ಬಂಟ್ವಾಳ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಕಾವೇರಿ 2.0 ತಂತ್ರಾಂಶ ಅಳವಡಿಸಲಾಗಿದೆ. ರಾಜ್ಯದ ಬಹುತೇಕ ಎಲ್ಲ ಜಿಲ್ಲೆಗಳ ಉಪನೋಂದಾವಣಿ ಕಚೇರಿಗಳಲ್ಲಿ ಈ ತಂತ್ರಾಂಶ ಬಳಕೆಯಾಗುತ್ತಿದ್ದು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇದೇ ಮೊದಲ ಬಾರಿ ಅನುಷ್ಠಾನವಾಗುತ್ತಿದೆ. ಜಿಲ್ಲೆಯ 9 ಉಪನೋಂದಣಾಧಿಕಾರಿ ಕಚೇರಿಗಳ ಪೈಕಿ ಪ್ರಥಮವಾಗಿ ಬಂಟ್ವಾಳ ಉಪನೋಂದಾವಣಿ ಕಚೇರಿಯಲ್ಲಿ ಕಾವೇರಿ 2.0 ಅಳವಡಿಕೆಯಾಗಿದೆ. ಬಂಟ್ವಾಳ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಕಾವೇರಿ 2.0 ತಂತ್ರಾಂಶ ಅಳವಡಿಕೆಯಾಗಿದ್ದು, ಇದನ್ನು ದಕ್ಷಿಣ ಕನ್ನಡ ಜಿಲ್ಲಾ ನೋಂದಣಾಧಿಕಾರಿ ಸೈಯದ್ ನೂರ್ ಪಾಷಾ ಎಸ್. ಅವರು ಚಾಲನೆ ನೀಡಿದರು. ಗುರುವಾರ ಬೆಳಗ್ಗೆ ಬಂಟ್ವಾಳ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಪ್ರಥಮ ನೋಂದಣಿಯನ್ನು ಆಶಿಕ್ ಕುಕ್ಕಾಜೆ ಅವರು ಶೌಕತ್ ಅಲಿ ಅವರಿಗೆ ದಸ್ತಾವೇಜು ನೋಂದಾಯಿಸುವ ಮೂಲಕ ಮಾಡಲಾಯಿತು. ಈ ಸಂದರ್ಭ ಸಿಎಂಎಸ್ ನ ಮೈಸೂರು ವಿಭಾಗದ ಅಸಿಸ್ಟೆಂಟ್ ಮೆನೇಜರ್ ನರೇಂದ್ರ ನಾಯಕ್ ಬಂಟ್ವಾಳ ಉಪನೋಂದಣಾಧಿಕಾರಿ ಕವಿತಾ ಎ.ಸಿ. ಈ ಸಂದರ್ಭ ಉಪಸ್ಥಿತರಿದ್ದರು.