BANTWAL RAIN: ಬಂಟ್ವಾಳ ತಾಲೂಕಿನಾದ್ಯಂತ ಮಳೆಯಾಗುತ್ತಿದ್ದು ಹಲವೆಡೆ ಅನಾಹುತಗಳಾಗಿವೆ. ಅಲ್ಲಲ್ಲಿ ಗುಡ್ಡ ಜರಿತ, ಮನೆಗಳಿಗೆ ಹಾನಿ ಸಂಭವಿಸಿದ್ದು, ಸಾರ್ವಜನಿಕರು ತೊಂದರೆ ಅನುಭವಿಸಬೇಕಾಯಿತು.
ಭಾರೀ ಮಳೆಯಿಂದಾಗಿ ವಿಟ್ಲ-ಮಂಗಳೂರು ರಸ್ತೆಯ ವೀರಕಂಭ ಸಮೀಪ ಗುಡ್ಡವೊಂದು ರಸ್ತೆಗೆ ಕುಸಿದು ಬಿದ್ದ ಹಿನ್ನೆಲೆಯಲ್ಲಿ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತು. ವೀರಕಂಭ ಶಾಲೆ ಸಮೀಪ ಇರುವ ಗುಡ್ಡ ಕುಸಿದು ಬಿದ್ದಿರುವ ಹಿನ್ನೆಲೆಯಲ್ಲಿ ನೀರು ರಸ್ತೆಯಲ್ಲಿ ಹರಿಯುತ್ತಿದ್ದು, ಮಣ್ಣೆಲ್ಲಾ ರಸ್ತೆಗೆ ಬಿದ್ದಿತ್ತು.