“ಮಕ್ಕಳ ಸರ್ವತೋಮುಖ ವ್ಯಕ್ತಿತ್ವ ವಿಕಸನಕ್ಕೆ ಸಾಹಿತ್ಯದ ಕೊಡುಗೆ ಅಪಾರವಾದುದು. ಸಾಹಿತ್ಯದ ಬಗೆಗಿನ ಆಸಕ್ತಿಯು ಮಕ್ಕಳನ್ನು ಅತಿಯಾದ ಮೊಬೈಲ್ ಬಳಕೆ ಹಾಗೂ ಮತ್ತಿತರ ಕೆಟ್ಟ ಹವ್ಯಾಸಗಳಿಂದ ಮುಕ್ತಗೊಳಿಸುತ್ತದೆ ” ಎಂದು ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತಿನ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷರಾದ ನ್ಯಾಯವಾದಿ ಪರಿಮಳ ಮಹೇಶ್ ರಾವ್ ಚೇಳಾರು ಅಭಿಪ್ರಾಯಪಟ್ಟರು.
ಅನಂತಾಡಿ ಶಾಲೆಯಲ್ಲಿ ಜರುಗಿದ ಕರ್ನಾಟಕ ರಾಜ್ಯ ಮಕ್ಕಳ ಪರಿಷತ್ತು ಬಂಟ್ಟಾಳ ತಾಲೂಕು ಘಟಕದ ಉದ್ಘಾಟನೆ ಸಮಾರಂಭದಲ್ಲಿ ಮಾತನಾಡಿದರು.
ಸಮಾರಂಭದ ಉದ್ಘಾಟನೆಯನ್ನು 7ನೇ ತರಗತಿ ವಿದ್ಯಾರ್ಥಿ ರಚನ್ ಅಶ್ವತ್ತಡಿ ನೆರವೇರಿಸಿದರು. ಮುಖ್ಯ ಅತಿಥಿಗಳಾದ NS CDF ನ ಅಧ್ಯಕ್ಷರು ಹಾಗೂ ಜಿಲ್ಲಾ ಘಟಕರ ಗೌರವ ಸಲಹೆಗಾರರಾದ ಗಂಗಾಧರ ಗಾಂಧಿ, ತಾಲೂಕು ಘಟಕದ ಗೌರವ ಸಲಹೆಗಾರರಾದ ರಮೇಶ ಎಂ ಬಾಯಾರು , ಜಯಾನಂದ ಪೆರಾಜೆ ಹಾಗೂ ಬಾಲಕೃಷ್ಣ ಕಾರಂತ್ ಅಳಿಕೆ , ಮುಖ್ಯ ಶಿಕ್ಷಕರಾದ ಜಯಂತಿ , ಎಸ್. ಡಿ .ಎಂ . ಸಿ ಅಧ್ಯಕ್ಷರಾದ ವಿವೇಕಾನಂದ ಶೆಟ್ಟಿ , ಮಂಗಳೂರು ತಾಲೂಕು ಘಟಕದ ಅಧ್ಯಕ್ಷರಾದ ಶಿವಪ್ರಸಾದ್ ಕೊಕ್ಕಡ ಹಾಗೂ ಕಾರ್ಯದರ್ಶಿ ರೇಖಾ ಸುದೇಶ್ ರಾವ್ ಇವರು ಶುಭ ಹಾರೈಸಿದರು.
ಮಕ್ಕಳ ವಿವಿಧ ಸಾಹಿತ್ಯ ಚಟುವಟಿಕೆಗಳನ್ನು ಪರಿಷತ್ತಿನ ಪದಾಧಿಕಾರಿಗಳಾದ ಮಲ್ಲಿಕಾ ಜ್ಯೋತಿಗುಡ್ಡೆ , ರಶ್ಮಿತಾ ಸುರೇಶ್ , ಗೀತಾ ಕೊಂಕೋಡಿ, ಎಂ.ಡಿ ಮಂಚಿ, ತೇಜಸ್ವಿ ಅಂಬೆಕಲ್ಲು, ಅನಿಲ ವಡಗೇರಿ , ಮುತ್ತುರಾಜ್ ಮಲ್ಲಿಗವಾಡ, ವಿಜಯಾ ಶೆಟ್ಟಿ ಸಾಲೆತ್ತೂರು , ಜಯರಾಮ ಪಡ್ರೆ , ಚಿಗುರೆಲೆ ಬಳಗದ ನಾರಾಯಣ ಕುಂಬ್ರ , ಶಶಿಧರ ಏಮಾಜೆ ಹಾಗೂ ಶಿಕ್ಷಕರಾದ ಯಶೋಧಾ, ಆಶಾಲತಾ, ಸ್ವಾತಿ , ಚಿತ್ರಾಕ್ಷಿಯವರು ನಿರ್ವಹಿಸಿದರು
ತಾಲೂಕು ಘಟಕದ ನೂತನ ಅಧ್ಯಕ್ಷರಾದ ಶ್ರೀಕಲಾ ಕಾರಂತ್ ಅಳಿಕೆಯವರು ಪರಿಷತ್ತಿನ ಕಾರ್ಯ ಯೋಜನೆಗಳ ಬಗ್ಗೆ ಮಾಹಿತಿ ನೀಡಿ, ತಾಲೂಕು ಘಟಕದ ಯಶಸ್ಸಿಗಾಗಿ ಎಲ್ಲರ ಸಹಕಾರ ಕೋರಿದರು. ವಲಯ ಸಂಘಟಕರಾದ ತುಳಸಿ ಕೈರಂಗಳ್ ರವರು ಸ್ವಾಗತಿಸಿದರು. ರಾಧಾಕೃಷ್ಣ ಮೂಲ್ಯ ಅಮ್ಟೂರ ರವರು ವಂದಿಸಿದರು. ಕಾರ್ಯದರ್ಶಿಗಳಾದ ಗೋಪಾಲಕೃಷ್ಣ ನೇರಳಕಟ್ಟೆ ಕಾರ್ಯಕ್ರಮ ನಿರೂಪಿಸಿದರು.