ಬಂಟ್ವಾಳ

ಬೆಂಜನಪದವು ಶ್ರೀ ಭದ್ರಕಾಳಿ ದೇವಸ್ಥಾನದ ಬ್ರಹ್ಮಕಲಶ,ಕಾರ್ಯಾಲಯದ ಉದ್ಘಾಟನೆ,ಅಮಂತ್ರಣ ಪತ್ರ ಬಿಡುಗಡೆ

ಜಾಹೀರಾತು

ಗುರುಹಿರಿಯರ ಆಶೀರ್ವಾದವಿದ್ದಾಗ ಮಾತ್ರ ದೇವರು ಒಲಿಯುತ್ತಾರೆ ಎಂದು ಮಾಣಿಲ ಶ್ರೀಧಾಮದ ಶ್ರೀಮೋಹನದಾಸ್ ಸ್ವಾಮೀಜಿ ನುಡಿದರು.
ಬಂಟ್ವಾಳ ತಾಲೂಕಿನ  ಬೆಂಜನಪದವು ಶ್ರೀ ಭದ್ರಕಾಳಿ ದೇವಸ್ಥಾನದ ಮೇ.20 ರಿಂದ 25 ರವರೆಗೆ ನಡೆಯಲಿರುವ  ಪುನರ್ ಪ್ರತಿಷ್ಟಾ    ಬ್ರಹ್ಮಕಲಶದ ಪ್ರಯುಕ್ತ ಭಾನುವಾರ ದೇವಳದ ವಠಾರದಲ್ಲಿ ಕಾರ್ಯಾಲಯವನ್ನು ಉದ್ಘಾಟಿಸಿ ಬಳಿಕ ಬ್ರಹ್ಮಕಲಶದ  ಅಮಂತ್ರಣಪತ್ರ ಬಿಡುಗಡೆಗೊಳಿಸಿ ಶ್ರೀಗಳು ಆಶೀರ್ವಚನ ನೀಡಿದರು‌.

ಮಧ್ಯಮ ವರ್ಗ ಮತ್ತು ಬಡವರೇ ಪ್ರಸಕ್ತ ದಿನಗಳಲ್ಲಿ ದೇವಸ್ಥಾನ, ದೈವಸ್ಥಾನಗಳ  ಪುನರ್ ನಿರ್ಮಾಣದಲ್ಲಿ ಮುಂಚೂಣಿಯಲ್ಲಿದ್ದು, ತುಳುನಾಡಿನಲ್ಲಿ ಅಜೀರ್ಣಾವ ಸ್ಥೆಯಲ್ಲಿದ್ದ  ದೇವಸ್ಥಾನಗಳು ಹೆಚ್ಚು, ಹೆಚ್ಚು ಬ್ರಹ್ಮಕಲಶೋತ್ಸವಗಳು ನಡೆಯುತ್ತಿರುವುದು ಉತ್ತಮ ಬೆಳವಣಿಗೆ ಎಂದ ಶ್ರೀಗಳು ಭದ್ರಕಾಳಿ ದೇವಿ ಕರುಣಾಮಯಿಯಾಗಿದ್ದು ಇಲ್ಲಿನ ಬ್ರಹ್ಮಕಲಶವವು ಕೂಡ ಅತ್ಯಂತ ಯಶಸ್ವಿಯಾಗಿ ನಡೆಯಲಿದೆ ಎಂದರು.

ಸಮಿತಿ‌ ಪ್ರಧಾನ ಸಂಚಾಲಕ ತೇವು ತಾರನಾಥ ಕೊಟ್ಟಾರಿ  ಅವರು ಮಾತನಾಡಿ ವಹಿಸಿಕೊಂಡ  ಜವಾಬ್ದಾರಿ ಅರಿತುಕೊಂಡು ಅವರವರು  ಕಾರ್ಯನಿರ್ವಹಿಸಿದಾಗ ಯಶಸ್ಸು ಸಿಗಲಿದೆ ಎಂದರು.

ಸಮಿತಿ‌ ಅಧ್ಯಕ್ಷ ಕೆ.ಪಿ.ಶೆಟ್ಟಿ ಮೊಡಂಕಾಪುಗುತ್ರು ಅವರು ಸಭಾಧ್ಯಕ್ಷತೆ ವಹಿಸಿ ಮಾತನಾಡಿ ದೇವಳದ ಜೀಣೋದ್ದಾರ ಕಾರ್ಯದಲ್ಲಿ ಸರ್ವ ರೀತಿಯ ಸಹಕಾರ ನೀಡುವುದಾಗಿ ತಿಳಿಸಿದರು.

ಬ್ರಹ್ಮಕಲಶೋತ್ಸವ  ಸಮಿತಿ ಅಧ್ಯಕ್ಷ ಭುವನೇಶ್ ಪಚ್ಚಿನಡ್ಕ,ಧರ್ಮದರ್ಶಿ ರಮೇಶ್‌ ಬಿ.ಬೆಂಜನಪದವು, ಶ್ರೀ ಭದ್ರಕಾಳೀ ಸೇವಾಸಮಿತಿ ಗೌರವಾಧ್ಯಕ್ಷ ಈಶ್ವರ ಬೆಳ್ಚಡ ಬೆಂಜನಪದವು,

ಪ್ರ.ಕಾರ್ಯದರ್ಶಿ ಚಂದ್ರಶೇಖರ ಸುವರ್ಣ,  ಶ್ರೀ ಗುಳಿಗಪಾತ್ರಿ  ಬಾಬುಕೊಟ್ಟಾರಿ ವಳಚ್ಚಿಲ್ ,ಪುನರ್ನಿರ್ಮಾಣ ಸಮಿತಿ‌ ಪ್ರ.ಕಾರ್ಯದರ್ಶಿ ಉಮೇಶ್ ಸಾಲಿಯಾನ್,ಮಹಿಳಾ ಸಮಿತಿ ಅಧ್ಯಕ್ಷೆ ರೇಖಾ ಉಮೇಶ್ ಸಾಲ್ಯಾನ್,ಯುವ ವೇದಿಕೆ ಗೌರವಾಧ್ಯಕ್ಷ ಸಂದೀಪ್ ಬಿ.,ಅಧ್ಯಕ್ಷ ಭರತ್ ರಾಜ್,ಸಮಿತಿ ಪದಾಧಿಕಾರಿಗಳಾದ ರಾಮಚಂದ್ರ ಮಾರಿಪಲ್ಲ,ದಾಮೋದರ ಕೋಟ್ಯಾನ್ ತುಂಗ,ಚಿತ್ತರಂಜನ್,ಸದಾಶಿವ ಮೊಯಿಲಿ,ದಯಾನಂದ ತುಂಬೆ,ಡಾ.ಸತೀಶ್ ಕುಮಾರ್  ವಿವಿಧ ಘಟಕಗಳ ಹಾಗೂ  ಉಪಸಮಿತಿ ಪದಾಧಿಕಾರಿಗಳು ಮೊದಲಾದವರಿದ್ದರು. ಬ್ರಹ್ಮಕಲಶ ಸಮಿತಿ ಪ್ರ.ಕಾರ್ಯದರ್ಶಿ ಬಿ.ಜನಾ೯ಧನ ಅಮ್ಮುಂಜೆ ಸ್ವಾಗತಿಸಿ ,ವಂದಿಸಿದರು.

ADVERTISMENT

ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.

Recent Posts