕ್ ಇದಾಗಿದ್ದು,ಸದ್ಯ ಪೋಲೀಸರ ವಶದಲ್ಲಿದೆ. ಟ್ರಾಫಿಕ್ ಎಸ್.ಐ.ಸುತೇಶ್ ನೇತೃತ್ವದಲ್ಲಿ ಪೋಲೀಸ್ ತಂಡ ಫರಂಗಿಪೇಟೆ ಎಂಬಲ್ಲಿ ಸಂಜೆ ವೇಳೆ ವಾಹನ ತಪಾಸಣಾ ನಡೆಸುತ್ತಿರುವ ವೇಳೆ ಡ್ಯೂಕ್ ಬೈಕಿನಲ್ಲಿ ಬರುತ್ತಿದ್ದ ಸವಾರನನ್ನು ತಪಾಸಣೆ ಮಾಡುವ ಉದ್ದೇಶದಿಂದ ನಿಲ್ಲಿಸಲು ಸೂಚಿಸಿದಾಗ ಆತ ಬೈಕ್ ಬಿಟ್ಟು ಪರಾರಿಯಾಗಿದ್ದಾನೆ.
ಬಳಿಕ ಬೈಕ್ ನ್ನು ವಶಪಡಿಸಿಕೊಂಡ ಪೊಲೀಸರು ಬೈಕಿನ ಬಗ್ಗೆ ತಪಾಸಣೆ ನಡೆಸಿದಾಗ ಬೈಕಿನ ಮೂಲ ವಾಹನ ಸಂಖ್ಯೆಯನ್ನು ಬದಲಾಯಿಸಲಾಗಿತ್ತು. ವಾಹನದ ಇಂಜಿನ್ ಸಂಖ್ಯೆಯ ಆಧಾರದ ಮೇಲೆ ಪರಿಶೀಲನೆ ನಡೆಸಿದಾಗ ಇದು ಕಳವಾದ ಬೈಕ್ ಎಂಬುದು ಖಚಿತವಾಯಿತು. 2021 ರಲ್ಲಿ ಬೆಂಗಳೂರಿನಲ್ಲಿ ಈ ಬೈಕ್ ಕಳವಾಗಿರುವ ಮಾಹಿತಿ ಪಡೆದ ಪೋಲೀಸರು ಬೆಂಗಳೂರು ಪೊಲೀಸರಿಗೆ ಬೈಕ್ ನ್ನು ಹಸ್ತಾಂತರ ಮಾಡಲಿದ್ದಾರೆ.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…