ಬಂಟ್ವಾಳ: ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರು ಬರಿಮಾರು ಗ್ರಾಮದಲ್ಲಿ ವಿವಿಧ ಕಾಮಗಾರಿಗಳನ್ನು ಬುಧವಾರ ಉದ್ಘಾಟಿಸಿದರು. ಕಲ್ಲೆಟ್ಟಿ ಕಾನಲ್ತಾಯ ಮಹಾಕಾಳಿ ದೈವಸ್ಥಾನಕ್ಕೆ ರೂ 40 ಲಕ್ಷ ರೂ ವೆಚ್ಚದಲ್ಲಿ ನಿರ್ಮಿಸಲಾದ ತಡೆಗೋಡೆ 25 ಲಕ್ಷ ರೂ ವೆಚ್ಚದಲ್ಲಿ ನಿರ್ಮಿಸಲಾದ ಪಂಜುರ್ಲಿಗುಡ್ಡೆ ಮಹಾಕಾಳಿಬೆಟ್ಟು, ತಲಾ 10 ಲಕ್ಷ ವೆಚ್ಚದಲ್ಲಿ ಪಾಪೆತ್ತಿಮಾರು ಬರಿಮಾರು, ಕುಲ್ಲಾಜೆ ಲಾದ್ರಕೋಡಿ ರಸ್ತೆ, ಪಾಪರ್ಕಜೆ ಬೊಟ್ಟು ರಸ್ತೆ, ಪಾರ್ಪಕಜೆ ಮುಂಡೇವು ರಸ್ತೆ ಕಾಂಕ್ರೀಟ್ ಕರಣವನ್ನು ಉದ್ಘಾಟಿಸಿದರು. ಬರಿಮಾರು ಶಾಲೆ ಬಳಿ 10 ಲಕ್ಷ ರೂ ವೆಚ್ಚದ ರಸ್ತೆ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಿದರು.
ಈ ಸಂದರ್ಭ ಭಜನಾ ಮಂದಿರದಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಶಾಸಕ ರಾಜೇಶ್ ನಾಯ್ಕ್, ಮುಂದಿನ ಬಾರಿಯೂ ನಮ್ಮ ಪಕ್ಷವೇ ಅಧಿಕಾರಕ್ಕೆ ಬರುತ್ತದೆ ದಾರಿ ತಪ್ಪಿಸುವ ಹೇಳಿಕೆಗಳನ್ನು ಕೆಲವರು ಕೊಡುತ್ತಿದ್ದು, ಈಡೇರಿಸಲು ಅಸಾಧ್ಯವಾದ ಅವಾಸ್ತವಿಕ ಮಾಹಿತಿ ನೀಡಲಾಗುತ್ತಿದೆ ಎಂದರು. ಸಾಮಾನ್ಯ ಕಾರ್ಯಕರ್ತರ ಭಾವನೆಗಳಿಗೆ ಸ್ಪಂದಿಸಿ ಕೆಲಸ ಮಾಡುವ ಕಾರ್ಯವನ್ನು ಮಾಡಿದ್ದೇನೆ. ಜಗತ್ತು ಮೆಚ್ಚುವ ಕೆಲಸವನ್ನು ಕೋವಿಡ್ ಸಂದರ್ಭದಲ್ಲಿ ನರೇಂದ್ರ ಮೋದಿ ನೇತೃತ್ವದ ಅಡಳಿತದಿಂದಾಗಿ ಇವತ್ತು ನಾವು ಆರೋಗ್ಯವಂತರಾಗಿದ್ದೇವೆ. ನನಗೆ ಹಿಂದುತ್ವ ಮತ್ತು ಅಭಿವೃದ್ಧಿ ಮುಖ್ಯ. ಶಾಂತಿ ಕಾಪಾಡುವ ಆಡಳಿತ ನಡೆಸಿದ್ದು ಹಿಂದುತ್ವವಾಗಿದೆ. ಸಾವಿರದ ಐನೂರಕ್ಕೂ ಅಧಿಕ ರಸ್ತೆ ನಿರ್ಮಾಣವಾಗಿದ್ದು, ತನ್ನ ಅವಧಿಯಲ್ಲಿ ಯಾರಿಗೂ ತಾರತಮ್ಯ ಎಂದು ಮಾಡಿಲ್ಲ. ಓಟು ಹಾಕಿದವನು, ಹಾಕದವನು ಎಂಬ ಭೇದ ಮಾಡಿಲ್ಲ. ಯಾರಾದರೂ ಅಮಾಯಕರು ಬಲಿಯಾಗುವ ಪರಿಸ್ಥಿತಿ ಈಗಿಲ್ಲ, ಕಾನೂನು ಸುವ್ಯವಸ್ಥೆ ಕಾಪಾಡುವ ಕರ್ತವ್ಯ ಮಾಡಲಾಗಿದೆ ಎಂದರು.
ಪಂಚಾಯತ್ ಅಧ್ಯಕ್ಷರಾದ ಶಶಿಕಲಾ ಉಪಾಧ್ಯಕ್ಷರಾದ ಸದಾಶಿವ ಜಿ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಕಮಲಾಕ್ಷಿ ಕೆ ಪೂಜಾರಿ, ಪಂಚಾಯತ್ ಸದಸ್ಯರಾದ ಪುಷ್ಪಲತಾ, ವನಿತಾ ಧರಣ್, ಶ್ರುತಿ ಗೋಪುಕೋಡಿ, ಜಗದೀಶ್ ಶಿವಾಜಿನಗರ,ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಜಗದೀಶ್ ಬರಿಮಾರು, ಸೇವಾ ಸಹಕಾರಿ ಬ್ಯಾಂಕಿನ ಉಪಾಧ್ಯಕ್ಷರಾದ ಶಿವಾನಂದ ಕರ್ತಕೋಡಿ, ಬಾಳ್ತಿಲ ಮಹಾಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿ ಅಶ್ವತ್ಥ್ ಬರಿಮಾರು, ಮಂಡಲ ಕಾರ್ಯದರ್ಶಿ ಗಣೇಶ್ ರೈ ಮಾಣಿ ಚಂದ್ರಹಾಸ ಮಾಧುಗುರಿ,ಕೇಶವ ಅಲೈತ್ತಿಮಾರು, ಮೋಹನದಾಸ್ ಮುಳಿಬೈಲು ಕುರಮಜಲುಗುತ್ತು , ಶೇಖರ್ ಮುಳಿಬೈಲು,ವಸಂತ ಕಲ್ಲೆಟ್ಟಿ, ಧನಂಜಯ ಬಲ್ಯ, ನಾರಾಯಣ ಪೂಜಾರಿ, ಜಯಂತ್ ಮುಳಿಬೈಲು, ಬಾಲಕೃಷ್ಣ ಕಲ್ಲೆಟ್ಟಿ, ನಾಗೇಶ್ ಮುಳಿಬೈಲು, ವಿನಯ್ ಪಾಪೆತ್ತಿಮಾರು, ರಾಜೇಶ್ ಶಿವಾಜಿನಗರ, ಆನಂದ ಪಾಪೆತ್ತಿಮಾರು, ಪ್ರಶಾಂತ್ ಜೈನ್, ಬಾಲಕೃಷ್ಣ ಶಿವಾಜಿನಗರ ಯಾದವ ಬರಿಮಾರು ,ಜಯಂತ್ ಪಂಜುರ್ಲಿ ಗುಡ್ಡೆ ಉಪಸ್ಥಿತರಿದ್ದರು