ಬಂಟ್ವಾಳ

ಗುರುವಾರ ಮಳೆಗೆ ಬಂಟ್ವಾಳ ತಾಲೂಕಿನ ಹಲವೆಡೆ ಹಾನಿ: ವಿವರಗಳಿಗೆ ಈ ಲಿಂಕ್ ಕ್ಲಿಕ್ ಮಾಡಿ

ಗುರುವಾರ ಮಳೆಗೆ ಬಂಟ್ವಾಳ ತಾಲೂಕಿನ ಹಲವೆಡೆ ಹಾನಿಗಳು ಸಂಭವಿಸಿವೆ. ಅವುಗಳ ಕೆಲ ಚಿತ್ರಗಳು ಕೆಳಗಿವೆ. ವಿವರಗಳು ಹೀಗಿವೆ.

ಬಾಳ್ತಿಲ ಗ್ರಾಮದ ಕಲ್ಲಡ್ಕ ಎಂಬಲ್ಲಿ ವಸಂತ ಆಚಾರ್ಯರವರ ಮನೆಯ ಕಂಪೌಂಡ್ ಶ್ರೀರಾಮ‌ ಶಾಲೆಯ ಆಟದ ಮೈದಾನದ ಆವರಣಕ್ಕೆ ಬಿದ್ದು ಹಾನಿಯಾಗಿದೆ. ನಾವೂರು ಗ್ರಾಮದ ಪೂಪಾಡಿಕಟ್ಟೆ ಎಂಬಲ್ಲಿ ಪಿಡಬ್ಲ್ಯುಡಿ ರಸ್ತೆ ಬದಿ ಧರೆ ಕುಸಿದಿದ್ದು ಲೋಕೋಪಯೋಗಿ ಇಲಾಖೆಯೊಂದಿಗೆ ಸ್ಥಳ ತನಿಖೆ ನಡೆಸಿ ಅಪಾಯದ ಸ್ಥಿತಿಯಲ್ಲಿರುವ ಮನೆ ಗೆ ಸ್ಥಳಾಂತರ ದ ಬಗ್ಗೆ ತಿಳುವಳಿಕೆ ಪತ್ರ ನೀಡಲಾಯಿತು ಎಂದು ಕಂದಾಯ ಇಲಾಖಾಧಿಕಾರಿಗಳು ಮಾಹಿತಿ ನೀಡಿದ್ದಾರೆ.ಬಡಗಕಜೆಕಾರು ಗ್ರಾಮದ ಕೋಮಿನಡ್ಕ ಎಂಬಲ್ಲಿರುವ ಇಸುಬ ಬ್ಯಾರಿ ರವರ ಮನೆಗೆ ಆವರಣದ ಗೋಡೆ ಕುಸಿದು ಬಿದ್ದಿರುವುದರಿಂದ ಮನೆಗೆ ಹಾನಿಯಾಗಿದೆ. ಕೊಳ್ನಾಡು ಗ್ರಾಮದ ತಾಮರಾಜೆ ಎಂಬಲ್ಲಿ ಉಮಾವತಿ ಎಂಬವರ ಮನೆಗೋಡೆಗೆ ಕಂಪೌಂಡ್ ಕುಸಿದು ತೀವ್ರ ಹಾನಿಯಾಗಿರುತ್ತದೆ.

ಪುದು ಗ್ರಾಮದ ಕಬೆಲ ಎಂಬಲ್ಲಿ ಶರ್ಮಿಳಾ ಎಂಬವರ ಮನೆ ತಡೆಗೋಡೆ ಆವರಣ ಕುಸಿದುಬಿದ್ದಿದ್ದು, ಅವರನ್ನು ಬೇರೆಡೆಗೆ ಸ್ಥಳಾಂತರಿಸಲಾಗಿದೆ. ಕರಿಯಂಗಳ ಗ್ರಾಮದ ಸಲಾಂ ಎಂಬವರ ಮನೆಯ ಹಿಂಬದಿಯ ಮಣ್ಣು ಕುಸಿದು ಮನೆಗೆ ಬಾಗಶ ಹಾನಿಯಾಗಿರುತ್ತದೆ. ಸಂಗಬೆಟ್ಟು ಗ್ರಾಮದ ಕುಮರೊಟ್ಟು ಎಂಬಲ್ಲಿ ದೇಜಪ್ಪ ಮೂಲ್ಯ ಅವರ ಮನೆಗೆ ತೀವ್ರ ಹಾನಿಯಾಗಿದೆ. ಮನೆಯವರನ್ನು ಹತ್ತಿರದ ಮನೆಗೆ ಸ್ಥಳಾಂತರಿಸಲಾಗಿದೆ.ಕೊಳ್ನಾಡು ಗ್ರಾಮದ ಪಂಜರಕೋಡಿ ಎಂಬಲ್ಲಿ ಜೈನಾಭ ರವರ ಮನೆ ಪಕ್ಕದಲ್ಲಿನ ತಡೆಗೋಡೆ ಕುಸಿದು ಪಕ್ಕದ ಮನೆಯವರಾದ ಅಲಿಮ ರವರ ಮನೆ ಗೋಡೆ ಮೇಲೆ ಬಿದ್ದು ಎರಡೂ ಮನೆಗಳು ತೀವ್ರ ಹಾನಿಯಾಗಿರುತ್ತದೆ ಎರಡೂ ಮನೆಯವರು ಪಕ್ಕದ ಸಂಬಂಧಿಕರ ಮನೆಗೆ ಸ್ಥಳಾಂತರವಾಗಿದ್ದಾರೆ. ಬಾಳ್ತಿಲ ಗ್ರಾಮದ ನೀರಪಾದೆ ಎಂಬಲ್ಲಿ ಶೀನಪ್ಪ ಮೂಲ್ಯ ರವರ ಮನೆಗೆ ತೀವ್ರ ಹಾನಿಯಾಗಿರುತ್ತದೆ ಅವರನ್ನು ಸಂಬಂಧಿಕರ ಮನೆಗೆ ಸ್ಥಳಾಂತರಗೊಳಿಸಲಾಗಿದೆ. ಅರಳ ಗ್ರಾಮದ ಹಸನಬ್ಬ ಮನೆಯ ತಡೆಗೋಡೆ ಕುಸಿದುಬಿದ್ದಿದೆ. ಬಾಳ್ತಿಲ ಗ್ರಾಮದ ಬೆರ್ಕಳ ಎಂಬಲ್ಲಿ ಧರ್ಣಪ್ಪ ಪೂಜಾರಿ ಅವರ ಮನೆ ಬದಿಯ ಬರೆ ಜರಿದಿರುತ್ತದೆ. ವಿಟ್ಲ ಕಸಬಾ ಗ್ರಾಮದ ನೆಕ್ಕರೆ ಎಂಬಲ್ಲಿ ಮನೆಯ ಕಂಪೌಂಡ್ ಒಂದು ಕುಸಿದುಬಿದ್ದಿದೆ. ಅರಳ ಗ್ರಾಮದ ಬೇಬಿ ರವರ  ಮನೆಗೆ ಮರ ಬಿದ್ದು ಬಾಗಶಃ ಹಾನಿಯಾಗಿದೆ. ಬಂಟ್ವಾಳ ತಾಲೂಕಿನ ಪಾಣೆಮಂಗಳೂರು ಸಮೀಪದ ಬೋಳಂಗಡಿಯಲ್ಲಿ ನೆಲಕಚ್ಚುವ ಆತಂಕದಲ್ಲಿ ಮನೆಯವರಿದ್ದಾರೆ. ಬೋಳಂಗಡಿಯ ನಿವಾಸಿ ಇಬ್ರಾಹೀಂ ಎಂಬವರಿಗೆ ಸೇರಿದ ಮನೆಯ ಮುಂಭಾಗದಲ್ಲಿ ಕುಸಿತವಾಗಿದೆ. ಇದರಿಂದಾಗಿ ಸುಮಾರು ನಾಲ್ಕೈದು ಮನೆಗಳಿಗೆ ರಸ್ತೆ ಸಂಪರ್ಕ ಕಡಿತವಾಗಿದೆ. ಭಾರೀ ಮಳೆಯಿಂದಾಗಿ ವಿಟ್ಲ-ಮಂಗಳೂರು ರಸ್ತೆಯ ವೀರಕಂಭ ಸಮೀಪ ಗುಡ್ಡವೊಂದು ರಸ್ತೆಗೆ ಕುಸಿದು ಬಿದ್ದ ಹಿನ್ನೆಲೆಯಲ್ಲಿ‌ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತು. ವೀರಕಂಭ ಶಾಲೆ ಸಮೀಪ ಇರುವ ಗುಡ್ಡ ಕುಸಿದು ಬಿದ್ದಿರುವ ಹಿನ್ನೆಲೆಯಲ್ಲಿ ನೀರು ರಸ್ತೆಯಲ್ಲಿ ಹರಿಯುತ್ತಿದ್ದು, ಮಣ್ಣೆಲ್ಲಾ ರಸ್ತೆಗೆ ಬಿದ್ದಿತ್ತು.

ಬಾಳ್ತಿಲ ಗ್ರಾಮದ ಬೆರ್ಕಳ ಎಂಬಲ್ಲಿ ಧರ್ಣಪ್ಪ ಪೂಜಾರಿ ಅವರ ಮನೆ ಬದಿಯ ಬರೆ ಜರಿದಿರುತ್ತದೆ.

ಬಡಗಕಜೆಕಾರು ಗ್ರಾಮದ ಕೋಮಿನಡ್ಕ ಎಂಬಲ್ಲಿರುವ ಇಸುಬ ಬ್ಯಾರಿ ರವರ ಮನೆಗೆ ಆವರಣದ ಗೋಡೆ ಕುಸಿದು ಬಿದ್ದಿರುವುದರಿಂದ ಮನೆಗೆ ಹಾನಿಯಾಗಿದೆ.

ಕೊಳ್ನಾಡು ಗ್ರಾಮದ ತಾಮರಾಜೆ ಎಂಬಲ್ಲಿ ಉಮಾವತಿ ಎಂಬವರ ಮನೆಗೋಡೆಗೆ ಕಂಪೌಂಡ್ ಕುಸಿದು ತೀವ್ರ ಹಾನಿಯಾಗಿರುತ್ತದೆ.

 

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Recent Posts