ಬಿ.ಸಿ.ರೋಡ್ ನ ಹೃದಯಭಾಗದಲ್ಲಿ ಭೂ ಅಭಿವೃದ್ಧಿ ಬ್ಯಾಂಕಿನ ಎದುರು ಪ್ರತಿ ಮಳೆಗಾಲದಲ್ಲೂ ನೀರು ಹರಿದುಹೋಗುವ ಸಮಸ್ಯೆ. ಇದರಿಂದಾಗಿ ಸಣ್ಣ ಮಳೆಯಾದರೂ ರಸ್ತೆ ತುಂಬಾ ನೀರು ನಿಲ್ಲುತ್ತದೆ. ಪಾದಚಾರಿಗಳಿಗೆ ನಡೆದಾಡಲೂ ಕಷ್ಟ. ವಾಹನಗಳು ನಿಧಾನವಾಗಿ ಹೋದರೂ ನೀರು ಚಿಮ್ಮುತ್ತದೆ. ಇಂಥ ಸನ್ನಿವೇಶ ಕಳೆದ ಮೂರು ದಿನಗಳಿಂದ ನಿರ್ಮಾಣವಾಗಿದೆ. ಈ ಕುರಿತು ಬಂಟ್ವಾಳನ್ಯೂಸ್ ಎರಡು ದಿನಗಳ ಹಿಂದೆ ಮಾಹಿತಿಯನ್ನು ಒದಗಿಸಿತ್ತು. ಇಂದು ಚರಂಡಿಯಲ್ಲಿ ಮಣ್ಣು ಬ್ಲಾಕ್ ಆಗಿ ನೀರು ಸರಾಗವಾಗಿ ಹೋಗದ ಹಿನ್ನೆಲೆಯಲ್ಲಿ ಅದನ್ನು ನಿವಾರಿಸುವ ಕೆಲಸ ಕಾರ್ಯಗಳು ನಡೆದವು.