ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಅವರು ಬಂಟ್ವಾಳ ವಿಧಾನಸಭಾ ಕ್ಷೇತ್ರದ ವಿವಿಧೆಡೆ ಬಿಜೆಪಿ ಶಕ್ತಿ ಕೇಂದ್ರದ ಕಾರ್ಯಕರ್ತರೊಂದಿಗೆ ಸಮಾಲೋಚನೆಗಳನ್ನು ನಡೆಸುತ್ತಿದ್ದಾರೆ. ಇದರ ಅಂಗವಾಗಿ ಶುಕ್ರವಾರ ರಾತ್ರಿ ಮಧ್ವ, ಶನಿವಾರ ದಿನವಿಡೀ ಪಿಲಿಮೊಗರು, ಇರ್ವತ್ತೂರು, ಎಲಿಯನಡುಗೋಡು, ಪಿಲಾತಬೆಟ್ಟು ಸಹಿತ ಹಲವೆಡೆ ಸಭೆಗಳನ್ನು ನಡೆಸಿದರು. ವಿವರ ಇಲ್ಲಿದೆ.
ಮಧ್ವದಲ್ಲಿ ಕಾರ್ಯಕರ್ತರ ಸಭೆ: ಮದ್ವ ಶಕ್ತಿ ಕೇಂದ್ರದ ರಮೇಶ್ ಪೂಜಾರಿ ಮದ್ವ ಪಲ್ಕೆ ಅವರ ಮನೆಯಲ್ಲಿ ಬಿಜೆಪಿ ಪ್ರಮುಖ ಕಾರ್ಯಕರ್ತರ ಸಭೆ ನಡೆಯಿತು. ಕೊರೊನಾ ಸಂಕಷ್ಟದ ಅವಧಿಯ ಬಳಿಕ ರಾಜ್ಯ ಸರಕಾರದ ಅನುದಾನಗಳ ಮೂಲಕ ವಿವಿಧ ರೀತಿಯ ಅಭಿವೃದ್ಧಿ ಕಾರ್ಯಗಳನ್ನು ನಡೆಸಲು ಸಾಧ್ಯವಾಗಿದೆ ಎಂದು ಶಾಸಕ ರಾಜೇಶ್ ನಾಯ್ಕ್ ಈ ಸಂದರ್ಭ ಹೇಳಿದರು.ಬೂಡ ಅಧ್ಯಕ್ಷ ದೇವದಾಸ್ ಶೆಟ್ಟಿ, ಜಿಲ್ಲಾ ಯುವಮೋರ್ಚಾದ ಪ್ರಧಾನ ಕಾರ್ಯದರ್ಶಿ ಸುದರ್ಶನ ಬಜ, ಬಂಟ್ವಾಳ ಕ್ಷೇತ್ರದ ಕಾರ್ಯದರ್ಶಿ ರಮನಾಥ ರಾಯಿ, ಗ್ರಾಮ ಪಂಚಾಯತ್ ಸದಸ್ಯರುಗಳಾದ ಶ್ರೀಧರ್ ಭವಾನಿ, ಜಿನೇಂದ್ರ ಜೈನ್ ,ಲಕ್ಮೀ, ಶಕ್ತಿ ಕೇಂದ್ರ ದ ಪ್ರಮುಖ್ ಸತೀಶ್ ಶೆಟ್ಟಿ ಮದ್ವ ಕಟ್ಟೆ, ಪ್ರಮುಖರಾದ ಶಿವಪ್ಪ ಗೌಡ ನಿನ್ನಿಕಲ್ಲು ಉಪಸ್ಥಿತರಿದ್ದರು.
ಪಿಲಿಮೊಗರು ಶಕ್ತಿಕೇಂದ್ರ: ಪಿಲಿಮೊಗರು ಶಕ್ತಿ ಕೇಂದ್ರದ ಕೊಪ್ಪಳ ಸೀತಾರಾಮ ಪೂಜಾರಿ ಅವರ ಮನೆಯಲ್ಲಿ ನಡೆದ ಪ್ರಮುಖ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಶಾಸಕ ರಾಜೇಶ್ ನಾಯ್ಕ್, ಕಾಂಗ್ರೆಸ್ ಅಧಿಕಾರವಿಲ್ಲದೆ ನೀರಿನಿಂದ ಮೇಲಕ್ಕೆ ಎತ್ತಿ ಹಾಕಿದ ಮೀನಿನಂತೆ ಒದ್ದಾಡುವ ಸ್ಥಿತಿ ಬಂದೋದಗಿದ್ದು, ಅಧಿಕಾರಕ್ಕೆ ಬರುವ ನಿಟ್ಟಿನಲ್ಲಿ ಸುಳ್ಳು, ಅಪಪ್ರಚಾರಗಳ ಮೂಲಕ ತೊಡಗಿಸಿಕೊಂಡಿದೆ ಎಂದರು. ಬೂಡ ಅಧ್ಯಕ್ಷ ದೇವದಾಸ್ ಶೆಟ್ಟಿ ಮಾತನಾಡಿ,ಐದು ವರ್ಷ ಯಶಸ್ವಿಯಾಗಿ ಪೂರ್ತಿ ಮಾಡಿದ ಅಭಿವೃದ್ಧಿಯ ಹೆಗ್ಗಳಿಕೆಗೆ ಪಾತ್ರವಾಗಿರುವ ಬಂಟ್ವಾಳದ ಪ್ರಥಮ ಶಾಸಕ ರಾಜೇಶ್ ನಾಯ್ಕ್ ಅವರು ಎಂದರು. ಬಂಟ್ವಾಳ ಕ್ಷೇತ್ರದ ಗೌರವವನ್ನು ಹೆಚ್ಚಿಸಿದ, ಓರ್ವ ಛಲವಾದಿ, ಸೌಮ್ಯ ಸ್ವಭಾವದ ಧಾರ್ಮಿಕ ಸಾಮಾಜಿಕ , ರಾಷ್ಟ್ರೀಯ ಚಿಂತಕ ರಾಜೇಶ್ ನಾಯ್ಕ್ ಎಂದು ಜಿಪಂ ಮಾಜಿ ಸದಸ್ಯ ತುಂಗಪ್ಪ ಬಂಗೇರ ಹೇಳಿದರು.ಕ್ಷೇತ್ರದ ಅಧ್ಯಕ್ಷ ದೇವಪ್ಪ ಪೂಜಾರಿ, ಕಾರ್ಯದರ್ಶಿ ಪುರುಷೋತ್ತಮ ಶೆಟ್ಟಿ ವಾಮದಪದವು, ಜಿಲ್ಲಾ ಯುವ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಸುದರ್ಶನ ಬಜ, ಪಿಲಿಮೊಗರು ಗ್ರಾಮಪಂಚಾಯತ್ ಸದಸ್ಯರಾದ ವಿನೋದ್ ಸಾಲಿಯಾನ್, ಕುಸುಮರಮೇಶ್, ಸುನಂದಾ ಸುರೇಂದ್ರ, ,ಬೂತ್ ಅಧ್ಯಕ್ಷ ಜಯರಾಮ್ ಕೊಪ್ಪಳ, ಕಾರ್ಯದರ್ಶಿ ಪ್ರಣೀತ್ ಬಾರಕಿನೆಡೆ,ವೆಂಕಟೇಶ್ ಭಟ್, ಕಮಲ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಇರ್ವತ್ತೂರು ಶಕ್ತಿಕೇಂದ್ರ: ಇರ್ವತ್ತೂರು ಶಕ್ತಿ ಕೇಂದ್ರದ ಶುಭಕರ ಶೆಟ್ಟಿ ಅವರ ಮನೆಯಲ್ಲಿ ನಡೆದ ಪ್ರಮುಖ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ರಾಜೇಶ್ ನಾಯ್ಕ್, ನಿರಂತರವಾಗಿ ಕ್ಷೇತ್ರದ ಜನರ ಸಮಸ್ಯೆಗಳಿಗೆ ಸ್ಪಂದಿಸಿ ಪರಿಹಾರಕ್ಕೆ ಶಕ್ತಿ ಮೀರಿ ಪ್ರಯತ್ನ ಮಾಡುತ್ತೇನೆ ಎಂದು ಅವರು ತಿಳಿಸಿದರು.ಬಂಟ್ವಾಳ ಕ್ಷೇತ್ರ ಬಿಜೆಪಿ ಅಧ್ಯಕ್ಷ ದೇವಪ್ಪ ಪೂಜಾರಿ , ಬಿಜೆಪಿ ಪ್ರಚಾರಕ್ ನವೀನ್ ಅಯೋಧ್ಯೆ, ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ಡೊಂಬಯ್ಯ ಅರಳ, ಕ್ಷೇತ್ರದ ಕಾರ್ಯದರ್ಶಿ ಪುರುಷೋತ್ತಮ ಶೆಟ್ಟಿ ವಾಮದಪದವು, ಶಕ್ತಿ ಕೇಂದ್ರದ ಅಧ್ಯಕ್ಷ ಶುಭಕರ ಶೆಟ್ಟಿ, ಕ್ಷೇತ್ರ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ದಿನೇಶ್ ಶೆಟ್ಟಿ ದಂಬೆದಾರ್, ನಾವೂರ ಮಹಾಶಕ್ತಿ ಕೇಂದ್ರದ ಪ್ರಮುಖ್ ಹರೀಶ್ ಪ್ರಭು, ಬೂತ್ ಅಧ್ಯಕ್ಷರುಗಳಾದ ರವಿಶಂಕರ್ ಹೊಳ್ಳ, ಸುಂದರ ನಾಯ್ಕ್ , ಗ್ರಾ.ಪಂ. ಅಧ್ಯಕ್ಷ ಎಂ.ಪಿ.ಶೇಖರ್ ಪೂಜಾರಿ,ಉಪಾಧ್ಯಕ್ಷೆ ಹರಿಣಾಕ್ಷಿ.ಗ್ರಾ.ಪಂ.ಸದಸ್ಯರು ಗಳಾದ ಕಲ್ಯಾಣಿ, ಮಲಾತಿ , ಮತ್ತಿತರರು ಉಪಸ್ಥಿತರಿದ್ದರು.
ಪಿಲಾತಬೆಟ್ಟು ಶಕ್ತಿಕೇಂದ್ರ: ಪಿಲಾತಬೆಟ್ಟು ಶಕ್ತಿ ಕೇಂದ್ರದ ನಾಕನಾಡು ನಾರಾಯಣ ಪೂಜಾರಿ ಅವರ ಮನೆಯಲ್ಲಿ ನಡೆದ ಪ್ರಮುಖ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಶಾಸಕ ರಾಜೇಶ್ ನಾಯ್ಕ್ ಮಾರ್ಗದರ್ಶನ ನೀಡಿದರು.
ವೇದಿಕೆಯಲ್ಲಿ ಚುನಾವಣಾ ಪ್ರಭಾರಿ ಎಂ.ತುಂಗಪ್ಪ ಬಂಗೇರ, ಪಿಲಾತಬೆಟ್ಟು ಗ್ರಾಮಪಂಚಾಯತ್ ಅಧ್ಯಕ್ಷೆ ಹರ್ಷಿಣಿ ಪುಷ್ಪಾನಂದ, ಉಪಾಧ್ಯಕ್ಷ ಲಕ್ಮೀನಾರಾಯಣ ಹೆಗ್ಡೆ, ಸದಸ್ಯ ರಾದ ಕಾಂತಪ್ಪ ಕರ್ಕೇರ , ಬಂಟ್ವಾಳ ಕ್ಷೇತ್ರ ಬಿಜೆಪಿ ಅಧ್ಯಕ್ಷ ದೇವಪ್ಪ ಪೂಜಾರಿ, ಪ್ರಧಾನ ಕಾರ್ಯದರ್ಶಿ ಡೊಂಬಯ್ಯ ಅರಳ, ಬೂಡ ಅಧ್ಯಕ್ಷ ದೇವದಾಸ್ ಶೆಟ್ಟಿ, ಕ್ಷೇತ್ರದ ಕಾರ್ಯದರ್ಶಿ ಪುರುಷೋತ್ತಮ ಶೆಟ್ಟಿ ವಾಮದಪದವು, ಕ್ಷೇತ್ರ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ದಿನೇಶ್ ಶೆಟ್ಟಿ ದಂಬೆದಾರ್, ನಾವೂರ ಮಹಾಶಕ್ತಿ ಕೇಂದ್ರದ ಕಾರ್ಯದರ್ಶಿ ಹರೀಶ್ ಪ್ರಭು, ಪ್ರಚಾರಕ್ ನವೀನ್ ಅಯೋಧ್ಯಾ , ಬೂತ್ ಅಧ್ಯಕ್ಷ ಪುಷ್ಪಾನಂದ, ಪಿಲಾತಬೆಟ್ಟು ಬಿಜೆಪಿ ಚುನಾವಣಾ ಪ್ರಭಾರಿ ವಿಜಯ ರೈ ಮತ್ತಿತರರು ಉಪಸ್ಥಿತರಿದ್ದರು.
ಎಲಿಯನಡುಗೋಡು ಶಕ್ತಿ ಕೇಂದ್ರ
ಉಪ್ಪಿರ ಮನೆ ಶೋಭಾ ಅವರ ಮನೆಯಲ್ಲಿ ನಡೆದ ಪ್ರಮುಖ ಕಾರ್ಯಕರ್ತರ ಸಭೆಯಲ್ಲಿ ಶಾಸಕ ರಾಜೇಶ್ ನಾಯ್ಕ್ ಮಾತನಾಡಿ, ಮಪತ್ರ ಸಲ್ಲಿಸುವ ಆರಂಭದಲ್ಲಿ ಗ್ರಾಮಗ್ರಾಮಕ್ಕೆ ತೆರಳಿ ಮತದಾರ ಬಂಧುಗಳ ಹಾಗೂ ಹಿರಿಯ ಆಶ್ರೀರ್ವಾದ ಪಡೆಯುವ ದೃಷ್ಟಿಯಿಂದ ನಿಮ್ಮ ಬಳಿಗೆ ಬಂದಿದ್ದೇನೆ, ನಿಮ್ಮ ಆಶ್ರೀರ್ವಾದದ ಹರಕೆ ಹಾರೈಕೆ ನನ್ನ ಮೇಲೆ ನಿರಂತರವಾಗಿ ಇರಲಿ ಎಂದರು.
ರಾಜ್ಯ ಒಳಚರಂಡಿ ಹಾಗೂ ನಗರ ನೀರು ಸರಬರಾಜು ಮಂಡಳಿಯ ನಿರ್ದೇಶಕಿ ಜಿ.ಕೆ.ಸುಲೋಚನ ಭಟ್ , ಬಂಟ್ವಾಳ ಕ್ಷೇತ್ರ ಬಿಜೆಪಿ ಅಧ್ಯಕ್ಷ ದೇವಪ್ಪ ಪೂಜಾರಿ, ಪ್ರಧಾನ ಕಾರ್ಯದರ್ಶಿ ಡೊಂಬಯ್ಯ ಅರಳ, ಬೂಡ ಅಧ್ಯಕ್ಷ ದೇವದಾಸ್ ಶೆಟ್ಟಿ, ಕ್ಷೇತ್ರದ ಕಾರ್ಯದರ್ಶಿ ಪುರುಷೋತ್ತಮ ಶೆಟ್ಟಿ ವಾಮದಪದವು, ಜಿಲ್ಲಾ ಯುವಮೋರ್ಚಾದ ಪ್ರಧಾನ ಕಾರ್ಯದರ್ಶಿ ಸುದರ್ಶನ ಬಜವ ಯುವಮೋರ್ಚಾ ಪ್ರಚಾರಕ್ ನವೀನ್ ಅಯೋಧ್ಯಾ , ಸಂಗಬೆಟ್ಟು ಮಹಾಶಕ್ತಿ ಕೇಂದ್ರದ ಕಾರ್ಯದರ್ಶಿ ಪ್ರಬಾಕರ ಪ್ರಭು,ಗ್ರಾ.ಪಂ.ಸದಸ್ಯೆ ಶೋಭಾ, ಶೇಖರ್ ಶೆಟ್ಟಿ, ಪ್ರತಿಭಾ ಶೆಟ್ಟಿ, ಗೀತಾನಾಯಕ್, ಬೂತ್ ಅಧ್ಯಕ್ಷ ಅಮ್ಮು, ಕಾರ್ಯದರ್ಶಿ ಪ್ರಶಾಂತ್, ಮತ್ತಿತರರು ಉಪಸ್ಥಿತರಿದ್ದರು.