ಬಂಟ್ವಾಳ: ವಿಧಾನಸಭೆಯ ಮಂಗಳೂರು ಕ್ಷೇತ್ರದ ಅಭ್ಯರ್ಥಿ, ಹಾಲಿ ಶಾಸಕ, ವಿಪಕ್ಷ ಉಪನಾಯಕ ಯು.ಟಿ.ಖಾದರ್ ಅವರು ಹಿರಿಯ ಕಾಂಗ್ರೆಸ್ ಮುಖಂಡ, ಕೇಂದ್ರದ ಮಾಜಿ ಸಚಿವ ಬಿ.ಜನಾರ್ದನ ಪೂಜಾರಿ ಅವರನ್ನು ಭೇಟಿಯಾಗಿ ಅವರ ಆಶೀರ್ವಾದ ಪಡೆದರು.
ಈ ಸಂದರ್ಭ ಮಾತನಾಡಿದ ಜನಾರ್ದನ ಪೂಜಾರಿ, ಕಾಂಗ್ರೆಸ್ ಕಾರ್ಯಕರ್ತರನ್ನು ಕುಟುಂಬ ಸದಸ್ಯರು ಎಂಬಂತೆ ನೋಡಿಕೊಂಡು ಅವರಿಗೆ ನೋವಾಗದಂತೆ ಕರೆದುಕೊಂಡು ಹೋಗಿ ಎಂದು ಸಲಹೆ ನೀಡಿದರು.
ಶಾಸಕ ಯು.ಟಿ.ಖಾದರ್ ಮಾತನಾಡಿ, ಚುನಾವಣೆಯ ಸ್ಪರ್ಧೆಯ ಮುನ್ನ ಹಿರಿಯ ಕಾಂಗ್ರೆಸ್ ನಾಯಕ ಕರಾವಳಿ ಭಾಗದ ಅಭಿವೃದ್ಧಿಗೆ ಕೊಡುಗೆ ನೀಡಿದ ಪೂಜಾರಿ ಅವರ ಮಾರ್ಗದರ್ಶನ ಸಲಹೆ ಸೂಚನೆ ಹಾಗೂ ಆಶೀರ್ವಾದ ಪಡೆಯಲು ಮನಗೆ ಬಂದಿದ್ದೇನೆ ಎಂದರು.
ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಪ್ರಶಾಂತ್ ಕಾಜವ, ಪ್ರಮುಖರಾದ ಚಂದ್ರಹಾಸ ಕರ್ಕೇರ, ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಉಮ್ಮರ್ ಫಾರೂಕ್ ಪರಂಗಿಪೇಟೆ, ಪ್ರವೀಣ್ ಅಳ್ಚ, ದೇವದಾಸ ಭಂಡಾರಿ, ದೀಪಕ್ ಪಿಲಾರ್, ಮಹಮ್ಮದ್ ಮೋನು, ಕೃಷ್ಣ ಗಟ್ಟಿ,ಚಂದ್ರಿಕಾ, ರಮ್ಲಾನ್ ಮಾರಿಪಳ್ಳ,ಈಶ್ವರ್ ಉಳ್ಳಾಲ್, ಅಬ್ದುಲ್ ಜಲೀಲ್ , ನಾಸೀರ್ ನಡುಪದವು, ದೇವಣ್ಣ ಶೆಟ್ಟಿ, ದೇವದಾಸ್ ಭಂಡಾರಿ, ಸುರೇಶ್ ಭಟ್ ನಗರ, ಇಕ್ಬಾಲ್ ಸುಜೀರು, ಬಾಬು ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು
ಹೆಜ್ಜೆಗಾರಿಕೆ, ಮಾತುಗಾರಿಕೆ ಮತ್ತು ಸಾತ್ವಿಕ ಅಭಿನಯದಲ್ಲಿ ಹೊಸ ಮನ್ವಂತರವನ್ನೇ ಸೃಷ್ಟಿಸಿದವರು ಗೋವಿಂದ ಭಟ್ಟರು. ಪಾತ್ರದ ಪರಕಾಯ ಪ್ರವೇಶ ಮಾಡುವುದರಲ್ಲಿ ಅವರು…