ಬಂಟ್ವಾಳ

ಕಾಂಗ್ರೆಸ್ ನ ಬಂಟ್ವಾಳ ಪ್ರಜಾಧ್ವನಿ ಯಾತ್ರೆ ನಾಳೆಯಿಂದ, ವಿವರ ಇಲ್ಲಿದೆ

ಬಂಟ್ವಾಳ: ಮಾಜಿ ಸಚಿವ ಬಿ.ರಮಾನಾಥ ರೈ ಸಾರಥ್ಯದಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಮಾರ್ಚ್ 10ರಿಂದ ಆರಂಭಗೊಳ್ಳಲಿದೆ. ರೈ ಅವಧಿಯಲ್ಲಿ ನಡೆದ ಅಭಿವೃದ್ದಿ ಕಾರ್ಯಗಳನ್ನು ಕ್ಷೇತ್ರದ ಜನರಿಗೆ ಪರಿಚಯಿಸುವ ಬಂಟ್ವಾಳ ಪ್ರಜಾದ್ವನಿ ಯಾತ್ರೆಯ ಉದ್ಘಾಟನೆಯನ್ನು ಮಾರ್ಚ್ 10 ರಂದು ಕರಿಯಂಗಳ ಗ್ರಾಮದ ಪುಂಚಮೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮತ್ತು ವಿದಾನಪರಿಷತ್ ಸದಸ್ಯರಾದ ಹರೀಶ್ ಕುಮಾರ್ ಮಾಡಲಿದ್ದು ಸಂಜೆ ಬಡಕಬೈಲ್ ನಲ್ಲಿ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ವಿದಾನಪರಿಷತ್ ಸದಸ್ಯರಾದ ಡಾ.ಮಂಜುನಾಥ ಭಂಡಾರಿ ಭಾಗವಹಿಸಲಿದ್ದಾರೆ ಎಂದು ಯಾತ್ರೆಯ ಸಂಚಾಲಕ ಮತ್ತು ಕೆಪಿಸಿಸಿ ಸದಸ್ಯ ಪಿಯೂಸ್ ಎಲ್ ರೋಡಿಗಸ್ ತಿಳಿಸಿದ್ದಾರೆ. ವಿವರ ಹೀಗಿದೆ.

ಜಾಹೀರಾತು

ಮಾರ್ಚ್ 10ರ ಶುಕ್ರವಾರ ಕರಿಯಂಗಳ, ಬಡಗಬೆಳ್ಳೂರು, ತೆಂಕಬೆಳ್ಳೂರು, ಅಮ್ಮುಂಜೆ ಗ್ರಾಮಗಳು. ಸಂಜೆ 6ಕ್ಕೆ ಬಡಕಬೈಲಿನಲ್ಲಿ ಸಭಾ ಕಾರ್ಯಕ್ರಮ. 11ರಂದು ಕಳ್ಳಿಗೆ, ಅಮ್ಟಾಡಿ, ಕುರಿಯಾಳ, ಅರಳ, ಕೊಯ್ಲ. ಸಂಜೆ ರಾಯಿ ಜಂಕ್ಷನ್ ನಲ್ಲಿ ಸಭಾ ಕಾರ್ಯಕ್ರಮ. 12ರಂದು ಕರ್ಪೆ, ಸಂಗಬೆಟ್ಟು, ಕುಕ್ಕಿಪ್ಪಾಡಿ, ಎಲಿಯನಡುಗೋಡು, ಚೆನ್ನೈತೋಡಿ, ಅಜ್ಜಿಬೆಟ್ಟು, ಕೊಡಂಬೆಟ್ಟು. ಸಂಜೆ ವಾಮದಪದವು ಜಂಕ್ಷನ್ ನಲ್ಲಿ ಕಾರ್ಯಕ್ರಮ. 13ರಂದು ಇರ್ವತ್ತೂರು, ಪಿಲಾತಬೆಟ್ಟು, ಬಡಗಕಜೆಕಾರು, ತೆಂಕಕಜೆಕಾರು. ಸಂಜೆ 6 ಗಂಟೆಗೆ ಪಾಂಡವರಕಲ್ಲು ಜಂಕ್ಷನ್ ನಲ್ಲಿ ಕಾರ್ಯಕ್ರಮ. 14ರಂದು ಉಳಿ, ಸರಪಾಡಿ, ದೇವಸ್ಯಮುಡೂರು, ಮಣಿನಾಲ್ಕೂರಿನಲ್ಲಿ ಯಾತ್ರೆ, ಸಂಜೆ ಮಾವಿನಕಟ್ಟೆಯಲ್ಲಿ ಕಾರ್ಯಕ್ರಮ, 15ರಂದು ದೇವಸ್ಯಪಡೂರು, ನಾವೂರ, ಕಾಡಬೆಟ್ಟು, ಕಾವಳಪಡೂರು, ಕಾವಳಮುಡೂರಿನಲ್ಲಿ ಕಾರ್ಯಕ್ರಮ. ಸಂಜೆ ಕಾವಳಕಟ್ಟೆಯಲ್ಲಿ ಸಭೆ,  16ರಂದು ಮೂಡುನಡುಗೋಡು, ಬುಡೋಳಿ, ಪಂಜಿಕಲ್ಲು, ಬಂಟ್ವಾಳ ಕಸ್ಬಾದಲ್ಲಿ ಯಾತ್ರೆ, ಸಂಜೆ ಲೊರೆಟ್ಟೊಪದವಿನಲ್ಲಿ ಕಾರ್ಯಕ್ರಮ. 17ಕ್ಕೆ ಬಿಮೂಡ, ಪಾಣೆಮಂಗಳೂರು, ಸಂಜೆ ಬೋಗೋಡಿ ಜಂಕ್ಷನ್ ನಲ್ಲಿ ಕಾರ್ಯಕ್ರಮ, 18ರಂದು ಸಾಲೆತ್ತೂರು, ಕನ್ಯಾನ, ಕರೋಪಾಡಿಯಲ್ಲಿ ಯಾತ್ರೆ, ಕನ್ಯಾನ ಜಂಕ್ಷನ್ ನಲ್ಲಿ ಕಾರ್ಯಕ್ರಮ 19ರಂದು ವಿಟ್ಲಪಡ್ನೂರು, ಕೊಳ್ನಾಡು, ಮಂಚಿಯಲ್ಲಿ ಯಾತ್ರೆ ಕುಕ್ಕಾಜೆ ಜಂಕ್ಷನ್ ನಲ್ಲಿ ಸಭೆ, 20ರಂದು ಸಜಿಪಮುನ್ನೂರು, ಅಮ್ಟೂರು, ಸಜಿಪಮೂಡದಲ್ಲಿ ಯಾತ್ರೆ, ಬೊಳ್ಳಾಯಿ ಜಂಕ್ಷ ನ್ ನಲ್ಲಿ ಸಭೆ, 21ರಂದು ಬೋಳಂತೂರು, ಗೋಳ್ತಮಜಲು ವೀರಕಂಭದಲ್ಲಿ ಯಾತ್ರೆ, ಮಂಗಿಲಪದವಿನಲ್ಲಿ ಸಂಜೆ ಸಭೆ. 22ರಂದು ಅನಂತಾಡಿ, ನೆಟ್ಲಮುಡ್ನೂರು, ಪೆರಾಜೆ, ಕಡೇಶ್ವಾಲ್ಯ, ಮಾಣಿಯಲ್ಲಿ ಯಾತ್ರೆ 22ರಂದು ಮಾಣಿ ಜಂಕ್ಷನ್ ನಲ್ಲಿ ಸಭೆ. 23ರಂದು ಬರಿಮಾರು, ಶಂಭೂರು, ಬಾಳ್ತಿಲ,. ನರಿಕೊಂಬು ಯಾತ್ರೆ. ಮೊಗರ್ನಾಡು ಜಂಕ್ಷನ್ ನಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ ಎಂದು ಸಂಚಾಲಕ ಪಿಯೂಸ್ ಎಲ್. ರೋಡ್ರಿಗಸ್ ತಿಳಿಸಿದ್ದಾರೆ.

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ