ಬಂಟ್ವಾಳ: ಬಾಳ್ತಿಲದ ವಾತ್ಸಲ್ಯಮಯಿ ಮಹಿಳಾ ಅಭಿವೃದ್ಧಿ ಮತ್ತು ಸಂಶೋಧನಾ ಸಂಸ್ಥೆ ವತಿಯಿಂದ ಮಹಿಳಾ ದಿನಾಚರಣೆ ಬಾಳ್ತಿಲದಲ್ಲಿ ನಡೆಯಿತು. ಈ ಸಂದರ್ಭ ಕಲಾನೃತ್ಯ ತರಬೇತಿ, ಭಜನೆ ತರಬೇತಿ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಲಾಯಿತು. ನೀಲಮ್ಮ ಅವರು ಉದ್ಘಾಟಿಸಿದರು.
ತುಳಸಿ ಅವರು ಯೋಗ ತರಬೇತಿ ಕುರಿತು ಮಾಹಿತಿ ನೀಡಿದರು. ಗ್ರಾಮೀಣ ಮಹಿಳಾ ಸಾಧಕಿಯರಾದ ತುಳಸಿ, ನೀಲಮ್ಮ, ಹೊನ್ನಮ್ಮ ಅವರನ್ನು ಗೌರವಿಸಲಾಯಿತು. ನ್ಯಾಯವಾದಿ, ಕಿತ್ತೂರು ರಾಣಿ ಚೆನ್ನಮ್ಮ ರಾಜ್ಯ ಪ್ರಶಸ್ತಿ ಪುರಸ್ಕೃತರೂ ಆಗಿರುವ ವಾತ್ಸಲ್ಯಮಯಿ ಮಹಿಳಾ ಅಭಿವೃದ್ಧಿ ಮತ್ತು ಸಂಶೋಧನಾ ಸಂಸ್ಥೆ ಸಂಸ್ಥಾಪಕಿ ಶೈಲಜಾ ರಾಜೇಶ್ ಅಧ್ಯಕ್ಷತೆಯನ್ನು ವಹಿಸಿದ್ದರು. ಶಾರದಾ ಜಿ ಬಂಗೇರ ಇವರು ಮಹಿಳೆಯರಿಗೆ ಪಾರ್ದಾನ , ಕಬಿತೆ ಯನ್ನು ಹೇಳಿದರು, ಡಾ. ರಾಜೇಶ್ ಪೂಜಾರಿ,ಭಾಸ್ಕರ್ ಉಪಸ್ಥಿತರಿದ್ದರು, ಕಾರ್ಯಕ್ರಮದ ನಿರೂಪಣೆಯನ್ನು ಶೌರ್ಯ ನಡೆಸಿಕೊಟ್ಟರು.
ನಿಯಮ 377ರ ಅಡಿಯಲ್ಲಿ ಸಮುದ್ರ ತೀರದ ಪವನ ಸಾಮರ್ಥ್ಯದ ಬಗ್ಗೆ ಲೋಕಸಭೆ ಗಮನಸೆಳೆದ ಸಂಸದ ಕ್ಯಾ. ಚೌಟ (more…)