ಬಂಟ್ವಾಳದ ಬಿ.ಸಿ.ರೋಡ್ ಕೈಕಂಬ ಎಂಬಲ್ಲಿ ವಸತಿಸಂಕೀರ್ಣವೊಂದರ ಮಹಡಿಯಲ್ಲಿ ಡಿಶ್ ರಿಪೇರಿ ಮಾಡಲೆಂದು ಬಂದ ಯುವಕನೋರ್ವ ಆಯತಪ್ಪಿ ಕೆಳಗೆ ಬಿದ್ದು ಸಾವನ್ನಪ್ಪಿದ್ದಾರೆ.
ಆಚಾರಿಪಲ್ಕೆ ನಿವಾಸಿ ಯತೀಶ್ (32) ಮೃತಪಟ್ಟವರು. ಇವರು ಶುಕ್ರವಾರ ಮಧ್ಯಾಹ್ನದ ವೇಳೆ ಮನೆಯೊಂದರ ಡಿಶ್ ರಿಪೇರಿ ಮಾಡುವ ಸಂದರ್ಭ ಮೂರನೇ ಮಹಡಿಯಿಂದ ಕೆಳಗೆ ಬಿದ್ದಿದ್ದಾರೆ. ಬೀಳುವ ಸಂದರ್ಭ ಬಾವಿಯ ಮೇಲಿನ ರಕ್ಷಣಾ ಬೇಲಿ ಮೇಲೆ ಬಿದ್ದಿದ್ದು, ತಲೆಗೆ ಗಾಯವಾಯಿತು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಪ್ರಯೋಜನವಾಗಲಿಲ್ಲ.
ನಿಯಮ 377ರ ಅಡಿಯಲ್ಲಿ ಸಮುದ್ರ ತೀರದ ಪವನ ಸಾಮರ್ಥ್ಯದ ಬಗ್ಗೆ ಲೋಕಸಭೆ ಗಮನಸೆಳೆದ ಸಂಸದ ಕ್ಯಾ. ಚೌಟ (more…)