ಬಂಟ್ವಾಳ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅಭಿನಂದನೆ, ಬೀಳ್ಕೊಡುಗೆ ಸಮಾರಂಭ ಸೋಮವಾರ ನಡೆಯಿತು.
ಬಂಟ್ವಾಳ: ಕಾಮಾಜೆಯಲ್ಲಿರುವ ಬಂಟ್ವಾಳ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನ್ಯಾಕ್ ಮೌಲ್ಯಮಾಪನ ಅಭಿನಂದನಾ ಸಮಾರಂಭ, ಬೀಳ್ಕೊಡುಗೆ, ಹಾಗೂ ಹೊಸದಾಗಿ ಬಂದಿರುವ ಉಪನ್ಯಾಸಕರಿಗೆ ಸ್ವಾಗತ ಸಮಾರಂಭಗಳನ್ನು ಆಯೋಜಿಸಲಾಯಿತು.
ಹದಿಮೂರು ವರ್ಷ ಗಳಿಂದ ಕರ್ತವ್ಯ ಸಲ್ಲಿಸುತ್ತಿದ್ದ ಗ್ರಂಥಪಾಲಕರರಾದ ಪುಟ್ಟೇಗೌಡ, ಮತ್ತು ದೈಹಿಕ ಶಿಕ್ಷಣ ನಿರ್ದೇಶಕಿ ಡಾ ಅಪರ್ಣಾ ಆಳ್ವ ಅವರನ್ನು ಗೌರವಿಸಿ ಬೀಳ್ಕೊಡಲಾಯಿತು. ಈ ಸಂದರ್ಭ ಉಪಸ್ಥಿತರಿದ್ದ ಕಾಲೇಜಿನ ಅಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷ ಪ್ರಸಾದ್ ಕುಮಾರ್ ರೈ, ಕಾಲೇಜಿನ NAAC ಮೌಲ್ಯಮಾಪನದಲ್ಲಿ B+ ಅಂಕ ಗಳಿಸಲು ಸಹಕಾರ ನೀಡಿದ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳನ್ನು ಅಭಿನಂದಿಸಿದರು. ಅಭಿನಂದನಾ ಭಾಷಣ ವನ್ನು ಪ್ರೊ. ಹೈದರಾಲಿ ಮಾಡಿದರು , ಹೊಸದಾಗಿ ಕಾಲೇಜಿಗೆ ಸೇರ್ಪಡೆಯಾದ ಪ್ರೊ. ಶಶಿಕಲಾ ಮತ್ತು ಪ್ರೊ, ಶ್ರೀಜಾ ಅವರನ್ನು ಸ್ವಾಗತಿಸಲಾಯಿತು., ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಡಾ ಪ್ರಕಾಶಚಂದ್ರ ಬಿ ಶುಭ ಹಾರೈಸಿದರು. ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಪ್ರೊ ಅಚ್ಯುತ ಪೂಜಾರಿ ಸ್ವಾಗತಿಸಿದರು, ಡಾ ಸತೀಶ್ ಗಟ್ಟಿ ವಂದಿಸಿದರು
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…