ಬುಧವಾರ ರಾತ್ರಿಯಿಂದೀಚೆಗೆ ಬಂಟ್ವಾಳ ತಾಲೂಕಿನಲ್ಲಿ ಪ್ರಾಕೃತಿಕ ವಿಕೋಪದಿಂದ ಹಲವೆಡೆ ಹಾನಿಗಳು ಸಂಭವಿಸಿವೆ. ಈಗಾಗಲೇ ತಾಲೂಕು ಕಚೇರಿಯಿಂದ ಪ್ರಕೃತಿ ವಿಕೋಪಗಳು ಎದುರಾದಾಗ ಸಂಪರ್ಕಿಸಲು ಕಂಟ್ರೋಲ್ ರೂಮ್ ತೆರೆಯಲಾಗಿದ್ದು, ದೂರವಾಣಿ ಸಂಖ್ಯೆಗೆ ಕರೆ ಮಾಡಿ ಅಪಾಯಗಳ ವಿವರವನ್ನು ನೀಡಬಹುದು ಎಂದು ತಹಸೀಲ್ದಾರ್ ತಿಳಿಸಿದ್ದಾರೆ. ಕಂಟ್ರೋಲ್ ರೂಮ್ ದೂರವಾಣಿ ಸಂಖ್ಯೆ ಹೀಗಿದೆ.
08255232500 ಗೆ ಕರೆ ಮಾಡಿ ಮಾಹಿತಿಯನ್ನು ಸಾರ್ವಜನಿಕರು ನೀಡಬಹುದು ಹಾಗೂ ಪಡೆಯಬಹುದು ಎಂದು ತಹಸೀಲ್ದಾರ್ ಪ್ರಕಟಣೆಯಲ್ಲಿ ತಿಳಿಸಿ್ದಾರೆ.
ವೀರಕಂಭ ಗ್ರಾಮದ ಗುಡ್ಡ ತೋಟ ಖಾನ ಎಂಬಲ್ಲಿ ರೇವತಿ ಎಂಬವರ ಮನೆ ಮೇಲೆ ಮರ ಬಿದ್ದು ಭಾಗಶ: ಹಾನಿಯಾಗಿರುತ್ತದೆ. ಬಂಟ್ವಾಳ ಕಸಬಾ ಗ್ರಾಮದ ಅರಬ್ಬಿ ಗುಡ್ಡೆ ಮನೆ ನಿವಾಸಿ ಜಯ ಕುಲಾಲ್ ಬಿನ್ ಈಶ್ವರ ಮೂಲ್ಯ ಅವರ ವಾಸ್ತವ್ಯದ ಮನೆಗೆ ಇಂದು ಮುಂಜಾನೆ ತೆಂಗಿನ ಮರ ಬಿದ್ದು ಮನೆಗೆ ಭಾಗಶಃ ಹಾನಿ ಆಗಿರುತ್ತದೆ ಯಾವುದೇ ಪ್ರಾಣ ಜೀವ ಹಾನಿ ಆಗಿರುವುದಿಲ್ಲ.
ಬಂಟ್ವಾಳ ಬಿ.ಸಿ.ರೋಡಿನ ಅಜ್ಜಿಬೆಟ್ಟು ಎಂಬಲ್ಲಿ ಮನೆಯೊಂದರ ಸಮೀಪ ಮಣ್ಣು ಜರಿದು ಮನೆಗೆ ಅಪಾಯವಾಗುವ ಸಂಭವ ಇರುವ ಹಿನ್ನೆಲೆಯಲ್ಲಿ ಕಂದಾಯ ಇಲಾಖಾಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದರು. ರವಿರಾಜ್ ಆಳ್ವ ಅವರ ಮನೆಗೆ ಇಲಾಖೆ ಸಿಬಂದಿ ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸಿದರು. ವಿಟ್ಲ ಕಸಬಾ ಗ್ರಾಮದ ಉಕ್ಕುಡ, ಕಲ್ಲುರ್ಟಿಯಡ್ಕ ಗೌರಿ ಯಾನೆ ಸರೋಜ ಮನೆ ಛಾವಣಿ ಭಾಗಶಃ ಹಾನಿಯಾಗಿದೆ.