ಬಂಟ್ವಾಳ

ರಮಾನಾಥ ರೈ ಗೆಲ್ಲಿಸುವುದೇ ನಮ್ಮೆಲ್ಲರ ಗುರಿ: ಅಶ್ವನಿ ಕುಮಾರ್ ರೈ

ಮಾಜಿ ಸಚಿವ ಬಿ.ರಮಾನಾಥ ರೈ ತನ್ನನ್ನು ಆಯ್ಕೆ ಮಾಡಿದ ಮತದಾರರಿಗೋಸ್ಕರ ಸಾಕಷ್ಟು ಕೆಲಸಗಳನ್ನು ಮಾಡಿದ್ದು ಬಂಟ್ವಾಳದ ಸರ್ವಾಂಗೀಣ ಅಭಿವೃದ್ಧಿಗೆ ಕಾರಣರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ಸ್ಪರ್ಧಿಸುವ ಕಡೆಯ ಚುನಾವಣೆ ಇದಾಗಿದ್ದು, ಅವರನ್ನು ಗೆಲ್ಲಿಸುವುದು ನಮ್ಮೆಲ್ಲರ ಗುರಿಯಾಗಿದೆ, ಕ್ಷೇತ್ರದ ಜನತೆಗೂ ಇದೆ ಎಂದು ನ್ಯಾಯವಾದಿ, ಕೆಪಿಸಿಸಿ ಮಾಜಿ ಸದಸ್ಯ ಅಶ್ವನಿ ಕುಮಾರ್ ರೈ ಹೇಳಿದ್ದಾರೆ.

ADVERTISMENT

ಬಂಟ್ವಾಳದ ಕಾಂಗ್ರೆಸ್ ಚುನಾವಣಾ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತನಗೆ ನೀಡಿದ ಅವಕಾಶದಲ್ಲಿ ರಮಾನಾಥ ರೈ ಅವರು ಜನರ ಸಮಸ್ಯೆಗಳಿಗೆ ನಿರಂತರವಾಗಿ ಸ್ಪಂದಿಸುತ್ತಿದ್ದು, ಅವರ ಕೆಲಸದ ಕುರಿತು ಗೌರವವಿದ್ದು, ಅವರ ಗೆಲುವಿಗೆ ಶ್ರಮಿಸುತ್ತೇನೆ. ಒಂಭತ್ತನೇ ಬಾರಿ ಅವರು ಸ್ಪರ್ಧಿಸುತ್ತಿದ್ದು, ಕೊನೆಯ ಬಾರಿ ಅವರು ಚುನಾವಣೆಗೆ ಸ್ಪರ್ಧಿಸುತ್ತಿದ್ದು, ಅವರನ್ನು ಗೆಲ್ಲಿಸುವ ಜವಾಬ್ದಾರಿ ಕ್ಷೇತ್ರದ ಜನರಿಗಿದೆ. ಕಳೆದ ಬಾರಿ ಅಪಪ್ರಚಾರದಿಂದ ಸೋಲಾಯಿತು. ಇನ್ನೊಂದು ಬಾರಿ ಸರ್ವಾಂಗೀಣ ಕೆಲಸ ಮಾಡಬೇಕೆಂದಿದ್ದರೆ ರಮಾನಾಥ ರೈಗಳನ್ನು ಗೆಲ್ಲಿಸಬೇಕು. ರಾಜಧರ್ಮವನ್ನು ಪಾಲಿಸದ ವಚನಭ್ರಷ್ಟ ಸರಕಾರ ಈಗಿದೆ. ಸಿದ್ದರಾಮಯ್ಯ ಸರಕಾರ ಇದ್ದಾಗ ನಾವು ಭರವಸೆ ಈಡೇರಿಸಿದ್ದರೆ, ಬಿಜೆಪಿ ಅದರ ಅವಧಿಯಲ್ಲಿ ಮಾಡಿಲ್ಲ. ಅದು ಅತ್ಯಂತ ಜನವಿರೋಧಿಯಾಗಿದ್ದು, ಭ್ರಷ್ಟಾಚಾರ ಕೇಂದ್ರಿತವಾಗಿದೆ ಎಂದರು. ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ, ರಾಜ್ಯ ಬಿಜೆಪಿ ಸರಕಾರದ ನೀತಿ ಯೋಜನೆಗಳನ್ನು ಅವರು ಕಟುವಾಗಿ ಟೀಕಿಸಿ, ಕಾಂಗ್ರೆಸ್ ಒಂದೇ ಜನರ ಸಮಸ್ಯೆಗಳಿಗೆ ಪರಿಹಾರ ನೀಡುವ ಪಕ್ಷ ಎಂದರು.

ಪ್ರಮುಖರಾದ ಪಿಯೂಸ್ ಎಲ್.ರೋಡ್ರಿಗಸ್, ಪದ್ಮಶೇಖರ ಜೈನ್, ಸುದರ್ಶನ ಜೈನ್, ಬಿ.ಎಚ್.ಖಾದರ್, ಸುದೀಪ್ ಕುಮಾರ್ ಶೆಟ್ಟಿ, ಲುಕ್ಮಾನ್ ಬಂಟ್ವಾಳ, ಬೇಬಿ ಕುಂದರ್, ಅಬ್ಬಾಸ್ ಆಲಿ, ಮೋಹನ ಗೌಡ, ಚಂದ್ರಶೇಖರ ಪೂಜಾರಿ, ಉಮೇಶ್ ಬೋಳಂತೂರು, ಸುಭಾಶ್ಚಂದ್ರ ಶೆಟ್ಟಿ, ಸಂಜೀವ ಪೂಜಾರಿ, ಬಿ.ಮೋಹನ್, ಕುಶಾಲಪ್ಪ, ಜೆಸಿಂತಾ ಡಿಸೋಜ, ಜಯಂತಿ ಪೂಜಾರಿ, ನಾರಾಯಣ ನಾಯ್ಕ್, ರಫೀಕ್, ಸದಾಶಿವ ಬಂಗೇರ, ಇಬ್ರಾಹಿಂ ನವಾಜ್, ಸುರೇಶ್ ಜೋರ, ಲವೀನಾ ವಿಲ್ಮಾ ಮೊರಾಸ್, ಮಹಮ್ಮದ್ ವಳವೂರು, ಪರಮೇಶ್ವರ ಮೂಲ್ಯ, ಮನೋಹರ ನೇರಂಬೋಳ್, ಮಹಮ್ಮದ್ ನಂದರಬೆಟ್ಟು, ರೋಷನ್, ಪದ್ಮನಾಭ ಸಾಮಂತ್ , ಪ್ರವೀಣ್ ಮತ್ತಿತರರು ಉಪಸ್ಥಿತರಿದ್ದರು.

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Recent Posts