ಬಂಟ್ವಾಳ: ನಾನು ಯಾವುದೇ ತಪ್ಪು ಕೆಲಸ ಮಾಡಿಲ್ಲ. ಆದರೂ ಇಲ್ಲಸಲ್ಲದ ಆರೋಪ ಮಾಡಲಾಗುತ್ತಿದೆ. ದ್ವೇಷದ ರಾಜಕಾರಣ ಮಾಡದಿರುವ ತನ್ನನ್ನು ಕಳೆದ ಬಾರಿ ಅಪಪ್ರಚಾರ ಮೂಲಕ ಸೋಲಿಸಲಾಯಿತು ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಹೇಳಿದ್ದಾರೆ.
ವಾಮದಪದವಿನ ಬಸ್ತಿಕೋಡಿ ಎಂಬಲ್ಲಿ ಎರಡನೇ ದಿನದ ಬಂಟ್ವಾಳ ಪ್ರಜಾಧ್ವನಿ ಯಾತ್ರೆ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇದು ನನ್ನ ಕಡೇಯ ಚುನಾವಣೆಯಾಗಿದ್ದು, ಜನರು ಬೆಂಬಲಿಸುತ್ತಾರೆ ಎಂಬ ವಿಶ್ವಾಸ ತನಗಿದೆ ಎಂದರು.
ಕೆಪಿಸಿಸಿ ವಕ್ತಾರ ಅಮೃತ್ ಶೆಣೈ ಮಾತನಾಡಿ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಹೆಸರು ಹೇಳಿ ಬಿಜೆಪಿಯವರು ಚುನಾವಣೆ ಗೆದ್ದಿದ್ದಾರೆಯೇ ಹೊರತು ಸ್ಥಳೀಯರ ಸಾಧನೆ ಏನೂ ಇಲ್ಲ ಎಂದರು.
ಮುಖಂಡರಾದ ಕಾವು ಹೇಮನಾಥ ಶೆಟ್ಟಿ, ಪಿಯೂಸ್ ಎಲ್. ರೋಡ್ರಿಗಸ್, ಬೇಬಿ ಕುಂದರ್, ಸುದೀಪ್ ಕುಮಾರ್ ಶೆಟ್ಟಿ, ಚಂದ್ರಪ್ರಕಾಶ್ ಶೆಟ್ಟಿ, ಪದ್ಮಶೇಖರ್ ಜೈನ್, ಎಂ.ಎಸ್ .ಮಹಮ್ಮದ್, ಅಬ್ಬಾಸ್ ಆಲಿ ಬಿ.ಎಂ, ಸುದರ್ಶನ ಜೈನ್, ಮಾಯಿಲಪ್ಪ ಸಾಲಿಯಾನ್ ಸಹಿತ ವಿವಿಧ ನಾಯಕರು, ಸ್ಥಳೀಯ ಮುಖಂಡರು, ಗ್ರಾ.ಪಂ.ಅಧ್ಯಕ್ಷೆ ಭಾರತಿ ರಾಜೇಂದ್ರ ಮತ್ತಿತರರು ಉಪಸ್ಥಿತರಿದ್ದರು.