ಬಂಟ್ವಾಳದ ಸ್ಪರ್ಶ ಕಲಾ ಮಂದಿರದಲ್ಲಿ ಸಿಟಿಜನ್ಸ್ ಫೋರಂ ಆಶ್ರಯದಲ್ಲಿ ರಾಜಕೀಯರಹಿತ ಜನಸಂವಾದ ಕಾರ್ಯಕ್ರಮ ನಡೆಯಿತು. ಈ ಸಂದರ್ಭ ಮಾತನಾಡಿದ ಚಿಂತಕ, ಲೇಖಕ ಅರವಿಂದ ಚೊಕ್ಕಾಡಿ, ನಮ್ಮ ಅಭಿವೃದ್ಧಿಯ ಪರಿಕಲ್ಪನೆಯಲ್ಲಿ ಸಮಸ್ಯೆ ಇದೆ. ಅಭಿವೃದ್ದಿಯ ಬಗ್ಗೆ ನಮ್ಮ ಗ್ರಹಿಕೆಯಲ್ಲಿ ಸಮಸ್ಯೆ ಇದೆ, ಆರೋಗ್ಯ, ಶಿಕ್ಷಣ, ಆಹಾರ ವ್ಯವಸ್ಥೆ ಆಗದೆ ಬೇರೆ ಅಭಿವೃದ್ಧಿಗೆ ಅರ್ಥವಿಲ್ಲ ಎಂದರು.
ಪ್ರಜಾಪ್ರಭುತ್ವದಲ್ಲಿ ಜನರ ಮತ್ತು ಜನಪ್ರತಿನಿಧಿಗಳ ಕರ್ತವ್ಯ ವಿಚಾರದ ಮಂಡಿಸಿ ಮಾತನಾಡಿದ ಅವರು, ಜನರ ಒಂದು ಭಾಗವೇ ಜನಪ್ರತಿನಿಧಿಗಳು. ಸರಕಾರವನ್ನು ಖಾಸಗಿ ವ್ಯಕ್ತಿಗಳು ಅಥವಾ ಸಂಸ್ಥೆಗಳು ನಿಯಂತ್ರಿಸಿದರೆ ಅಪಾಯ ಕಟ್ಟಿಟ್ಟ ಬುತ್ತಿ ಎಂದರು.
ಮಾಜಿ ಸಚಿವ ಬಿ. ರಮಾನಾಥ ರೈ ಕಾರ್ಯಕ್ರಮ ಉದ್ಘಾಟಿಸಿ ಶುಭಕೋರಿದರು. ವಿಧಾನ ಪರಿಷತ್ ಮಾಜಿ ಸದಸ್ಯ ಅಣ್ಣ ವಿನಯ ಚಂದ್ರ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ಜನಪರವಾಗಿ ಧ್ವನಿ ಎತ್ತಬಲ್ಲವರನ್ನು ಶಾಸಕರನ್ನಾಗಿ ಆಯ್ಕೆ ಮಾಡುವ ಜವಾಬ್ದಾರಿ ಜನರಿಗಿದೆ. ಸಮಾಜದ ಅಭಿವೃದಿಗೆ ಮಾಜಿ ಶಾಸಕರು ತಮ್ಮಅನುಭವವನ್ನು ಧಾರೆ ಎರೆಯಬೇಕು ಎಂದು ತಿಳಿಸಿದರು.
ಸಿಟಿಜನ್ಸ್ ಫಾರಮ್ ಅಧ್ಯಕ್ಷ ಸದಾಶಿವ ರೈ ಚೆಲ್ಲಡ್ಕ ಉಪಸ್ಥಿತರಿದ್ದರು. ಬಳಿಕ ಮಾಜಿ ಸಚಿವ ಬಿ. ರಮಾನಾಥ ರೈ ಅವರ ಸಾಧನೆಯ ಬೆಳ್ಳಿಪಥ ಸಾಕ್ಷ ಚಿತ್ರವನ್ನು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಮಾಜಿ ಸದಸ್ಯ ಪಿಯೂಸ್ ಎಲ್. ರೋಡ್ರಿಗಸ್ ಉದ್ಘಾಟಿಸಿದರು. ಪ್ರಮುಖರಾದ ಚಂದ್ರಪ್ರಕಾಶ್ ಶೆಟ್ಟಿ, ಸುದರ್ಶನ ಜೈನ್, ಪದ್ಮಶೇಖರ ಜೈನ್, ಎಂ. ಎಸ್. ಮಹಮ್ನದ್, ಮಾಯಿಲಪ್ಪ ಸಾಲ್ಯಾನ್, ಬೇಬಿ ಕುಂದರ್, ಸುದೀಪ್ ಕುಮಾರ್ ಶೆಟ್ಟಿ, ಅಬ್ಬಾಸ್ ಅಲಿ, ಜಯಂತಿ ವಿ. ಪೂಜಾರಿ, ಸದಾಶಿವ ಬಂಗೇರ, ವಾಸು ಪೂಜಾರಿ, ಚಂದ್ರಶೇಖರ ಪೂಜಾರಿ, ಕೃಷ್ಣಪ್ಪ ಪೂಜಾರಿ ನಾಟಿ, ಪ್ರಸಾದ್ ಗಾಣಿಗ ಮೊದಲಾದವರು ಉಪಸ್ಥಿತರಿದ್ದರು.