ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್ ಡಿ ಪಿ ಐ) ಅಭ್ಯರ್ಥಿ ಇಲ್ಯಾಸ್ ಮುಹಮ್ಮದ್ ತುಂಬೆ ಕಾಲ್ನಡಿಗೆಯ ಜಾಥಾ ಮೂಲಕ ಬಂಟ್ವಾಳ ಆಡಳಿತ ಸೌಧದಲ್ಲಿ ಸೋಮವಾರ ನಾಮಪತ್ರ ಸಲ್ಲಿಸಿದರು.
ನಾಮಪತ್ರ ಸಲ್ಲಿಸುವ ವೇಳೆ ಪಕ್ಷದ ರಾಷ್ಟ್ರೀಯ ಚುನಾವಣಾ ವೀಕ್ಷಕ ವಿ ಎಂ ಫೈಝಲ್, ಬಂಟ್ವಾಳ ಕ್ಷೇತ್ರಾಧ್ಯಕ್ಷ ಮೂನಿಷ್ ಆಲಿ, ಜಿಲ್ಲಾ ಸಮಿತಿ ಸದಸ್ಯ ಯೂಸುಫ್ ಆಲಡ್ಕ, ಚುನಾವಣಾ ಉಸ್ತುವಾರಿ ಶಾಹುಲ್ ಹಮೀದ್ ಎಸ್‌ಎಚ್ ಉಪಸ್ಥಿತರಿದ್ದರು. ಇದೇ ಸಂದರ್ಭ ಅಬ್ದುಲ್ ಮಜೀದ್ ಖಾನ್ ಅವರೂ ನಾಮಪತ್ರ ಸಲ್ಲಿಸಿದರು.
ಕಾಲ್ನಡಿಗೆ ಜಾಥಾ ಕ್ಕೂ ಮುನ್ನ ಎಸ್ ಡಿ ಪಿ ಐ ‘ಜನಮಿಡಿತ ಪ್ರಣಾಳಿಕೆ’ ಯನ್ನು ಎಸ್ ಡಿ ಪಿ ಐ ಬಂಟ್ವಾಳ ಕ್ಷೇತ್ರದ ರಾಷ್ಟ್ರೀಯ ಚುನಾವಣಾ ವೀಕ್ಷಕರಾದ ವಿ ಎಮ್ ಫೈಝಲ್ ಬಿಡುಗಡೆಗೊಳಿ ಮಾತನಾಡಿ, ಇಲ್ಲಿ ಅರಾಜಕತೆಯನ್ನು ಸೃಷ್ಟಿ ಮಾಡುವ ಬಿಜೆಪಿ ಮತ್ತು ನಕಲಿ ಜಾತ್ಯಾತೀತರೆನ್ನುವ ಕಾಂಗ್ರೆಸ್,ಜೆಡಿಎಸ್ ಪಕ್ಷಗಳಿಗೆ ಇಲ್ಲಿನ ಜನತೆ ತಕ್ಕ ಪಾಠ ಕಲಿಸಬೇಕಾಗಿದೆ ಎಂದು ಹೇಳಿದರು.
ಉಳ್ಳಾಲ ಕ್ಷೇತ್ರದ ಎಸ್ ಡಿ ಪಿ ಐ ಅಭ್ಯರ್ಥಿ ರಿಯಾಝ್ ಫರಂಗಿಪೇಟೆ ಮಾತನಾಡಿ ‘ ಇಲ್ಲಿ ಈ ಹಿಂದೆ ಆಳಿದ ಎರಡೂ ಪಕ್ಷಗಳ ತಾರತಮ್ಯದ ರಾಜಕಾರಣಕ್ಕೆ ಬೇಸತ್ತ ಬಂಟ್ವಾಳದ ಜನತೆ ಪರ್ಯಾಯ ಪಕ್ಷವನ್ನಾಗಿ ಎಸ್ ಡಿ ಪಿ ಐ ಯನ್ನು ಆರಿಸಲಿದ್ದಾರೆ ಎಂದರು.
ಅಭ್ಯರ್ಥಿ ಇಲ್ಯಾಸ್ ತುಂಬೆ ಮಾತನಾಡಿ ಬಂಟ್ವಾಳದಲ್ಲಿ ರಾಜಕೀಯ ಧೋರಣೆಯಿಂದ ಕೂಡಿರುವ ಅಳುಕನ್ನು ಶುದ್ಧಿಗೊಳಿಸಲು ಎಸ್ ಡಿ ಪಿ ಐ ಸನ್ನದ್ಧವಾಗಿದೆ ಎಂದರು.
ಎಸ್ ಡಿ ಪಿ ಐ ರಾಜ್ಯ ಸಮಿತಿ ಸದಸ್ಯ ಅಡ್ವಕೇಟ್ ಮಜೀದ್ ಖಾನ್ ‘ ಬಂಟ್ವಾಳ ಕ್ಷೇತ್ರವನ್ನಿ ಇಡೀ ರಾಜ್ಯಕ್ಕೆ ಮಾದರಿಯಾಗುವ ತಾಲೂಕನ್ನಾಗಿ ಮಾಡಲಾಗುವುದು ಎಂದರು.
ಎಸ್ ಡಿ ಪಿ ಐ ಕರ್ನಾಟಕ ರಾಜ್ಯ ನಾಯಕರಾದ ಅಕ್ಬರ್ ಅಲಿ ಪೊನ್ನೋಡಿ, ಎಸ್ ಡಿ ಪಿ ಐ ರಾಜ್ಯ ಸಮಿತಿ ಸದಸ್ಯೆ ಹಾಗೂ ಬಂಟ್ವಾಳ ಪುರಸಭಾ ಸಮಿತಿ ಸದಸ್ಯೆ ಝೀನತ್ ಬಂಟ್ವಾಳ, ರಾಜ್ಯ ನಾಯಕಿಯರುಗಳಾದ ಶಾಹಿದಾ, ನಸ್ರಿಯಾ, ಎಸ್ ಡಿ ಪಿ ಐ ದ.ಕ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅನ್ವರ್ ಸಾದಾತ್ ಬಜತ್ತೂರು, ಜಿಲ್ಲಾ ಕಾರ್ಯದರ್ಶಿ ಶಾಕಿರ್ ಅಳಕೆಮಜಲು, ಜಿಲ್ಲಾ ಸಮಿತಿ ಸದಸ್ಯರುಗಳಾದ ಅಶ್ರಫ್ ಅಡ್ಡೂರು,ಯೂಸುಫ್ ಆಲಡ್ಕ, ಶಾಹಿದಾ ತಸ್ನೀಮ್, ಎಸ್ ಡಿ ಪಿ ಐ ಬಂಟ್ವಾಳ ಕ್ಷೇತ್ರಾಧ್ಯಕ್ಷ ಮೂನಿಷ್ ಆಲಿ, ಎಸ್ ಡಿ ಪಿ ಐ ಬಂಟ್ವಾಳ ಕ್ಷೇತ್ರ ಚುನಾವಣಾ ಉಸ್ತುವಾರಿ ಶಾಹುಲ್ ಎಸ್ ಎಚ್, ಪಕ್ಷದ ಕ್ಷೇತ್ರ ಕಾರ್ಯದರ್ಶಿ ಕಲಂದರ್ ಪರ್ತಿಪಾಡಿ, ಕ್ಷೇತ್ರ ಉಪಾಧ್ಯಕ್ಷ ಅನ್ವರ್ ಬಡಕಬೈಲ್, ಕ್ಷೇತ್ರ ಸಮಿತಿ ಸದಸ್ಯೆ ಝಹನಾ, ಎಸ್ ಡಿ ಪಿ ಐ ಬೆಳ್ತಂಗಡಿ ಕ್ಷೇತ್ರ ಉಪಾಧ್ಯಕ್ಷ ಹನೀಫ್ ಪುಂಜಾಲಕಟ್ಟೆ, ಎಸ್ ಡಿ ಪಿ ಐ ನಾಯಕ ಇಕ್ಬಾಲ್ ಐ ಎಮ್ ಆರ್, ಬಂಟ್ವಾಳ ಪುರಸಭಾ ಸದಸ್ಯರುಗಳಾದ ಇದ್ರೀಸ್ ಪಿ ಜೆ, ಶಂಶಾದ್ ಗೂಡಿನಬಳಿ,ಸಜಿಪ ಮುನ್ನೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಶಬೀನಾ ನಂದಾವರ, ಮತ್ತಿತರರು ಉಪಸ್ಥಿತರಿದ್ದರು. ಕ್ಷೇತ್ರ ಸಮಿತಿ ಜೊತೆ ಕಾರ್ಯದರ್ಶಿ ಅಶ್ರಫ್ ತಲಪಾಡಿ ಕಾರ್ಯಕ್ರಮ ನಿರೂಪಿಸಿ,ಧನ್ಯವಾದಗೈದರು.