ಜೋಡುಮಾರ್ಗ ನೇತ್ರಾವತಿ ಜೇಸಿ ವತಿಯಂದ ಬಿ.ಸಿ.ರೋಡಿನ ಪ್ರೀತಿ ಕಾಂಪ್ಲೆಕ್ಸ್ ನಲ್ಲಿ ನಡೆದ ಸಮಾರಂಭದಲ್ಲಿ ವಿಶ್ವ ಮಹಿಳಾ ದಿನಾಚರಣೆ ಹಿನ್ನೆಲೆಯಲ್ಲಿ ರಾಣಿ ಅಬ್ಬಕ್ಕ ಅಧ್ಯಯನ ಕೇಂದ್ರದ ಸಂಸ್ಥಾಪಕಿ ಹಾಗೂ ಮಂಗಳೂರು ಶ್ರೀ ಗೋಕರ್ಣನಾಥ ಕಾಲೇಜಿನ ಪ್ರಿನ್ಸಿಪಾಲ್ ಡಾ. ಆಶಾಲತಾ ಎಸ್.ಸುವರ್ಣ ಅವರನ್ನು ಸನ್ಮಾನಿಸಲಾಯಿತು.
ಜೇಸಿ ಅಧ್ಯಕ್ಷೆ ಗಾಯತ್ರಿ ಲೋಕೇಶ್ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಜೇಸಿ ವಲಯ ಸಂಯೋಜಕಿ ಸುಮನಾ ಪೊಳಲಿ ಭಾಗವಹಿಸಿ ಶುಭ ಹಾರೈಸಿದರು. ಈ ಸಂದರ್ಭ ಮಾತನಾಡಿದ ಡಾ.ಆಶಾಲತಾ ಸುವರ್ಣ, ಮಹಿಳೆಯ ಬದುಕಿನ ಮಾರ್ಗಸೂಚಿ ಮನೆಯ ವಾತಾವರಣದಿಂದಲೇ ಆರಂಭಗೊಳ್ಳುತ್ತದೆ ಎಂದರು.
ಇದೇ ಸಂದರ್ಭ ಮಂಗಳೂರು ಸ್ಫೂರ್ತಿ ಜೇಸಿ ಅಧ್ಯಕ್ಷೆ ವೀಣಾ ಕೆ. ಅವರು ಕೆಲಸ ಮತ್ತು ಬದುಕಿನ ಮಧ್ಯೆ ಸಮತೋಲನದ ಕುರಿತು ತರಬೇತಿ ನಡೆಸಿಕೊಟ್ಟರು. ಸ್ಥಳೀಯ ಘಟಕಾಭಿವೃದ್ಧಿ ಕುರಿತ ತರಬೇತಿಯನ್ನು ವಲಯ ಉಪಾಧ್ಯಕ್ಷ ಅಜಿತ್ ಕುಮಾರ್ ರೈ ನಡೆಸಿಕೊಟ್ಟರು. ನಿಕಟಪೂರ್ವ ಅಧ್ಯಕ್ಷ ಹರಿಪ್ರಸಾದ್ ಕುಲಾಲ್ ಶುಭ ಹಾರೈಸಿದರು. ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಅಧ್ಯಕ್ಷ ಪ್ರೊ.ತುಕಾರಾಮ ಪೂಜಾರಿ, ಜೇಸಿ ಪೂರ್ವಾಧ್ಯಕ್ಷರಾದ ರಾಮಚಂದ್ರ ರಾವ್, ಅಹಮದ್ ಮುಸ್ತಫಾ, ಜಯಾನಂದ ಪೆರಾಜೆ, ವಸಂತ್ ಉಪಸ್ಥಿತರಿದ್ದ ಕಾರ್ಯಕ್ರಮದಲ್ಲಿ ಜೇಸಿ ಕಾರ್ಯದರ್ಶಿ ರಮ್ಯಾ ವಿನಾಯಕ ವಂದಿಸಿದರು.