ಬಂಟ್ವಾಳ: ಪಂಜಿಕಲ್ಲು ಗ್ರಾಮದಲ್ಲಿ ಮನೆಗಳಿಗೆ ತೆರಳಿ ಬಿಜೆಪಿ ಅಭ್ಯರ್ಥಿ ರಾಜೇಶ್ ನಾಯ್ಕ್ ಅವರು ಮತಯಾಚನೆ ಮಾಡಿದರು.
ಕ್ಷೇತ್ರದಲ್ಲಿ ಬಿಜೆಪಿ ಅಧಿಕಾರದ ಅವಧಿಯಲ್ಲಿ ಮಾಡಿದ ಅಭಿವೃದ್ಧಿ ಕಾರ್ಯಗಳು ಪಾರದರ್ಶಕವಾಗಿದ್ದು, ಕಾರ್ಯಕರ್ತರು ಗೌರವದಿಂದ ಎದೆತಟ್ಟಿ ಹೇಳಬಹುದು ಎಂದರು.ಕ್ಷೇತ್ರದ ಕಾರ್ಯದರ್ಶಿ ರಮನಾಥ ರಾಯಿ ಮಾತನಾಡಿ ಕ್ಷೇತ್ರದಲ್ಲಿ ಕಾಂಗ್ರೆಸ್ ದಬ್ಬಾಳಿಕೆಗೆ ಒಳಗಾದ ಗ್ರಾಮಪಂಚಾಯತ್ ಇದ್ದರೆ ಅದು ಪಂಜಿಕಲ್ಲು ಗ್ರಾ.ಪಂ. ಎಂಬುದು ಮತದಾರರಿಗೆ ಮರೆತಿಲ್ಲ ಎಂದು ನೆನಪಿಸಿದರು. ಗ್ರಾಮಪಂಚಾಯತ್ ಅಧ್ಯಕ್ಷ ಸಂಜೀವ ಪೂಜಾರಿ, ಪ್ರಮುಖರಾದ ಪ್ರಕಾಶ್ ಅಂಚನ್, ಗ್ರಾಪಂ ಉಪಾಧ್ಯಕ್ಷೆ ಜಯಶ್ರೀ ಪಟ್ರಾಡಿ, ಸದಸ್ಯರಾದ ವಿಕೇಶ್,ಮೋಹನ್ ದಾಸ್, ಬಾಲಕೃಷ್ಣ, ಹರೀಶ್, ಪೂವಪ್ಪ ಮೆಂಡನ್, ಚಂದ್ರಾವತಿ, ಶೋಭಾ, ಲಕ್ಮೀನಾರಾಯಣ, ಪ್ರಮುಖರಾದ ನಾರಾಯಣ ಭಂಡಾರಿ, ಪ್ರವೀಣ್ ಪೂಜಾರಿ, ಆನಂದ ಕೋಟ್ಯಾನ್, ಗೋಪಾಲ ಪೂಜಾರಿ, ಹರಿಣಾಕ್ಷಿ, ಮಾದವ ಕರ್ಬೆಟ್ಟು, ಶಿವರಾಮ, ಅಶೋಕ್, ಮೋನಪ್ಪ ಪೂಜಾರಿ ಕರ್ತಾಜೆ, ಜಗದೀಶ್ ಬಾಕಿಮಾರ್, ಹರೀಶ್ ಕುಲಾಲ್, ಆಶ್ಬಿನ್ ಕುಲಾಲ್ ,ಜೋಕಿಂ ಮಿನೇಜಸ್ ಮತ್ತಿತರರು ಉಪಸ್ಥಿತರಿದ್ದರು.