ಬಂಟ್ವಾಳ: ರೋಷನ್ ಬೊನಿಫಾಸ್ ಮಾರ್ಟಿಸ್ ಸಾರಥ್ಯದಲ್ಲಿ ವಾರಪತ್ರಿಕೆಯಾದ ‘’ಕರಾವಳಿ ಸುದ್ದಿ’’ಯ ಮೊದಲ ಸಂಚಿಕೆಯನ್ನು ಬಂಟ್ವಾಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪ್ರಶಾಂತ್ ಪುಂಜಾಲಕಟ್ಟೆ ಅವರು ಏ.17ರಂದು ಬಂಟ್ವಾಳ ಪ್ರೆಸ್ ಕ್ಲಬ್ ನಲ್ಲಿ ನಡೆದ ಸರಳ ಸಮಾರಂಭದಲ್ಲಿ ಬಿಡುಗಡೆಗೊಳಿಸಿದರು.
ಈ ಸಂದರ್ಭ ಶುಭ ಹಾರೈಸಿದ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಮೌನೇಶ ವಿಶ್ವಕರ್ಮ, ಪತ್ರಿಕೆ ವಿಶ್ವಾಸಾರ್ಹ ಸುದ್ದಿಗಳನ್ನು ನೀಡುವ ಮೂಲಕ ಕರಾವಳಿಯಾದ್ಯಂತ ತಲುಪಲಿ ಎಂದು ಶುಭ ಹಾರೈಸಿದರು.
ಸಂಪಾದಕ ರೋಷನ್ ಬೊನಿಫಾಸ್ ಮಾರ್ಟಿಸ್ ಮಾತನಾಡಿ, ಸಾಮಾಜಿಕ ಜಾಲತಾಣದ ಈ ಕಾಲದಲ್ಲೂ ನಾವು ಮುದ್ರಣ ಮಾಧ್ಯಮವನ್ನು ಆರಂಭಿಸಿದ್ದು, ಸವಾಲಾಗಿದ್ದರೂ, ಸಮರ್ಥ ಲೇಖಕರಿಂದ ಬರೆಹಗಳು, ವರದಿಗಳ ಮೂಲಕ ಜನರಿಗೆ ಬೇಕಾದ ವಿಚಾರಗಳನ್ನು ತಲುಪಿಸುವ ಪ್ರಯತ್ನ ಮಾಡುತ್ತೇವೆ ಎಂದರು. ಪತ್ರಿಕೆಯ ಸಾರ್ವಜನಿಕ ಸಂಪರ್ಕಾಧಿಕಾರಿ, ಕಲಾವಿದ ಚೇತನ್ ರೈ ಮಾಣಿ ಮಾತನಾಡಿ, ಪತ್ರಿಕೆ ಬೆಳೆದುಬಂದ ಹಾದಿಯ ಕುರಿತು ವಿವರಿಸಿದರು. ಉಪಸಂಪಾದಕಿ ಅನಿತಾ ರೋಷನ್ ಮಾರ್ಟಿಸ್ ವಂದಿಸಿದರು.
ಹೆಜ್ಜೆಗಾರಿಕೆ, ಮಾತುಗಾರಿಕೆ ಮತ್ತು ಸಾತ್ವಿಕ ಅಭಿನಯದಲ್ಲಿ ಹೊಸ ಮನ್ವಂತರವನ್ನೇ ಸೃಷ್ಟಿಸಿದವರು ಗೋವಿಂದ ಭಟ್ಟರು. ಪಾತ್ರದ ಪರಕಾಯ ಪ್ರವೇಶ ಮಾಡುವುದರಲ್ಲಿ ಅವರು…