ವಿಟ್ಲಪಡ್ನೂರು ಗ್ರಾಮದ ಪೂರ್ಲಪ್ಪಾಡಿ ಪೈಸಾರಿ ಎಂಬಲ್ಲಿ ಶ್ರೀ ನಾಗದೇವರಿಗೆ ಬ್ರಹ್ಮಕಲಶ ಮತ್ತು ಶ್ರೀ ರಕ್ತೇಶ್ವರಿ, ಗುಳಿಗ ದೈವದ ಮತ್ತು ರಕ್ಷಬ್ರಹ್ಮ ಸಾನಿಧ್ಯ ಪುನರ್ ಪ್ರತಿಷ್ಠೆ ಹಾಗೂ ಬ್ರಹ್ಮಕಲಶ ವೇದಮೂರ್ತಿ ಬ್ರಹ್ಮಶ್ರೀ ಕುಂಟುಕುಡೇಲು ರಘುರಾಮ ತಂತ್ರಿ ನೇತೃತ್ವದಲ್ಲಿ ನಡೆಯಿತು.
ರಾತ್ರಿ ಜರುಗಿದ ವಾಸ್ತು ಹೋಮ, ವಾಸ್ತು ಬಲಿ ಪೂಜಾ ಸಮಯ ಶ್ರೀ ಮಹಮ್ಮಾಯೀ ಭಜನಾ ಮಂಡಳಿ (ರಿ.) ನಾಗವನ – ಕುಂಟ್ರಕಲ ಭಜನಾ ಸೇವೆ ನಡೆಸಿಕೊಟ್ಟರು. ಕಾರ್ಯಕ್ರಮಕ್ಕೆ ಶ್ರೀ ಚಾಮುಂಡೇಶ್ವರೀ ದೇವೀ ಕ್ಷೇತ್ರ, ಕಣಿಯೂರು – ಕನ್ಯಾನ ಇಲ್ಲಿಯ ಶ್ರೀ ಮಹಾಬಲೇಶ್ವರ ಸ್ವಾಮೀಜಿ ಭೇಟಿ ಇತ್ತು ಆಶೀರ್ವದಿಸಿದರು. ವಿಟ್ಲ ಅರಮನೆಯ ಕೃಷ್ಣಯ್ಯ ಕೆ., ಕೃಷ್ಣ ವರ್ಮ ಮತ್ತಿತರರು ಆಗಮಿಸಿ ಶುಭ ಹಾರೈಸಿದರು. ಈ ಸಂದರ್ಭ ಸ್ಥಳ ಸಾನಿಧ್ಯದ ಯಮುನಾ, ಮೋನಪ್ಪ ನಾಯ್ಕ ಪೂರ್ಲಪ್ಪಾಡಿ ಮತ್ತು ಶ್ರೀ ಮಲರಾಯಿ ದೇವಸ್ಥಾನ ಆಡಳಿತ ಟ್ರಸ್ಟ್ (ರಿ.) ಪೂರ್ಲಪ್ಪಾಡಿ ಸದಸ್ಯರು ಸಹಕರಿಸಿದರು.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…