ಪ್ರಸಿದ್ಧ ಚಿತ್ರಕಲಾವಿದ ಬೀದರ್ ನ ನಾರಾಯಣ ಕುಂಬಾರ್ (ಎನ್.ಎಸ್.ಕುಂಬಾರ್) ಅವರೊಂದಿಗೆ ಅವರ ಪತ್ನಿ ಶಿಲ್ಪಾಶ್ರೀ ಹಾಗೂ ಎನ್.ಎಸ್.ಕುಂಬಾರ್ ಆರ್ಟ್ ಅಕಾಡೆಮಿ ವಿದ್ಯಾರ್ಥಿಗಳಿಂದ ಚಿತ್ರಪ್ರದರ್ಶನ ದುಬೈನಲ್ಲಿ ನಡೆಯುತ್ತಿದೆ. ಮಾರ್ಚ್ 18ರಿಂದ ಪ್ರದರ್ಶನ ಆರಂಭಗೊಂಡಿದ್ದು, 25ರವರೆಗೆ ನಡೆಯಲಿದೆ. ದುಬೈ ಇಂಟರ್ನಾಷನಲ್ ಆರ್ಟ್ ಸೆಂಟರ್ ನಲ್ಲಿ ಈ ಪ್ರದರ್ಶನ ಏರ್ಪಟ್ಟಿದೆ.
ವಿಟ್ಲದ ನೆಕ್ಕರೆಕಾಡು ನಿವಾಸಿ, ಉದಯೋನ್ಮುಖ ಚಿತ್ರಕಲಾವಿದೆ ಶಿಲ್ಪಾಶ್ರೀ ಮತ್ತು ಅವರ ಪತಿ, ಬೀದರ್ ನಿವಾಸ್ ಎನ್.ಎಸ್. ಕುಂಬಾರ ಮತ್ತು ಅವರ ಅಕಾಡೆಮಿಯ ವಿದ್ಯಾರ್ಥಿಗಳಾದ ವಿವಾನ್ ಎಸ್ ಸಿಂಘಾಲ್, ಅಯಾನ್ಸ್ ರುಪಾಣಿ, ಗೀತಾ ತೂಪಲ್ಲಿ, ಸ್ಹೌರ್ಯ ಎಸ್ ಗಂಗಡ್ಕರ್, ಆಶೀಶ್. ಎನ್, – ಪವನ್, ಜಿ, ಅನನ್ಯ ಎಸ್ ನಾಯಕ್, ಖುಷಿ ತಟಿನಿ ರಾಯ್, ಸ್ಹ್ರೆಯ ಎಸ್ ಶೇಟ್, ಸ್ವರೂಪ್ ಮುರಗೋಡ್ , ಸ್ಯಹನ ಪಿ , ಮೇಧಾ ಎಸ ಐಎಂಗರ್ , ಅರ್ಜುನ್ ಕೊಂಚಾಡಿ, ವಂದನಾ ವಿ ದುಡಿ ಅವರ ಚಿತ್ರಪ್ರದರ್ಶನಗಳು ಚಿತ್ರಕಲಾ ಪ್ರದರ್ಶನದಲ್ಲಿವೆ.
ಒಮಾನ್ ದೇಶದ ಪ್ರತಿಷ್ಠಿತ ಸಂಸ್ಥೆಯಾದ ಇನ್ಕ್ರಿಡೆಬಲ್ ಟ್ಯಾಲೆಂಟ್ಸ್ ನವರ ಆಯೋಜಿತ ಇಂಟರ್ನ್ಯಾಷನಲ್ ಪೇಂಟಿಂಗ್ ಚಿತ್ರಕಲಾ ಪ್ರದರ್ಶನವಿದು.
ನಾರಾಯಣ್ ಕುಂಬಾರ ಅವರು ಮೂರು ಬಾರಿ ರಾಷ್ಟ್ರೀಯ ಪ್ರಶಸ್ತಿ ಪಡೆದಿದ್ದು, ಬೆಂಗಳೂರು ,ರಾಜಸ್ಥಾನ್ ,ದೆಹಲಿ ,ಚಂಡೀಘಡ್ , ಮುಂಬಯಿ, ಒರಿಸ್ಸಾ ,ಹೈದರಾಬಾದ್ ,ಚೆನ್ನೈ ಸಹಿತ ದೇಶ ವಿದೇಶಗಳಲ್ಲಿ ಪ್ರದರ್ಶನ ನೀಡಿದ್ದಾರೆ.ಚಿತ್ರಕಲಾವಿದೆ ಶಿಲ್ಪಾಶ್ರೀ ಅವರು ನಿವೃತ್ತ ಯೋಧ, ಯೂನಿಯನ್ ಬ್ಯಾಂಕ್ ನ ನಿವೃತ್ತ ಸ್ಪೆಶಲ್ ಅಸಿಸ್ಟೆಂಟ್ ಕೆ.ವಾಮನ ಅವರ ಪುತ್ರಿ.