ಕಾಂಗ್ರೆಸ್ ಪರಮೋಚ್ಛ ನಾಯಕ ರಾಹುಲ್ ಗಾಂಧಿ ಅವರ ಲೋಕಸಭಾ ಸದಸ್ಯತ್ವ ಸ್ಥಾನಕ್ಕೆ ಅನರ್ಹಗೊಳಿಸಿದ ವಿಚಾರವನ್ನು ಖಂಡಿಸಿ ಬಂಟ್ವಾಳ ಮತ್ತು ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ವತಿಯಿಂದ ತಾಲೂಕು ಆಡಳಿತ ಸೌಧದ ಮುಂಭಾಗ ಬಿ.ಸಿ.ರೋಡಿನಲ್ಲಿ ಮೌನ ಪ್ರತಿಭಟನೆ ಬುಧವಾರ ಮಾಜಿ ಸಚಿವ ಬಿ.ರಮಾನಾಥ ರೈ ನೇತೃತ್ವದಲ್ಲಿ ನಡೆಯಿತು.
ಈ ಸಂದರ್ಭ ಸ್ಥಳದಲ್ಲಿ ಸೇರಿಕೊಂಡ ತಾಲೂಕಿನ ಕಾಂಗ್ರೆಸ್ ಮುಖಂಡರು ಫಲಕಗಳನ್ನು ಹಿಡಿದುಕೊಂಡು ಇಡೀ ದಿನ ಕುಳಿತರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬೇಬಿ ಕುಂದರ್, ಸುದೀಪ್ ಕುಮಾರ್ ಶೆಟ್ಟಿ, ಪ್ರಮುಖ ಮುಖಂಡರಾದ ಸುದರ್ಶನ ಜೈನ್, ಪದ್ಮಶೇಖರ ಜೈನ್, ಲುಕ್ಮಾನ್ ಬಂಟ್ವಾಳ, ಬಿ.ಎಚ್. ಖಾದರ್, ಅಶ್ವನಿ ಕುಮಾರ್ ರೈ, ಮಲ್ಲಿಕಾ ಶೆಟ್ಟಿ, ಸುಭಾಶ್ಚಂದ್ರ ಶೆಟ್ಟಿ, ಸದಾಶಿವ ಬಂಗೇರ, ಸುರೇಶ್ ಜೋರಾ, ಲವೀನಾ ವಿಲ್ಮಾ ಮೊರಾಸ್, ಮಹಮ್ಮದ್ ಶರೀಫ್, ವೆಂಕಪ್ಪ ಪೂಜಾರಿ, ಜೆಸಿಂತಾ ಡಿಸೋಜಾ, ಪರಮೇಶ್ವರ ಮೂಲ್ಯ, ಲೋಲಾಕ್ಷ ಶೆಟ್ಟಿ, ಮಹಮ್ಮದ್ ನಂದವಾರ, ಸುರೇಶ್ ಜೋರಾ, ಸದಾನಂದ ಶೆಟ್ಟಿ, ಬೊಂಡಾಲ ಚಿತ್ತರಂಜನ್ ಶೆಟ್ಟಿ, ಪದ್ಮನಾಭ ರೈ ಮತ್ತಿತರರು ಉಪಸ್ಥಿತರಿದ್ದರು.(ಇನ್ನಷ್ಟು ಚಿತ್ರಗಳಿಗೆ SCROLL ಮಾಡಿರಿ)
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…