ಎಸ್ .ಕೆ ಬೀಡಿ ವರ್ಕರ್ಸ್ ಫೆಡರೇಶನ್(ಎಐಟಿಯುಸಿ) ನೇತೃತ್ವದಲ್ಲಿ ಜಿಲ್ಲಾವ್ಯಾಪಿ ಹಕ್ಕೊತ್ತಾಯ ಚಳುವಳಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಬಿಸಿರೋಡಿನ ಬೀಡಿ ಸಂಸ್ಥೆಗಳೆದುರು ತುಟ್ಟಿಬತ್ತೆ ಹಾಗೂ ಕನಿಷ್ಠ ಕೂಲಿ ಜ್ಯಾರಿಗೊಳಿಸುವಂತೆ ಆಗ್ರಹಿಸಿ ಎಐಟಿಯುಸಿ ನೇತೃತ್ವದ ಯೂನಿಯನ್ ಗಳಾದ ಪಾಣೆಮಂಗಳೂರು ಫಿರ್ಕಾ ಬೀಡಿ ಎಂಡ್ ಜನರಲ್ ವರ್ಕರ್ಸ್ ಯೂನಿಯನ್ ಹಾಗೂ ಬಂಟ್ವಾಳ ತಾಲೂಕು ಬೀಡಿ ಎಂಡ್ ಜನರಲ್ ಲೇಬರ್ ಯೂನಿಯನ್ ನ ನೇತೃತ್ವದಲ್ಲಿ ಬೀಡಿ ಕಾರ್ಮಿಕರು ಪ್ರತಿಭಟನೆ ನಡೆಸಿ ಮನವಿ ಅರ್ಪಿಸಿದರು.
ಕೋರ್ಟು ಆದೇಶದಂತೆ ಬಾಕಿ ತುಟ್ಟಿಭತ್ತೆ ಮೊತ್ತವನ್ನು ಬೀಡಿ ಮಾಲಕರು ಪಾವತಿಸಿದಲ್ಲಿ ಕಾರ್ಮಿಕರಿಗೆ ಸ್ವಲ್ಪ ಅನುಕೂಲವಾಗಬಹುದು. ಬಾಕಿಯಿರಿಸಿದ ತುಟ್ಟಿ ಭತ್ತೆ ಮೊತ್ತವನ್ನು ತಕ್ಷಣ ಪಾವತಿಸುವಂತೆ ಒತ್ತಾಯಿಸಿ ಬೀಡಿ ಸಂಸ್ಥೆಯ ವ್ಯವಸ್ಥಾಪಕರ ಮುಖಾಂತರ ಮಾಲೀಕರಿಗೆ ಮನವಿಯನ್ನು ಅರ್ಪಿಸಲಾಯಿತು.
ಎಸ್ ಕೆ ಬೀಡಿ ವರ್ಕರ್ಸ್ ಫೆಡರೇಶನ್ ನಾಯಕರಾದ ಎಂ.ಕರುಣಾಕರ್, ಎಐಟಿಯುಸಿ ಜಿಲ್ಲಾ ಉಪಾಧ್ಯಕ್ಷ ಬಿ.ಶೇಖರ್, ಸಿಪಿಐ ಮಾಜಿ ಜಿಲ್ಲಾ ಕಾರ್ಯದರ್ಶಿ ವಿ.ಕುಕ್ಯಾನ್ ಪಾಣೆ ಮಂಗಳೂರು ಪೀರ್ಕಾ ಬೀಡಿಯೂನಿಯನ್ ಅಧ್ಯಕ್ಷೆ ಉಮಾವತಿ ಕುರ್ನಾಡು ಎಸ್ ಕೆ ಬೀಡಿ ವರ್ಕರ್ಸ್ ಫೆಡರೇಶನ್ ಅಧ್ಯಕ್ಷರಾದ ಸೀತಾರಾಮ ಬೇರಿಂಜ, ಪಾಣೆ ಮಂಗಳೂರು ಪೀರ್ಕಾ ಬೀಡಿಯೂನಿಯನ್ ನ ಪ್ರಧಾನ ಕಾರ್ಯದರ್ಶಿ ಸುರೇಶ್ ಕುಮಾರ್, ಬಂಟ್ವಾಳ ತಾಲೂಕುಬೀಡಿ ಲೇಬರ್‌ಯೂನಿಯನ್ ನ ಅಧ್ಯಕ್ಚರಾದ ಬಿ.ಬಾಬು ಭಂಡಾರಿ, ಸಹ ಕಾರ್ಯದರ್ಶಿಗಳಾದ ಕೇಶವತಿ, ಹರ್ಷಿತ್, ಶಮಿತಾ, ಮಮತಾ, ಎಐಟಿಯುಸಿ ಜಿಲ್ಲಾ ನಾಯಕರಾದ ವಿ.ಕುಕ್ಯಾನ್, ಬೀಡಿ ಎಂಡ್ ಟೊಬೆಕ್ಕೊ ಲೇಬರ್ ಯೂನಿಯನ್ ಮಂಗಳೂರು ಅಧ್ಯಕ್ಷೆ ಸುಲೋಚನಾ ಕವತಾರು, ಉಪಾಧ್ಯಕ್ಷರಾದ ತಿಮ್ಮಪ್ಪ ಕಾವೂರು ಉಪಸ್ಥಿತರಿದ್ದರು. ನೇತೃತ್ವವನ್ನು ಎಐಟಿಯುಸಿ ಮುಖಂಡರುಗಳಾದ ಕುಸುಮ ಕಳ್ಳಿಗೆ, ವಿಶ್ವನಾಥ ಕಳ್ಳಿಗೆ, ಎಂ.ಬಿ. ಭಾಸ್ಕರ, ಮೋಹನ್ ಅರಳ, ರೋಹಿಣಿ ಕುರ್ನಾಡು, ಮೋಹಿನಿ ಬಿ.ಸಿರೋಡು ಮುಂತಾದವರು ವಹಿಸಿದ್ದರು. ಸುರೇಶ್‌ಕುಮಾರ್ ಸ್ವಾಗತಿಸಿ ವಂದಿಸಿದರು.