ಬಂಟ್ವಾಳ

ಬಂಟ್ವಾಳದಲ್ಲಿ ಬಿಜೆಪಿ ಜಿಲ್ಲಾ ಮಟ್ಟದ ರೈತ ಮೋರ್ಚಾ ಸಮಾವೇಶ

ಬಂಟ್ವಾಳದ ಸ್ಪರ್ಶ ಕಲಾ ಮಂದಿರದಲ್ಲಿ ಬಿಜೆಪಿಯ ಜಿಲ್ಲಾ ಮಟ್ಟದ ರೈತ ಮೋರ್ಚಾ ಸಮಾವೇಶ ನಡೆಯಿತು. ಈ ಸಂದರ್ಭ ಮಾತನಾಡಿದ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ, ಬಂಟ್ವಾಳ ಕ್ಷೇತ್ರದ ಮತದಾರರು ನೀಡಿದ ಪ್ರತಿಯೊಂದು ಮತಕ್ಕೂ ನ್ಯಾಯ ಸಿಗುವ ಕೆಲಸವನ್ನು ಅತ್ಯಂತ ಪ್ರಾಮಾಣಿಕ ಪ್ರಯತ್ನದ ಮೂಲಕ ಮಾಡಿದ್ದೇನೆ ಎಂಬ ಆತ್ಮ ತೃಪ್ತಿ ಇದೆ ಎಂದರು,.

ಬಿ.ಎಸ್. ಯಡಿಯೂರಪ್ಪ ಅವರು ಸರಕಾರ ರಚನೆ ಮಾಡಿದ ಫಲವಾಗಿ ಬಂಟ್ವಾಳ ಕ್ಷೇತ್ರದಲ್ಲಿ ಹಿಂದೆಂದಿಗಿಂತಲೂ ಅಧಿಕವಾಗಿ ಅಭೂತಪೂರ್ವ ಅಭಿವೃದ್ಧಿ ಕಾಮಗಾರಿಗಳನ್ನು ನಡೆಸಲು ಸಾಧ್ಯವಾಯಿತು ಎಂದ ಅವರು, ಬಂಟ್ವಾಳದಲ್ಲಿ 24496 ಕೃಷಿಕರಿಗೆ ರೈತ ಕಿಸಾನ್ ಸಮ್ಮಾನ್ ಯೋಜನೆ,   21 ಕೋಟಿ ರೂ. ಫಸಲ್ ಬಿಮಾ ಯೋಜನೆ ಮೂಲಕ ಸಿಕ್ಕಿದೆ ಎಂದರು.

ಜಿಲ್ಲಾ ಬಿಜೆಪಿ ಅಧ್ಯಕ್ಷ ಸುದರ್ಶನ ಮೂಡುಬಿದಿರೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಇಸ್ರೇಲ್ ಮಾದರಿಯ ಕೃಷಿಯನ್ನು ಮಾಡುವ ದೇಶಗಳಿಗೆ  ಇಸ್ರೇಲ್ ಗೆ ಕೃಷಿ ಪರಂಪರೆಯನ್ನು ನೀಡಿದ ದೇಶ ಭಾರತ ಎಂಬ ಸತ್ಯ  ಗೊತ್ತಿರಬೇಕು ಎಂದರು. ಕೊರೊನಾ ಬಳಿಕ ದೇಶ ಆರ್ಥಿಕ ವಾಗಿ ಸದೃಢವಾಗಿ ಜಗತ್ತಿನಲ್ಲಿ ಅತ್ಯಂತ ಎತ್ತರಕ್ಕೆ ಮತ್ತೆ ಬೆಳೆಯಲು ಕೃಷಿಯಿಂದ ಮಾತ್ರ ಸಾಧ್ಯವಾಯಿತು  ಎಂಬ ಸತ್ಯವನ್ನು ನಾವು ಎಂದೂ ಮರೆಯಬಾರದು.  ಬಿಜೆಪಿ‌ ಆಡಳಿತಕ್ಕೆ ಬಂದ ಮೇಲೆ ಈವರೆಗೆ ಒಂದೇ ಒಂದು ಬಾರಿ  ರೈತರ ಮೇಲೆ ಲಾಠಿ ಚಾರ್ಜ್ ನಡೆಯಲಿಲ್ಲ,ಗೊಬ್ಬರಕ್ಕಾಗಿ ಸರತಿ ಸಾಲಿನಲ್ಲಿ ನಿಲ್ಲುವ ಕೆಲಸ ಆಗಿಲ್ಲ, ಇದು ಬಿಜೆಪಿ ಸರಕಾರದ ಸಾಧನೆ ಎಂದರು.

ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್ ದಿಕ್ಸೂಚಿ ಭಾಷಣ ಮಾಡಿ, ಕಾಂಗ್ರೇಸ್ ಹತಾಶೆಯಿಂದ  ಚುನಾವಣೆ ಬಂದಾಗ ಅಧಿಕಾರದ ಆಸೆಯಿಂದ ಸುಳ್ಳು  ಆಶ್ವಾಸನೆಗಳು ನೀಡಲು ಪ್ರಾರಂಭಿಸಿದೆ ಎಂದರು. ಇಂದು ಗ್ಯಾರಂಟಿ ಹೇಳುವವರು ಕಾಣಸಿಗುತ್ತಾರೆ, ಆದರೆ ಅವರೇ ಗ್ಯಾರಂಟಿ ಇಲ್ಲ ಎಂದು ಲೇವಡಿ ಮಾಡಿದರು.

ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ, ಮಾಜಿ ಶಾಸಕರಾದ ಎ.ರುಕ್ಮಯ ಪೂಜಾರಿ, ಕೆ. ಪದ್ಮನಾಭ ಕೊಟ್ಟಾರಿ, ರಾಜ್ಯ ನೀರು ಸರಬರಾಜು ಒಳಚರಂಡಿ ನಿಗಮದ ನಿರ್ದೇಶಕಿ ಸುಲೋಚನ ಜಿ.ಕೆ.ಭಟ್, ಬಂಟ್ವಾಳ ಮಂಡಲ ಅಧ್ಯಕ್ಷ ದೇವಪ್ಪ ಪೂಜಾರಿ ಬಾಳಿಕೆ, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಸುಧೀರ್ ಶೆಟ್ಟಿ ಕಣ್ಣೂರು, ರಾಮ್ ದಾಸ ಬಂಟ್ವಾಳ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಕೊರಗಪ್ಪ ನಾಯ್ಕ್ , ರೈತ ಮೋರ್ಚಾದ ಜಿಲ್ಲಾ ಪ್ರಭಾರಿ ಕೇಶವ ಭಟ್ ಮುಳಿಯ, ಮೋರ್ಚಾಗಳ ಜಿಲ್ಲಾ ಸಂಯೋಕರಾದ ಈಶ್ವರ ಕಟೀಲು, ಜಿಲ್ಲಾ ಮಾದ್ಯಮ ಪ್ರಮುಖ್  ಸಂದೇಶ್ ಶೆಟ್ಟಿ, ರೈತ ಮೋರ್ಚಾದ ಬಂಟ್ವಾಳ ಮಂಡಲದ ಅಧ್ಯಕ್ಷ ವಿಶ್ವನಾಥ ಪೂಜಾರಿ, ಮೂಡಬಿದರೆ ರೈತ ಮೋರ್ಚಾದ  ಅಧ್ಯಕ್ಷ  ಸೋಮನಾಥ, ಬೆಳ್ತಂಗಡಿ ರೈತ ಮೋರ್ಚಾದ ಅಧ್ಯಕ್ಷ ಜಯಂತ ಗೌಡ, ರೈತ ಮೋರ್ಚಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ವಸಂತ ಅಣ್ಣಳಿಕೆ, ರಾಘವೇಂದ್ರ ಭಟ್, ಮಂಡಲದ ಚುನಾವಣಾ ಪ್ರಭಾರಿ ರವಿಶಂಕರ್ ಮಿಜಾರು, ಮಂಗಳೂರು ವಿಭಾಗದ ಸಂಘಟನಾ ಕಾರ್ಯದರ್ಶಿ  ಪ್ರಸಾದ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.ಜಿಲ್ಲಾ ರೈತ ಮೋರ್ಚಾದ ಅಧ್ಯಕ್ಷ ರಾಧಕೃಷ್ಣ ಬೊಳ್ಳೂರು ಸ್ವಾಗತಿಸಿದರು. ರೈತ ಮೋರ್ಚಾದ ಜಿಲ್ಲಾ ಉಪಾಧ್ಯಕ್ಷ ಮಹೇಶ್ ಕುಮಾರ್ ಶೆಟ್ಟಿ ಮೇನಾಲ ವಂದಿಸಿದರು. ಬಂಟ್ವಾಳ ಮಂಡಲದ ಪ್ರಧಾನ ಕಾರ್ಯದರ್ಶಿ ಡೊಂಬಯ್ಯ ಅರಳ ಕಾರ್ಯಕ್ರಮ ನಿರೂಪಿಸಿದರು.

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ