ಯಾರೋ ಅಗೆದು ಹೋಗಿದ್ದಾರೆ, ಮುಚ್ಚಿಯೂ ಇಲ್ಲ, ಕೆಲಸವೂ ಪ್ರಗತಿಯಲ್ಲಿಲ್ಲ. ಬಿ.ಸಿ.ರೋಡಿನ ಜೋಡುಮಾರ್ಗ ಪೋಸ್ಟ್ ಆಫೀಸ್, ಸಂಚಯಗಿರಿ, ಅಜ್ಜಿಬೆಟ್ಟು ಮೊದಲಾದೆಡೆ ತಿರುಗುವ ಅಜ್ಜಿಬೆಟ್ಟು ಕ್ರಾಸ್ ನ ರಸ್ತೆಯ ಪಕ್ಕದಲ್ಲೇ ರಸ್ತೆ ಅಗೆದು ಹೊಂಡ ಸೃಷ್ಟಿಯಾಗಿದೆ.
ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದಿಂದ ಬಸ್ಸುಗಳು ಮತ್ತೆ ಬಿ.ಸಿ.ರೋಡ್ ಕಡೆಗೆ ತಿರುಗಲು ಈ ಕ್ರಾಸ್ ಅನ್ನೇ ಉಪಯೋಗಿಸಬೇಕು. ಆ ಸಂದರ್ಭ ಹೊಂಡ ಭಾರೀ ತೊಡಕನ್ನು ಉಂಟುಮಾಡುತ್ತದೆ. ಗುರುವಾರ ಇಲ್ಲಿ ಕಾರೊಂದು ಬೀಳುವ ಹಂತದಲ್ಲಿರುವುದನ್ನು ಗಮನಿಸಿ ಎಚ್ಚರಿಸಿದ ಕಾರಣ ಅಪಾಯ ತಪ್ಪಿತು ಎಂದು ಸ್ಥಳೀಯರು ತಿಳಿಸಿದ್ದಾರೆ. ರಸ್ತೆಯನ್ನು ನಿರ್ಮಾಣ ಮಾಡುವ ಅಥವಾ ದುರಸ್ತಿಗೊಳಿಸುವ ಸಂದರ್ಭ ಅಥವಾ ಕುಡಿಯುವ ನೀರು ಪೈಪ್ ಲೈನ್ ಅಳವಡಿಕೆ ಸಂದರ್ಭ ಅಡಚಣೆಗಳು ಉಂಟಾಗುವುದು ಸಹಜ. ಆದರೆ ವಾರಗಟ್ಟಲೆ ಹೊಂಡ ಮಾಡಿ ಹೆದ್ದಾರಿಯ ಪಕ್ಕವೇ ಹಾಗೆಯೇ ಬಿಟ್ಟು ಹೋದರೆ, ಅಪಾಯ ತಪ್ಪಿದ್ದಲ್ಲ. ಇಲ್ಲೇ ಸನಿಹ ಮೂರು ದಿನಗಳ ಹಿಂದೆ ಕಾರೊಂದು ಡಿವೈಡರ್ ಗೆ ಗುದ್ದಿ ಓರ್ವ ಮೃತಪಟ್ಟಿದ್ದರು. ಇಂಥ ಘಟನೆಗಳು ಹಸಿರಾಗಿರುವ ಸಂದರ್ಭ ಇದಕ್ಕೆ ಸಂಬಂಧಪಟ್ಟವರು ಗಮನಹರಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…