2024 ರ ಫೆ.21 ರಂದು ಬಿಸಿರೋಡಿನ ಶ್ರೀ ಅನ್ನಪೂರ್ಣೇಶ್ವರಿ ದೇವಿ ದೇವಸ್ಥಾನದ ಬ್ರಹ್ಮಕಲಶೋತ್ಸವ ಕಾರ್ಯ ನಡೆಯಲಿದ್ದು, ಇದರ ಪೂರ್ವಭಾವಿಯಾಗಿ ಇಂದು ಮೇ.28ರ ಭಾನುವಾರ ಅನುಜ್ಞಾ ಕಲಶದ ಬಳಿಕ ದೇವರ ಬಾಲಾಲಯ ಪ್ರತಿಷ್ಢೆ ಕಾರ್ಯ ನಡೆಯಿತು. ಬಳಿಕ ದೇವಾಲಯದ ಸಮಿತಿ, ವಿವಿಧ ಸಂಘ ಸಂಸ್ಥೆಗಳು ಹಾಗೂ ಊರಪರ ಊರಿನ ಭಕ್ತರು ಶ್ರಮದಾನದ ಮೂಲಕ ದೇವಾಲಯದ ಜೀರ್ಣೋದ್ಧಾರ ಕಾರ್ಯದ ಪ್ರಥಮ ಅಂಗವಾಗಿ ದೇವಸ್ಥಾನದ ಹಂಚು ತೆಗೆಯುವ ಕಾರ್ಯ ನಡೆಯಿತು.
ಜೂನ್ 12ರಂದು ಜೀರ್ಣೋದ್ಧಾರ ಮತ್ತು ನವೀಕರಣಕ್ಕೆ ಶಂಕುಸ್ಥಾಪನೆ ನಡೆಯಲಿದೆ.ಅದೇ ದಿನ ಜೀರ್ಣೋದ್ಧಾರ ಕಾರ್ಯದ ಬಗ್ಗೆ ಬ್ರಹ್ಮಕಲಶ ಸಮಿತಿಯನ್ನು ರಚಿಸುವ ಬಗ್ಗೆ ಬೆಳಿಗ್ಗೆ 10 ಗಂಟೆಗೆ ಸಭೆ ನಡೆಯಲಿದ್ದು ಭಕ್ತರು ಆಗಮಿಸುವಂತೆ ವಿನಂತಿ ಮಾಡಿದ್ದಾರೆ. ದೇವಾಲಯದ ಜೀರ್ಣೋದ್ಧಾರದ ಅಂಗವಾಗಿ ದೈನಂದಿನ ಪೂಜಾ ಕೈಕಂರ್ಯಗಳಲ್ಲಿ ಬದಲಾವಣೆಯಾಗಿದೆ ಎಂದು ಸಮಿತಿ ತಿಳಿಸಿದ್ದು, ಬೆಳಿಗ್ಗೆ 8 ಗಂಟೆಗೆ ಮತ್ತು ರಾತ್ರಿ 7.30 ಕ್ಕೆ ದಿನಕ್ಕೆ ಎರಡು ಬಾರಿ ಮಾತ್ರ ಪೂಜೆ ನಡೆಯಲಿದೆ ಭಕ್ತರು ಸಹಕರಿಸುವಂತೆ ವಿನಂತಿ ಮಾಡಿದ್ದಾರೆ.
ಈ ಸಂದರ್ಭದಲ್ಲಿ ದೇವಾಲಯದ ಆಡಳಿತ ಮಂಡಳಿ ಅಧ್ಯಕ್ಷ ಭುವನೇಶ್ ಪಚ್ಚಿನಡ್ಕ, ಗೌರವಾಧ್ಯಕ್ಷ ಜಗನ್ನಾಥ ಚೌಟ, ಪ್ರಧಾನ ಕಾರ್ಯದರ್ಶಿ ಜಗನ್ನಾಥ ಶೆಟ್ಟಿ, ಉಪಾಧ್ಯಕ್ಷ ಆನಂದ, ಪ್ರಧಾನ ಆರ್ಚಕ ಮಾದಕಟ್ಟೆ ಈಶ್ವರ ಭಟ್, ಪ್ರಮುಖರಾದ ಸದಾಶಿವ ಬಂಗೇರ, ಉಮೇಶ್ ಕುಮಾರ್, ನರೇಂದ್ರನಾಥ್ ಭಂಡಾರಿ, ಜಯ ಕೆ, ಪುಷ್ಪರಾಜ ಶೆಟ್ಟಿ ,ಕೇಪು ಗೌಡ, ಪದ್ಮನಾಭ ಗೌಡ, ಬಾಲಕೃಷ್ಣ ಗೌಡ, ಪದಾಧಿಕಾರಿಗಳು ಮತ್ತು ವಿವಿಧ ಸಂಘಟನೆಯ ಹಾಗೂ ಊರ ಪರವೂರ ಭಕ್ತರು ಪಾಲ್ಗೊಂಡಿದ್ದರು.