ಆರೋಗ್ಯ, ಮೂಲಸೌಕರ್ಯಕ್ಕೆ ಬಂಟ್ವಾಳ ಕ್ಷೇತ್ರದಲ್ಲಿ ಸಾಕಷ್ಟು ಅನುದಾನ ಒದಗಿಸಲಾಗಿದೆ ಎಂದು ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಹೇಳಿದರು.
ಸಜಿಪದಲ್ಲಿ ಅವರು ವಿವಿಧ ಕಾಮಗಾರಿ ಉದ್ಘಾಟಿಸಿ ಮಾತನಾಡಿದರು. ಸಾವಿರದ ಐನೂರ ಎಂಟು ರಸ್ತೆಗಳು ಈತನಕ ಅಭಿವೃದ್ಧಿ ಯಾಗಿದೆ.ಶಾಸಕನಾಗಿರುವ ಕೊನೆಯ ಕ್ಷಣದವರೆಗೂ ಅನುದಾನಗಳನ್ನು ತಂದು, ಶಾಸಕತ್ವದ ಮೊದಲ ಅವಧಿಯನ್ನು ಪ್ರಾಮಾಣಿಕವಾಗಿ ನಿರ್ವಹಿಸಿದ ತೃಪ್ತಿ ಇದೆ ಎಂದರು.
ವಲಯ ಕಾಂಗ್ರೇಸ್ ಅಧ್ಯಕ್ಷ ಸತೀಶ್ ಗಟ್ಟಿ, ಗಣೇಶ್ ಭಂಡಾರಿ, ಧನೇಶ್ ಪೂಜಾರಿ, ಆನಂದ ಪೂಜಾರಿ, ಪ್ರಕಾಶ್ ಪೂಜಾರಿ, ಪ್ರೇಮ ಶೆಟ್ಟಿ, ತಿಮ್ಮಪ್ಪ ಬೆಳ್ಚಾಡ ಅವರನ್ನು ಬಿಜೆಪಿ ಪಕ್ಷಕ್ಕೆ ಶಾಸಕ ರಾಜೇಶ್ ನಾಯ್ಕ್ ಹಾಗೂ ಪಕ್ಷದ ಅಧ್ಯಕ್ಷ ದೇವಪ್ಪ ಪೂಜಾರಿ ಅವರ ಸಮ್ಮುಖದಲ್ಲಿ ಸೇರ್ಪಡೆಗೊಳಿಸಲಾಯಿತು .
ಮುಂಬಯಿ ಮಹಾನಗರ ಪಾಲಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ಸಂತೋಷ್ ಜಿ.ಶೆಟ್ಟಿ ದಳಂದಿಲ, ಜಿ.ಪಂ.ಮಾಜಿ ಸದಸ್ಯ ರವೀಂದ್ರ ಕಂಬಳಿ, ಬಂಟ್ವಾಳ ಬಿಜೆಪಿ ಅಧ್ಯಕ್ಷ ದೇವಪ್ಪ ಪೂಜಾರಿ, ಪ್ರಧಾನ ಕಾರ್ಯದರ್ಶಿ ಡೊಂಬಯ್ಯ ಅರಳ, ಕಾರ್ಯದರ್ಶಿ ರಮನಾಥ ರಾಯಿ, ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಶ್ರೀಕಾಂತ್ ಶೆಟ್ಟಿ ಸಜೀಪ, ಸಜೀಪ ಮಾಗಣೆ ತಂತ್ರಿ ಸುಬ್ರಹ್ಮಣ್ಯ ಭಟ್, ಪ್ರಭಾರಿ ಪುರುಷೋತ್ತಮ ಸಾಲಿಯಾನ್ ನರಿಕೊಂಬು, ಗ್ರಾ.ಪಂ.ಸದಸ್ಯರಾದ ಪ್ರವೀಣ್ ಗಟ್ಟಿ, ಸುಮತಿ, ಸುಂದರ ಪೂಜಾರಿ , ನವೀನ್ ಅಂಚನ್, ಗಣೇಶ್, ಸರೋಜಿನಿ, ಧಯಾಲಕ್ಮೀ, ಸಂದೀಪ್ ಮಾರ್ನಬೈಲು, ಅನಿತಾ, ಚಂದ್ರಕಲಾ, ರಾಜೇಶ್ ಮರ್ತಾಜೆ,ಪ್ರಮುಖರಾದ ಚರಣ್ ಕಟ್ಟೆ, ಇದಿನಬ್ಬ, ಜಯಶಂಕರ ಬಾಸ್ರಿತ್ತಾಯ, ಸೋಮಶೇಖರ ಅಲಾಡಿ, ಪ್ರಸಾದ್ ಮುಗುಳಿಯಾ, ವೀರೇಂದ್ರ ಕುಲಾಲ್, ವಿಶ್ವನಾಥ ಕೊಟ್ಟಾರಿ, ಕೃಷ್ಣ ಉದ್ದೊಟ್ಟು, ದಿವಾಕರ ವಿದ್ಯಾನಗರ, ನಿತ್ಯಾನಂದ ವಿದ್ಯಾನಗರ, ಸುಂದರ ಪೂಜಾರಿ ಉದ್ದೊಟ್ಟು ಮತ್ತಿತರರು ಉಪಸ್ಥಿತರಿದ್ದರು.